ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿ: ಸುನ್ನಿ ವಕ್ಫ್ ಮಂಡಳಿ (Ayodhya verdict | Sunni Waqf Board | Supreme Court | Allahabad HC)
Bookmark and Share Feedback Print
 
ಅಯೋಧ್ಯೆಯ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ, ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಪ್ರಕಟಿಸಿದೆ.

ವಿವಾದಿತ ಅಯೋಧ್ಯೆಯ ಸ್ಥಳವನ್ನು ಮೂರು ವಿಭಾಗಗಳನ್ನಾಗಿಸಿ, ಅದರ ಒಂದು ಭಾಗವನ್ನು ವಕ್ಫ್ ಮಂಡಳಿಗೆ ಹೈಕೋರ್ಟ್ ನೀಡುವ ತೀರ್ಪನ್ನು ಪ್ರಕಟಿಸಿತ್ತು. ಹಿಂದೂ - ಮುಸ್ಲಿಮರಿಗೆ ವಿವಾದಿತ ಜಾಗವನ್ನು ಹಂಚಿಕೆ ಮಾಡಿರುವ ಉಚ್ಚ ನ್ಯಾಯಾಲಯದ ತೀರ್ಪು ನಮಗೆ ಸ್ವೀಕಾರಾರ್ಹವಲ್ಲ ಎಂದು ವಕ್ಫ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸುನ್ನಿ ವಕ್ಫ್ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ವಿವಾದಿತ ಜಾಗವು ರಾಮ ಜನ್ಮಭೂಮಿ ಮತ್ತು ಹಿಂದೂಗಳು ಇಲ್ಲಿ ಅಪಾರ ಭಕ್ತಿಭಾವವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು.

1961ರ ಡಿಸೆಂಬರ್ 18ರಂದು ಅಯೋಧ್ಯೆಯ ಡಿಕ್ಲರೇಶನ್ ಮತ್ತು ಒಡೆತನವನ್ನು ತನಗೆ ಹಸ್ತಾಂತರಿಸಬೇಕು ಎಂದು ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಪ್ರಕರಣ ದಾಖಲಿಸಿತ್ತು.

ವಿವಾದಿತ ಮಸೀದಿಯ ಸುತ್ತ ಸ್ಮಶಾನ ಇತ್ತು ಎಂದು ವಾದಿಸಿದ್ದ ವಕ್ಫ್ ಮಂಡಳಿಯ ಅರ್ಜಿಯನ್ನು ತ್ರಿಸದಸ್ಯ ಪೀಠವು ತಿರಸ್ಕರಿಸಿತ್ತು. ವಿವಾದಿತ ಸ್ಥಳವನ್ನು ಹಂಚಿಕೆ ಮಾಡಿರುವ ಕ್ರಮವೂ ಸಮ್ಮತವಲ್ಲ. ಈ ಎರಡು ಕಾರಣಗಳನ್ನು ಮುಂದಿಟ್ಟಿರುವ ವಕ್ಫ್ ಮಂಡಳಿ, ತಾನು ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

ತೀರ್ಪಿನ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ. ಆದರೆ ನಾವು ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುತ್ತಿದ್ದೇವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕೀಲ ಜಪರ್ಯಾಬ್ ಜಿಲಾನಿ ಹೇಳಿದ್ದಾರೆ.

ತೀರ್ಮಾನವು ಯಾವುದೇ ಅಸಮಾಧಾನಕ್ಕೆ ಕಾರಣವಾಗಬಾರದು. ಜನತೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಇದನ್ನು ಬೀದಿಗಳಿಗೆ ತರುವುದಿಲ್ಲ ಎಂಬ ಭರವಸೆ ನಮ್ಮಲ್ಲಿದೆ ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ