ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿಯನ್ನು ಕಂಡರೆ ಕಾಂಗ್ರೆಸ್ಸಿಗರಿಗೆ ಹೊಟ್ಟೆ ಉರಿ: ಬಿಜೆಪಿ (Congress | Narendra Modi | New York | OFBJP)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕಂಡರೆ ಅಸೂಯೆ. ಅದೇ ಕಾರಣಕ್ಕಾಗಿ ಸಿಬಿಐ ಮೂಲಕ ಅವರಿಗೆ ಕಿರುಕುಳ ನೀಡಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ 'ಸಾಗರೋತ್ತರ ಗೆಳೆಯರ ಭಾರತೀಯ ಜನತಾ ಪಕ್ಷ' ಸದಸ್ಯರು ನ್ಯೂಯಾರ್ಕಿನ ಭಾರತೀಯ ರಾಯಭಾರ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದಾರೆ.

'ನರೇಂದ್ರ ಮೋದಿಯವರನ್ನು ಪೀಡಿಸುವುದನ್ನು ನಿಲ್ಲಿಸಿ', 'ಸಿಬಿಐ (ಕೇಂದ್ರೀಯ ತನಿಖಾ ದಳ) ದುರ್ಬಳಕೆಯನ್ನು ನಿಲ್ಲಿಸಿ' ಮತ್ತು 'ಸಿಬಿಐ ಕಾಂಗ್ರೆಸ್ ಬ್ಯೂರೋ ಆಫ್ ಇಂಟಿಮಿಡೇಷನ್ (ಕಾಂಗ್ರೆಸ್ ಬೆದರಿಕಾ ದಳ) ಆಗಿದೆ' ಎಂಬ ಭಿತ್ತಿಪತ್ರಗಳನ್ನು ಹಿಡಿದ 'ಸಾಗರೋತ್ತರ ಗೆಳೆಯರ ಭಾರತೀಯ ಜನತಾ ಪಕ್ಷ'ದ (ಒಎಫ್‌ಬಿಜೆಪಿ) ಸದಸ್ಯರು ಪ್ರತಿಭಟನೆ ನಡೆಸಿದರು.
PR

ನರೇಂದ್ರ ಮೋದಿಯವರ ಜನಪ್ರಿಯತೆಯ ಬಗ್ಗೆ ಕಾಂಗ್ರೆಸ್ ಸರಕಾರ ಕರುಬುತ್ತಿದೆ. ಅವರನ್ನು ಮಟ್ಟ ಹಾಕಬೇಕು ಮತ್ತು ಅವರ ಘನತೆಗೆ ಸಾರ್ವಜನಿಕರ ಕಣ್ಣಿನಲ್ಲಿ ಮಸಿ ಬಳಿಯಬೇಕು ಎಂಬ ನಿಟ್ಟಿನಲ್ಲಿ ಅದು ಸಿಬಿಐಯನ್ನು ಬಳಕೆ ಮಾಡುತ್ತಿದೆ ಎಂದು ಆಂಧ್ರಪ್ರದೇಶ ಬಿಜೆಪಿ ಉಪಾಧ್ಯಕ್ಷೆಯಾಗಿರುವ ಡಾ. ವಿಜಯ ಲಕ್ಷ್ಮಿ ಆರೋಪಿಸಿದ್ದಾರೆ. ಅವರು ಪ್ರಸಕ್ತ ಅಮೆರಿಕಾ ಪ್ರವಾಸದಲ್ಲಿದ್ದಾರೆ.

ಒಎಫ್‌ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಹಿರಿಯ ಸಲಹೆಗಾರ ಡಾ. ಸುಧಾಕರ ರೆಡ್ಡಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ನಂತರ ಮನವಿ ಪತ್ರವೊಂದನ್ನು ರಾಯಭಾರ ಕಚೇರಿಯ ಅಧಿಕಾರಿಗಳ ಮೂಲಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸಲ್ಲಿಸಲಾಯಿತು.

ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅವರು ರಾಷ್ಟ್ರವ್ಯಾಪಿ ಖ್ಯಾತಿ ಹೊಂದಿದವರು. ಅದನ್ನು ತಡೆಯುವುದು ಮತ್ತು ಅವರ ಹೆಸರಿಗೆ ಮಸಿ ಬಳಿಯುವುದು ಯುಪಿಎ ಸರಕಾರದ ಉದ್ದೇಶ ಎಂಬುದು ನಮ್ಮ ಸಂಶಯ ಎಂದು ಸಂಘಟನೆ ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ.

ಅಮೆರಿಕಾದಲ್ಲಿ ಈ ಪ್ರತಿಭಟನೆ ನಡೆದಿರುವುದು ಭಾನುವಾರ. ಆ ದಿನ ರಜಾದಿನವಾಗಿರುವ ಕಾರಣ ಹೆಚ್ಚಿನ ಸದಸ್ಯರಿಗೆ ಭಾಗವಹಿಸಲು ಸುಲಭವಾಗುತ್ತದೆ ಎಂಬ ನಿಟ್ಟಿನಲ್ಲಿ ಭಾನುವಾರ ನಡೆಸಲಾಗಿತ್ತು ಎಂದು ರೆಡ್ಡಿ ತಿಳಿಸಿದ್ದಾರೆ.

ಸೋನಿಯಾ ಗಾಂಧಿಯವರ ನೇತೃತ್ವದ ಯುಪಿಎ ಸರಕಾರವು ಮೋದಿಯವರ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಯತ್ನಿಸುತ್ತಿರುವುದು ತೀರಾ ನಾಚಿಕೆಗೇಡಿನ ವಿಚಾರ ಎಂದು ಸಂಘಟನೆಯ ಮತ್ತೊಬ್ಬ ನಾಯಕ ನಾರಾಯಣ್ ಕಟಾರಿಯಾ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ