ಕಾಶ್ಮಿರ ಕಣಿವೆಯ ಹಲವು ಜಿಲ್ಲೆಗಳ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದ್ದರಿಂದ, ಕರ್ಫ್ಯೂ ಹಿಂತೆಗೆಯಲಾಗಿದ್ದು,ಜನಜೀವನ ಸಾಮಾನ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮಿರದ ಅನಂತ್‌ನಾಗ್, ಪುಲ್ವಾಮಾ, ಕುಲ್ಗಾಮ್, ಶೋಪಿಯಾ ಮತ್ತು ಆವಂಟಿಪುರ ಪಟ್ಟಣಗಳು ಹಾಗೂ ಉತ್ತರ ಕಾಶ್ಮಿರದ ಹಂಡಾವರಾ ಪಟ್ಟಣಗಳಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆದರೆ. ಕೇಂದ್ರ ಕಾಶ್ಮಿರದ ಬುಡ್‌ಗಾಮ್ ಜಿಲ್ಲೆಯಲ್ಲಿ ಸೆಕ್ಷನ್ 144 ಮುಂದುವರಿಸಲಾಗಿದ್ದು, ಮುಂಬರುವ ಕೆಲ ದಿನಗಳವರೆಗೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.