ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ತ್ರೀಯರ ದೇವಳ ಪ್ರವೇಶಕ್ಕೆ ನಿಷೇಧ, ಉಲ್ಲಂಘಿಸಿದರೆ ದಂಡ! (Ambala temple | bars women | imposes fine | Narinder Sharma)
Bookmark and Share Feedback Print
 
ಆಘಾತಕಾರಿ ಸುದ್ದಿಯಿದು. ಸಾಮಾನ್ಯವಾಗಿ ಹಿಂದೂ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ. ಆದರೆ ಹರ್ಯಾಣದಲ್ಲಿನ ಅಂಬಾಲಾ ಜಿಲ್ಲೆಯಲ್ಲಿ ಸ್ತ್ರೀಯರು ದೇವಾಲಯ ಪ್ರವೇಶಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ ಭಾರೀ ದಂಡವನ್ನೂ ಹೇರಲಾಗುತ್ತದೆ.
PR

ವಿಚಿತ್ರವೆಂದರೆ ಇದನ್ನು ಸ್ಥಳೀಯ ಕೆಲವು ಮಹಿಳೆಯರು ಕೂಡ ಬೆಂಬಲಿಸುತ್ತಿರುವುದು. ಸ್ತ್ರೀಯರು ದೇವಸ್ಥಾನದೊಳಗೆ ಮಾಟ-ಮಂತ್ರ ಮಾಡುತ್ತಾರೆ ಎಂದು ಆರೋಪಿಸಿ ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿರುವ ಕ್ರಮದ ಹಿನ್ನೆಲೆಯಲ್ಲಿ ಜನರಲ್ಲಿ ಕೂಡ ಭಿನ್ನಾಭಿಪ್ರಾಯಗಳು ಕಂಡು ಬಂದಿವೆ.

ಇಲ್ಲಿಗೆ ಪ್ರತಿದಿನ ಬರುವ ಮಹಿಳೆಯರೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಯಾಕೆ ಹೀಗೆ ಮಾಡಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಿಷೇಧವನ್ನು ಹಿಂದಕ್ಕೆ ಪಡೆಯಬೇಕು' ಎಂದು ಕವಾಲ್ಜಿತ್ ಕೌರ್ ಎಂಬಾಕೆ ಪ್ರತಿಕ್ರಿಯಿಸಿದ್ದಾರೆ.

ನೂತನ ಆದೇಶದ ಪ್ರಕಾರ ಮಹಿಳೆಯರು ಈ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ನಿಷೇಧವನ್ನು ಉಲ್ಲಂಘಿಸುವವರಿಗೆ 500 ರೂಪಾಯಿ ದಂಡ ಹಾಕಲಾಗುತ್ತದೆ ಎಂದು ದೇವಸ್ಥಾನದ ಹೊರಗಿನ ಪ್ರಧಾನ ದ್ವಾರದಲ್ಲಿ ಬೋರ್ಡ್ ಹಾಕಲಾಗಿದೆ.

ಇದನ್ನು ದೇವಳದ ಪ್ರಧಾನ ಅರ್ಚಕ ನರೀಂದರ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. 'ಮಹಿಳೆಯರಿಗೆ ಧಾರ್ಮಿಕ ಶ್ರದ್ಧೆಯಿಲ್ಲ. ಅವರು ಇಲ್ಲಿಗೆ ಬರುವುದೇ ಮಾಟ-ಮಂತ್ರಗಳನ್ನು ಮಾಡಲು. ಹೀಗೆ ಮಾಡುವ ಕೆಲವೇ ಮಹಿಳೆಯರನ್ನು ತಡೆಯುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲಾ ಮಹಿಳೆಯರಿಗೂ ದೇವಳ ಪ್ರವೇಶ ನಿಷೇಧಿಸಲಾಗಿದೆ' ಎಂದು ಹೇಳಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯತ್‌ನ ಮಹಿಳಾ ಸದಸ್ಯೆಯೊಬ್ಬರು ಅರ್ಚಕರ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

ಗ್ರಾಮದ ಒಳಿತಿಗಾಗಿ ಹೀಗೆ ಮಾಡಲಾಗಿದೆ. ಸರಿಯಾದ ನಿರ್ಧಾರವಿದು. ನಾನಿದನ್ನು ಬೆಂಬಲಿಸುತ್ತೇನೆ ಎಂದು ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಪೂಜಾ ರಾಣಿ ಹೇಳಿಕೊಂಡಿದ್ದಾರೆ.

ಆದರೆ ಕವಾಲ್ಜಿತ್ ಕೌರ್ ಅವರಂತಹ ಮಹಿಳೆಯರು ತಮ್ಮ ಹೋರಾಟವನ್ನು ಕೈ ಬಿಟ್ಟಿಲ್ಲ. ದೇವಳಕ್ಕೆ ಮಹಿಳೆಯರನ್ನು ಪ್ರವೇಶಿಸಲು ಅವಕಾಶ ನೀಡುವವರೆಗೆ ನನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ