ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ತೀರ್ಪನ್ನು ಮುಂದೂಡುವಂತೆ ಸಲ್ಲಿಸಿದ ಅರ್ಜಿಯನ್ನು ತೆರುವುಗೊಳಿಸಿದ್ದರಿಂದ, 60 ವರ್ಷಕ್ಕೂ ಹಳೆಯದಾದ ರಾಮಜನ್ಮಭೂಮಿ-ಬ್ರಾಬ್ರಿ ಮಸೀದಿ ವಿವಾದ ಕುರಿತಂತೆ ಅಲಹಾಬಾದ್ ಹೈಕೋರ್ಟ್ ನಾಳೆ ತೀರ್ಪು ನೀಡಲಿದೆ.
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಬೆಂಚ್‌ನ ಮೂವರು ನ್ಯಾಯಾಧೀಶರ ಸಮಿತಿ, ನಾಳೆ ಮಧ್ಯಾಹ್ನ 3.30 ಗಂಟೆಗೆ ತೀರ್ಪನ್ನು ತೀರ್ಪು ನೀಡುವ ಸಾಧ್ಯತೆಗಳಿವೆ ಎಂದು ನ್ಯಾಯಾಲಯದ ಅಧಿಕಾರಿ ಹರಿ ಶಂಕರ್ ದುಬೆ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ಮೂವರು ನ್ಯಾಯಾಧೀಶರ ಸಮಿತಿ, ನಿವೃತ್ತ ಅಧಿಕಾರಿ ರಮೇಶ್ ಚಂದ್ರ ತ್ರಿಪಾಠಿ ಎನ್ನುವವರು ಅಯೋಧ್ಯೆ ತೀರ್ಪು ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.
ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ವಿವಾದ ಕುರಿತಂತೆ ಸುಮಾರು ಎರಡುವರೆ ಗಂಟೆಗಳ ವಿಚಾರಣೆಯನ್ನು ಆಲಿಸಿದ ನಂತರ, ಮಧ್ಯಾಹ್ನ 2 ಗಂಟೆಯ ವೇಳೆಗೆ ಮನವಿದಾರರ ಅರ್ಜಿಯನ್ನು ವಜಾಗೊಳಿಸಿ, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ನೀಡಬಹುದು ಎಂದು ಆದೇಶ ಹೊರಡಿಸಿತ್ತು.
ನಾಳೆ ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಪ್ಯಾರಾ ಮಿಲಿಟರಿ ,ಅರೆಸೇನಾಪಡೆಗಳು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.