ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ:ದೇಶಾದ್ಯಂತ ಕಟ್ಟೆಚ್ಚರ (Ramjanmabhoomi | Babri masjid | Court)
Bookmark and Share Feedback Print
 
PTI
ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಒಡೆತನಕ್ಕೆ ಸಂಬಧಿಸಿದ ಪ್ರಕರಣಕ್ಕೆ ಇಂದು ತೆರೆಬೀಳಲಿದ್ದು, ಅಲಹಾಬಾದ್‌ ನ್ಯಾಯಾಲಯದ ಐತಿಹಾಸಿಕ ತೀರ್ಪಿಗಾಗಿ ಇಡೀ ದೇಶ ಎದುರು ನೋಡುತ್ತಿದ್ದು, ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿಂದಾಗಿ ದೇಶಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಅಲಹಾಬಾದ್‌ನ ಲಕ್ನೋ ಪೀಠ, ಇಂದು ಮಧ್ಯಾಹ್ನ ತೀರ್ಪು ಪಕ್ರಟಿಸಲಿರುವ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ವಹಿಸಲಾಗಿದೆ. ಹಾಗೂ ನ್ಯಾಯಾಲಯದ ಆವರಣದ ಸುತ್ತಲಿನ ಪ್ರದೇಶಕ್ಕೆ ನಿರ್ಭಂಧ ಹೇರಲಾಗಿದೆ.

ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಪ್ರಕಟಿಸಲಿದ್ದು, ತೀರ್ಪು ಪ್ರಕಟವಾದ ನಂತರ ವಿಜಯೋತ್ಸಾಹ ಅಥವಾ ಹಿಂಸಾಚಾರ ಪ್ರದರ್ಶಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ, ದೇಶದ ಹಲವಾರು ಗಣ್ಯರು ನ್ಯಾಯಾಲಯದ ತೀರ್ಪನ್ನು ಗೌರವಿಸಿ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ರಾಮಜನ್ಮಭೂಮಿ-ಬಾಬ್ರಿಮಸೀದಿ ನಿವೇಶನದ 27 ಎಕರೆ ಭೂಮಿಯ 1528 ಕ್ಕಿಂತ ಮುಂಚೆ ದೇವಾಲಯವಿತ್ತೆ ಎನ್ನುವ ಪ್ರಶ್ನೆ ಸೇರಿದಂತೆ ಹಲವಾರು ವಿವಾದಿತ ಅಂಶಗಳನ್ನು ಪರಿಶೀಲಿಸಿ ನ್ಯಾಯಾಲಯ ತೀರ್ಪು ನೀಡಲಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ