ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ: 110 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು (Criminal charges | MLAs | Bihar Assembly)
Bookmark and Share Feedback Print
 
ಬಿಹಾರ ವಿಧಾನಸಭೆಯಲ್ಲಿ ಕೊಲೆ, ಅಪಹರಣ ಮತ್ತು ಹಪ್ತಾವಸೂಲಿ ಪ್ರಕರಣಗಳಲ್ಲಿ ಭಾಗಿಯಾದ 110 ಶಾಸಕರ ವಿರುದ್ಧ ಕ್ರಿಮಿನಲ್ ದೂರುಗಳು ದಾಖಲಾಗಿವೆ. ಆದರೆ, ರಾಜಕೀಯ ಪ್ರಭಾವದಿಂದಾಗಿ ಪ್ರಕರಣಗಳು ತನಿಖೆ ನಡೆಯದೇ ನೆನೆಗುದಿಗೆ ಬಿದ್ದಿವೆ ಎಂದು ಅಧ್ಯಯನ ಸಂಸ್ಥೆಯೊಂದು ವರದಿ ಮಾಡಿದೆ.

ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನ್ಯಾಷನಲ್ ಎಲೆಕ್ಷನ್ ವಾಚ್ ಅಧ್ಯಯನ ಸಂಸ್ಥೆ , ಬಿಹಾರ ವಿಧಾನಸಭೆಯ 243 ಶಾಸಕರಲ್ಲಿ 109 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ

ವಿಧಾನಸಭೆಯ 64 ಶಾಸಕರು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದರೂ ರಾಜಕೀಯ ಪ್ರಭಾವವನ್ನು ಬಳಸಿ ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2005ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 919 ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ 358 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾದ ಬಗ್ಗೆ ವಿವಿರಗಳನ್ನು ಸಲ್ಲಿಸಿದ್ದಾರೆ. 213 ಅಭ್ಯರ್ಥಿಗಳು ಕೊಲೆ , ಅಪಹರಣ,ಹಪ್ತಾವಸೂಲಿ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ