ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆಯೇ ರಾಮ ಜನ್ಮಭೂಮಿ, ಮಸೀದಿ ಅನ್ಇಸ್ಲಾಮಿಕ್ (Ayodhya verdict | Ram Janmabhoomi | Babri Masjid | Allahabad high court)
Bookmark and Share Feedback Print
 
ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಕುರಿತ ವಿವಾದದ ತೀರ್ಪು ನೀಡುತ್ತಾ ಅಲಹಾಬಾದ್ ಹೈಕೋರ್ಟ್‌ನ ಲಖನೌ ತ್ರಿಸದಸ್ಯ ಪೀಠದ ನ್ಯಾಯಾಧೀಶ ಧರ್ಮವೀರ ಶರ್ಮಾ ಅವರು, ಬಾಬರನು ಇಸ್ಲಾಂ ನಿಯಮಾವಳಿಗಳಿಗೆ ವಿರುದ್ಧವಾಗಿ ಈ ಕಟ್ಟಡವನ್ನು ಕಟ್ಟಿದ್ದುದರಿಂದಾಗಿ, ಅದು ಮಸೀದಿ ಆಗಿರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಧರ್ಮವೀರ ಶರ್ಮಾ ಅವರ ತೀರ್ಪಿನ ಪ್ರಮುಖಾಂಶಗಳು...
1. ವಿವಾದಿತ ಪ್ರದೇಶವು ಶ್ರೀರಾಮನ ಜನ್ಮಸ್ಥಾನವೇ?
ವಿವಾದಿತ ಪ್ರದೇಶವು ರಾಮನ ಜನ್ಮಸ್ಥಳ. ಶ್ರೀರಾಮ ಅಪಾರ ಭಕ್ತರ ದೈವೀಕ ಚೇತನ.

2. ವಿವಾದಿತ ಕಟ್ಟಡವು ಮಸೀದಿಯಾಗಿತ್ತೇ? ಅದು ಕಟ್ಟಿದ್ದು ಯಾವಾಗ? ಯಾರಿಂದ?
ವಿವಾದಿತ ಕಟ್ಟಡ ಕಟ್ಟಿಸಿದ್ದು ಬಾಬರ್, ಯಾವ ವರ್ಷ ಎಂಬುದು ಖಚಿತವಿಲ್ಲ. ಆದರೆ ಇದನ್ನು ಇಸ್ಲಾಂನ ನಿಯಮಾವಳಿಗೆ ವಿರುದ್ಧವಾಗಿ ಕಟ್ಟಲಾಗಿತ್ತು. ಹೀಗಾಗಿ ಅದಕ್ಕೆ ಮಸೀದಿಯ ಲಕ್ಷಣಗಳಿಲ್ಲ.

3. ಹಿಂದೂ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತೇ?
ಹಳೆಯ ಕಟ್ಟಡವನ್ನು ಧ್ವಂಸ ಮಾಡಿ ವಿವಾದಿತ ಕಟ್ಟಡ ಕಟ್ಟಲಾಗಿದೆ. ಅಲ್ಲಿ ಬೃಹತ್ ಹಿಂದೂ ಧಾರ್ಮಿಕ ಕಟ್ಟಡವಿತ್ತು ಎಂಬುದನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಸಾಬೀತುಪಡಿಸಿದೆ.

4. 1949ರ ಡಿಸೆಂಬರ್ 22/23ರ ಮಧ್ಯರಾತ್ರಿ ವಿಗ್ರಹಗಳನ್ನು ಆ ಕಟ್ಟಡದಲ್ಲಿ ತಂದಿಡಲಾಯಿತೇ?
ಹೌದು. ಆ ರಾತ್ರಿ ವಿಗ್ರಹಗಳನ್ನು ಇರಿಸಲಾಯಿತು.

5. ವಿವಾದಿತ ಜಾಗದ (ಒಳ ಮತ್ತು ಹೊರ ಆವರಣ) ಸ್ಥಿತಿ ಏನಿರುತ್ತದೆ?
ವಿವಾದಿತ ಆಸ್ತಿಯು ಶ್ರೀರಾಮಚಂದ್ರನ ಮತ್ತು ಹಿಂದೂಗಳ ಪೂಜಾ ಸ್ಥಳ. ಹಿಂದೂಗಳು ಅನಾದಿ ಕಾಲದಿಂದಲೂ ಈ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಪರಿಗಣಿಸಿ ಪೂಜಿಸಿಕೊಂಡು ಬರುತ್ತಿದ್ದು, ಅವರಿಗೆ ಅರ್ಚಿಸುವ ಹಕ್ಕಿದೆ. ವಿವಾದಿತ ಕಟ್ಟಡ ಕಟ್ಟಲಾದ ಬಳಿಕ, ಅಲ್ಲಿ 1949ರ ಡಿ.22/23ರ ಮಧ್ಯರಾತ್ರಿ ವಿಗ್ರಹಗಳನ್ನು ತಂದಿಟ್ಟದ್ದು ಸಾಬೀತಾಗಿದೆ. ಅಲ್ಲದೆ ಹೊರ ಆವರಣವು ಹಿಂದೂಗಳ ಒಡೆತನದಲ್ಲಿರುವುದು ಸಾಬೀತಾಗಿದ್ದು, ಒಳ ಆವರಣದಲ್ಲಿಯೂ ಅವರು ಪೂಜಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ವಿವಾದಿತ ಕಟ್ಟಡವು ಇಸ್ಲಾಂನ ನಿಯಮಗಳಿಗೆ ವಿರುದ್ಧವಾಗಿ ಅಸ್ತಿತ್ವಕ್ಕೆ ಬಂದಿರುವುದರಿಂದ ಅದನ್ನು ಮಸೀದಿ ಎಂದು ಪರಿಗಣಿಸಲಾಗದು.
ಸಂಬಂಧಿತ ಮಾಹಿತಿ ಹುಡುಕಿ