ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರ ಉದಾರತೆ; ಸೌಹಾರ್ದತೆಗೆ ಮತ್ತೊಂದು ಸೇರ್ಪಡೆ (Communal bond | Muslims | Kashmir Pandit | Kashmir valley)
Bookmark and Share Feedback Print
 
ಮತಾಂಧರು, ಮೂಲಭೂತವಾದಿಗಳು ಎಷ್ಟೇ ಕಿತ್ತಾಡುತ್ತಿದ್ದರೂ ಭಿನ್ನ ಧರ್ಮಗಳ ಜನ ಸೌಹಾರ್ದಯುತ ಜೀವನಕ್ಕೆ ಒಲವು ತೋರಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸುವ ಪ್ರಸಂಗವೊಂದು ಕಣಿವೆ ರಾಜ್ಯದಿಂದ ವರದಿಯಾಗಿದ್ದು, ಸಾವನ್ನಪ್ಪಿದ ಹಿಂದೂವೊಬ್ಬನನ್ನು ಮುಸ್ಲಿಮರು ದಹನ ಮಾಡಿದ್ದಾರೆ.
PR

ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಕ್ಕದ ಮನೆಯ 55ರ ಹರೆಯದ ಕೃಷ್ಣನ್ ಚಂದ್ ಪುರ್ಬಿ ಎಂಬ ಕಾಶ್ಮೀರಿ ಪಂಡಿತ ನಿನ್ನೆಯಷ್ಟೇ ಸಾವನ್ನಪ್ಪಿದ್ದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಲೆಕ್ಕಿಸದ ಸ್ಥಳೀಯ ಮುಸ್ಲಿಮರು, ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರ ನಡೆಸಿ ಸಮಾಜಕ್ಕೆ ಮಾದರಿಯಾದರು.

ಇದು ನಡೆದಿರುವುದು ಶ್ರೀನಗರ ಸಮೀಪದ ಚಿಂಕ್ರಾಲ್ ಮೊಹಲ್ಲಾ ಎಂಬ ಉಪನಗರದಲ್ಲಿ. ಕಟ್ಟಿಗೆಗಳನ್ನು ಸಂಗ್ರಹಿಸಿ ಚಿತೆ ನಿರ್ಮಿಸಿದ್ದಲ್ಲದೆ, ನಗರದ ಹೊರಗಿನಿಂದ ಪುರೋಹಿತರನ್ನೂ ಕರೆಸಿ, ಅವರ ಮಗಳು ಮತ್ತು ಸಂಬಂಧಿಕರನ್ನು ಸುರಕ್ಷಿತವಾಗಿ ಸ್ಥಳಕ್ಕೆ ಕರೆದುಕೊಂಡು ಬರುವುದು-- ಹೀಗೆ ಪ್ರತಿಯೊಂದು ಕಾರ್ಯದಲ್ಲೂ ಮುಸ್ಲಿಮರೇ ಮುಂದೆ ನಿಂತು ನೆರವೇರಿಸಿದ್ದಾರೆ.

ನೆರೆ-ಹೊರೆಯವರ ಬಗ್ಗೆ ಕೃಷ್ಣನ್ ಪುತ್ರಿ ಅನಿತಾ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ನಮಗೆಂದೂ ಅವರಿಂದ ತೊಂದರೆಯಂತೂ ಆಗಿಲ್ಲ. ನಮಗೆ ಸಾಕಷ್ಟು ಸಹಾಯವಾಗಿದೆ ಎಂದು ಆಕೆ ಹೇಳಿದ್ದಾರೆ.

ಕೃಷ್ಣನ್ ಮನೆ ಸಮೀಪದ ಶೌಕತ್ ಅಹ್ಮದ್ ಅವರಂತೂ ಈ ಕುಟುಂಬದ ಮೇಲೆ ಮಮಕಾರದ ಸುರಿಮಳೆಯನ್ನೇ ಸುರಿಸುತ್ತಾರೆ.

ಅವರು ನಮ್ಮ ಪ್ರೀತಿಪಾತ್ರರಾಗಿದ್ದವರು. ಶವ ಸಂಸ್ಕಾರಕ್ಕೆ 50,000 ಜನ ಬರಲು ಸಿದ್ಧತೆ ನಡೆಸಿದ್ದರು. ಆದರೆ ಇಲ್ಲಿ ನಿಷೇಧಾಜ್ಞೆ ಹೇರಲಾಗಿರುವುದರಿಂದ ಅದು ಸಾಧ್ಯವಾಗಲಿಲ್ಲ ಎಂದು ಅಹ್ಮದ್ ಹೇಳುತ್ತಾರೆ.

ಇಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕೆಲವು ಜನ ಎರಡು ಸಮುದಾಯಗಳ ನಡುವೆ ಭಿನ್ನಮತ ಸೃಷ್ಟಿಸಲು ಯತ್ನಿಸುತ್ತಾರೆ. ಆದರೆ ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ. ನಮ್ಮ ಸಂಬಂಧಗಳಲ್ಲಂತೂ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ ಎನ್ನುತ್ತಾರೆ ಇಲ್ಲೇ ಸಮೀಪದ ಚಮನ್ ಲಾಲ್ ಮಟ್ಟೂ.

ಮೂರು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯವನ್ನು ತೊರೆಯುವಂತೆ ಭಯೋತ್ಪಾದಕರು 90ರ ದಶಕದಲ್ಲಿ ಬಲವಂತ ಮಾಡಿದ ಹೊತ್ತಿನಲ್ಲೂ ಕದಲದೆ ರಾಜ್ಯದಲ್ಲೇ ಉಳಿದುಕೊಂಡಿದ್ದ ಕುಟುಂಬ ಕೃಷ್ಣನ್ ಅವರದ್ದು.
ಸಂಬಂಧಿತ ಮಾಹಿತಿ ಹುಡುಕಿ