ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಹಿತಕರ ಘಟನೆ ನಡೆದರೆ ಕೇಂದ್ರವೇ ಹೊಣೆ: ಮಾಯಾವತಿ (Mayawati | Ayodhya verdict | Allahabad High Court | Uttar Pradesh)
Bookmark and Share Feedback Print
 
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವು ಬೇಡಿಕೆಯಿಟ್ಟಷ್ಟು ರಕ್ಷಣಾ ಪಡೆಗಳನ್ನು ಕೇಂದ್ರ ಸರಕಾರವು ಒದಗಿಸದೇ ಇರುವುದರಿಂದ, ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ತಾನು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

ಕೇಂದ್ರದ 642 ತುಕಡಿಗಳು ಬೇಕೆಂದು ರಾಜ್ಯವು ಯುಪಿಎ ಸರಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ ಕೇವಲ 52 ಸೇನಾದಳಗಳನ್ನು ಮಾತ್ರ ರಾಜ್ಯದಲ್ಲಿ ನಿಯೋಜಿಸಲಾಗಿದೆ. ಇದು ಸಾಕಾಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಯಾವುದೇ ರೀತಿಯ ದುಷ್ಕೃತ್ಯಗಳು ನಡೆದಲ್ಲಿ ಅದಕ್ಕೆ ಕೇಂದ್ರವೇ ಸಂಪೂರ್ಣ ಹೊಣೆಗಾರನಾಗಬೇಕಾಗುತ್ತದೆ ಎಂಬ ಮಾಯಾವತಿಯವರ ಹೇಳಿಕೆಯನ್ನು ರಾಜ್ಯ ಸಂಪುಟ ಕಾರ್ಯದರ್ಶಿ ಶಶಾಂಕ್ ಶೇಖರ್ ಸಿಂಗ್ ಓದಿ ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠದ ತೀರ್ಪಿನ ನಂತರದ ಸಂಭಾವ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಕಷ್ಟು ಕೇಂದ್ರೀಯ ಪಡೆಗಳನ್ನು ರಾಜ್ಯಕ್ಕೆ ಕಳುಹಿಸಬೇಕು ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮುಖ್ಯಮಂತ್ರಿಯವರು ಮನವಿ ಮಾಡಿದ್ದರು.

ಆದರೆ ಕೇಂದ್ರವು ಮುಖ್ಯಮಂತ್ರಿಯವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಉತ್ತರ ಪ್ರದೇಶ ಆರೋಪಿಸಿದೆ.

ಉತ್ತರ ಪ್ರದೇಶದಲ್ಲಿ 1.90 ಲಕ್ಷ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ, ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಇದು ಸಾಕು ಎಂಬ ಕೇಂದ್ರ ಗೃಹಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಯಾವತಿ, ಅವರ ಹೇಳಿಕೆ ವಾಸ್ತವತೆಗಿಂತ ದೂರದಲ್ಲಿದೆ ಎಂದಿದ್ದಾರೆ.

ಹೆಚ್ಚುವರಿ ಪಡೆಗಳಿಗಾಗಿ ಇಟ್ಟಿರುವ ಬೇಡಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, 2007ರಲ್ಲಿ ಶಾಂತಿಯುತ ಚುನಾವಣೆ ನಡೆಯಬೇಕೆಂದು ಕೇಂದ್ರ ಸರಕಾರ 700 ಅರೆಸೇನಾ ಪಡೆಗಳ ತುಕಡಿಗಳನ್ನು ನೇಮಿಸಿದ್ದನ್ನು ನೆನಪಿಸಿದರು.

ಈಗಿನ ಪರಿಸ್ಥಿತಿಯನ್ನು ಅವಲೋಕನ ನಡೆಸಿದಾಗ, ನಮಗೆ ಹೆಚ್ಚಿನ ಪ್ರಮಾಣದ ಸೇನಾದಳಗಳ ಅಗತ್ಯವಿತ್ತು. ಹಾಗೊಂದು ವೇಳೆ ರಕ್ಷಣಾ ಪಡೆಗಳ ಕೊರತೆಯಿಂದ ಏನಾದರೂ ಸಂಭವಿಸಿದರೆ ಅದಕ್ಕೆ ಕೇಂದ್ರವೇ ಜವಾಬ್ದಾರ ಎಂದಿರುವ ಮುಖ್ಯಮಂತ್ರಿ, ಸಂಭಾವ್ಯ ಕೋಮು ಉದ್ವಿಗ್ನತೆಯನ್ನು ಹತ್ತಿಕ್ಕಲು ರಾಜ್ಯವು ಆಗಸ್ಟ್ 6ರಂದು ಕೇಂದ್ರದ 458 ತುಕಡಿಗಳು ಬೇಕೆಂದು ಬೇಡಿಕೆಯಿಟ್ಟಿತ್ತು; ಜತೆಗೆ ಸೆಪ್ಟೆಂಬರ್ 1ರಂದು ಅಯೋಧ್ಯೆಯ ವಿವಾದಿತ ಸ್ಥಳದ ಭದ್ರತೆಗಾಗಿ 143 ತುಕಡಿಗಳನ್ನು ಕೇಳಿಕೊಂಡಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ