ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎಗೆ ಜನರ ತಿರಸ್ಕಾರ, ಬಿಜೆಪಿ ಅಧಿಕಾರಕ್ಕೆ: ಗಡ್ಕರಿ (UPA | BJP | Nitin Gadkari | Sonia Gandhi)
Bookmark and Share Feedback Print
 
ದೇಶದಲ್ಲಿ ಕಾಣಿಸಿಕೊಂಡಿರುವ ಹತ್ತು ಹಲವು ಸಮಸ್ಯೆಗಳಿಗೆ ಯುಪಿಎ ಸರಕಾರದ ನೀತಿಗಳೇ ಹೊಣೆ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, 2014ರಲ್ಲಿ ಕೇಸರಿ ಪಾಳಯವೇ ಕೇಂದ್ರದಲ್ಲಿ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅಧಿಕಾರಕ್ಕೆ ಬಂದಾಗಲೆಲ್ಲ ದೇಶದಲ್ಲಿ ಬೆಲೆ ಮತ್ತು ಹಣದುಬ್ಬರ ಏರಿಕೆಯಾಗುತ್ತದೆ. ಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುವಿಕೆ ಹೆಚ್ಚುತ್ತದೆ. ನಿರುದ್ಯೋಗ ಪ್ರಮಾಣ ತಾರಕಕ್ಕೇರುತ್ತದೆ. ಯುಪಿಎ ಸರಕಾರದ ಮತಬ್ಯಾಂಕ್ ರಾಜಕಾರಣವು ದೇಶವನ್ನು ಅಪಾಯದಲ್ಲಿ ತಂದಿಟ್ಟಿದೆ ಎಂದು ರ‌್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನೀತಿಗಳಿಂದಾಗಿ ಜನತೆ ರೋಸಿ ಹೋಗಿದ್ದಾರೆ. ಇದರಿಂದಾಗಿ ಮುಂದಿನ ಚುನಾವಣೆಗಳಲ್ಲಿ ಪರ್ಯಾಯ ಸರಕಾರದ ಅವಕಾಶ ಬಿಜೆಪಿಗೆ ಹೆಚ್ಚಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ರಮ ವಿದೇಶಿಗರು ಇಲ್ಲದ ಮತ್ತು ಬಡತನ ಮುಕ್ತಗೊಳಿಸುವ ಭಾರತ ಸೃಷ್ಟಿಯ ಭರವಸೆ ನಾವು ಕೊಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಬಡತನದ ಕಾರಣದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ. ಅಲ್ಲದೆ ಯುವ ಜನತೆಗೆ ಬೇಕಾದಷ್ಟು ಉದ್ಯೋಗವನ್ನು ಕೂಡ ಸೃಷ್ಟಿಸುತ್ತೇವೆ ಎಂದರು.

ಕೇಸರಿ ಪಕ್ಷವು ಮುಸ್ಲಿಂ ವಿರೋಧಿ ಎಂಬ ವಾದವನ್ನು ತಳ್ಳಿ ಹಾಕಿದ ಗಡ್ಕರಿ, ಬಿಜೆಪಿಯು ಭಾರತದ ಮುಸ್ಲಿಮರ ವಿರೋಧಿಯಾಗಿದ್ದರೆ, ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಅಟಲ್ ಬಿಹಾರಿ ವಾಜಪೇಯಿಯವರು ಹೇಗೆ ನೇಮಕ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಅಸ್ಸಾಂ‌ನಲ್ಲಿ ಕಾಂಗ್ರೆಸ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಳೆದ 10 ವರ್ಷಗಳಿಂದ ಸ್ಥಳೀಯ ಜನರ ಹಿತಾಸಕ್ತಿಗಳನ್ನು ಬಲಿಕೊಟ್ಟಿರುವ ಇಲ್ಲಿನ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ತೋಯ್ದು ಹೋಗಿದೆ ಎಂದರು.

ಅಲ್ಲದೆ ರಾಜ್ಯದ ಸಮಸ್ಯೆಗಳಾದ ಪ್ರವಾಹ, ಒಳ ನುಸುಳುವಿಕೆ ಮತ್ತು ನಿರುದ್ಯೋಗಗಳನ್ನು ಪರಿಹರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಮ್ ರಾಜ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಬಿಜೆಪಿಯ ಗೆಲುವನ್ನು ಖಚಿತಪಡಿಸಿ ಎಂದು ಜನತೆಗೆ ಮನವಿ ಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ