ಬದೌನ್(ಉತ್ತರಪ್ರದೇಶ), ಭಾನುವಾರ, 26 ಸೆಪ್ಟೆಂಬರ್ 2010( 15:25 IST )
PTI
ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಮದುವೆಯ ವರದಿಗಳು ಮುಂದುವರಿಯುತ್ತಾ ಸಾಗಿವೆ. ಆದರೆ ಸಹೋದರ ಹಾಗೂ ಬಿಜೆಪಿ ಯುವ ಮುಖಂಡ ವರುಣ್ ಗಾಂಧಿಯ ಮದುವೆಯ ಗಂಟೆಗಳು ಬಾರಿಸಿತೊಡಗಿವೆ.
ಪುತ್ರ ವರುಣಗಾಂಧಿ ಬೆಂಗಾಲಿ ಯುವತಿ ಯಾಮಿನಿಯೊಂದಿಗೆ ವರ್ಷಾಂತ್ಯದೊಳಗೆ ಮದುವೆಯಾಗಲಿದ್ದಾರೆ ಎಂದು ಉತ್ತರಪ್ರದೇಶದ ಆನೋಲಾ ಕ್ಷೇತ್ರದ ಸಂಸದೆಯಾಗಿರುವ ಮೇನಕಾ ಗಾಂಧಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಯಾಮಿನಿಯವರೊಂದಿಗೆ ನಿಶ್ಚಿತಾರ್ಥವಾಗಲಿದ್ದು, ವರ್ಷಾಂತ್ಯದೊಳಗೆ ಮದುವೆ ನಡೆಯಲಿದೆ ಎಂದು ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿಯಿಂದ ದೂರವಾದ ಸೊಸೆ ಮೇನಕಾ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಸಂಪೂರ್ಣ ಗಾಂಧಿ ಕುಟುಂಬಕ್ಕೆ ಮದುವೆಯಲ್ಲಿ ಪಾಲ್ಗೊಳ್ಳಲು ಅಹ್ವಾನ ನೀಡಲಾಗುವುದು ಎಂದು ಹೇಳಿದ್ದಾರೆ.
1997ರಲ್ಲಿ ನಡೆದ ಪ್ರಿಯಾಂಕಾ ಗಾಂಧಿ ಮದುವೆಯಲ್ಲಿ, ಮೇನಕಾ ಪುತ್ರ ವರುಣ್ ಗಾಂಧಿ ಹಾಜರಾಗಿ ಉಭಯ ಕುಟುಂಬಗಳ ಮಧ್ಯದ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಿದ್ದರು.
ಫಿಲಿಭಿಟ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವರುಣ್ ಗಾಂಧಿ, ಕಳೆದ ಮಾರ್ಚ್ ತಿಂಗಳ ಅವಧಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.