ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಂಧಮಾಲ್ ಅತ್ಯಾಚಾರ; ಕೈಸ್ತ ಸನ್ಯಾಸಿನಿ ಅರ್ಜಿ ವಜಾ (Cuttack | sessions court | Kandhamal nun rape case | Church nun)
Bookmark and Share Feedback Print
 
ಕಂಧಮಾಲ್ ಕೋಮುಗಲಭೆಯ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದ ಕ್ರೈಸ್ತ ಸನ್ಯಾಸಿನಿಯ ಪ್ರಕರಣದ ವಿಚಾರಣೆಯನ್ನು ಮುಂದೂಡಲು ನಿರಾಕರಿಸಿರುವ ಕಟಕ್ ಸತ್ರ ನ್ಯಾಯಾಲಯವು, ಮತ್ತೊಂದು ಅವಕಾಶ ನೀಡಿದ್ದು ಅದರೊಳಗೆ ಕೋರ್ಟಿಗೆ ಬಂದು ಹೇಳಿಕೆ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಕ್ರೈಸ್ತ ಸನ್ಯಾಸಿನಿಯ ಮನವಿಯಂತೆ ಪ್ರಕರಣದ ವಿಚಾರಣೆಯನ್ನು ಮುಂದೂಡಲು ನಿರಾಕರಿಸಿದ ನ್ಯಾಯಾಧೀಶ ಬಿ.ಕೆ. ಮಿಶ್ರಾ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 5 ಮತ್ತು 6ಕ್ಕೆ ನಿಗದಿಪಡಿಸಿ ವಕೀಲರು ಸಿದ್ಧರಾಗಿರುವಂತೆ ಸೂಚಿಸಿತು.

22ರ ಹರೆಯದ ಕ್ರೈಸ್ತ ಸನ್ಯಾಸಿನಿ ತನ್ನ ಹೇಳಿಕೆಯನ್ನು ದಾಖಲು ಮಾಡಲು ನ್ಯಾಯಾಲಯಕ್ಕೆ ಆಗಮಿಸಬೇಕಿತ್ತು. ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಕ್ತಾಯ ಕಂಡಿದ್ದರಿಂದ ಸನ್ಯಾಸಿನಿಯನ್ನು ಕೋರ್ಟಿಗೆ ಬರುವಂತೆ ಸೂಚಿಸಲಾಗಿತ್ತು.

ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದ ನಂತರ ಆಕೆಗೆ ಬೇರೆ ಯಾವುದೇ ಹಾದಿಗಳು ಇಲ್ಲದೇ ಇರುವುದರಿಂದ ಸತ್ರ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.

2008ರ ಆಗಸ್ಟ್ ತಿಂಗಳಲ್ಲಿ ಕಂಧಮಾಲ್ ಹಿಂಸಾಚಾರ ನಡೆದ ವೇಳೆ ಬಾಲಿಗುಡಾ ಕ್ಯಾಥೊಲಿಕ್ ಚರ್ಚಿನ ಸನ್ಯಾಸಿನಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣವನ್ನು ಕಂಧಮಾಲ್‌ನಿಂದ ಕಟಕ್ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸನ್ಯಾಸಿನಿ ಮಾಡಿದ್ದ ಮನವಿಯನ್ನು ಒರಿಸ್ಸಾ ಹೈಕೋರ್ಟ್ ಪುರಸ್ಕರಿಸಿತ್ತು.

ಅದರಂತೆ ನ್ಯಾಯಾಲಯವು ಸಾಕ್ಷಿಗಳು ಮತ್ತು ದೂರುದಾರರು ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟವರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಕಟಕ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಮತ್ತು ವಿಚಾರಣೆಯನ್ನು ಮುಂದೂಡಬೇಕು ಎಂದು ಸನ್ಯಾಸಿನಿ ಮಾಡಿದ್ದ ಮನವಿಯನ್ನು ಒರಿಸ್ಸಾ ಹೈಕೋರ್ಟ್ ಬುಧವಾರವಷ್ಟೇ (ಸೆಪ್ಟೆಂಬರ್ 22) ತಳ್ಳಿ ಹಾಕಿತ್ತು.

ಈ ಹಂತದಲ್ಲಿ ಪ್ರಕರಣ ವಿಚಾರಣೆಗೆ ತಡೆ ಅಥವಾ ಮುಂದೂಡುವುದು ಸಾಧ್ಯವಿಲ್ಲ. ತಮ್ಮ ಏನೇ ಆತಂಕಗಳಿದ್ದರೂ ಅದನ್ನು ಸತ್ರ ನ್ಯಾಯಾಲಯದಲ್ಲಿ ತೋಡಿಕೊಳ್ಳಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು.

ಆಗಸ್ಟ್ 25ರಂದು ಕಂಧಮಾಲ್‌ ಜಿಲ್ಲೆಯಲ್ಲಿ ದೊಂಬಿ, ಹಿಂಸಾಚಾರಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೈಸ್ತ ಸನ್ಯಾಸಿನಿಯನ್ನು ಅತ್ಯಾಚಾರ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮೀ ಲಕ್ಷ್ಮಣಾನಂದ ಸರಸ್ವತಿ ಹತ್ಯೆಯಾದ ಎರಡು ದಿನಗಳ ನಂತರ ಈ ಘಟನೆ ನಡೆದಿತ್ತು.
ಸಂಬಂಧಿತ ಮಾಹಿತಿ ಹುಡುಕಿ