ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸ್ವಾಗತಾರ್ಹವಾಗಿದ್ದು, ದೇಶದ ಜನತೆ ಶಾಂತಿ ಸಹಬಾಳ್ವೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನಿಡೀದ್ದಾರೆ.
ಅಯೋಧ್ಯೆ ತೀರ್ಪಿನಿಂದ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಸುಗಮವಾಗಿದೆ. ತೀರ್ಪು ಯಾರದೇ ಸೋಲು ಅಥವಾ ಗೆಲುವು ಅಲ್ಲ. ಮುಸ್ಲಿಂರು ಎಲ್ಲಾ ಸಮುದಾಯದವರು ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಯೋಧ್ಯೆ ತೀರ್ಪಿನ ಕುರಿತಂತೆ ತೃಪ್ತಿ ವ್ಯಕ್ತಪಡಿಸಿದ ಭಾಗವತ್, ಹಿಂದೂಗಳು ಹಾಗೂ ಮುಸ್ಲಿಂರಿಗೆ ಶಾಂತಿ, ಸಹಭಾಳ್ವೆ ಮತ್ತು ಜಾತ್ಯಾತೀತ ಸಂದೇಶವನ್ನು ಸಾರುವ ಅಂಶಗಳನ್ನು ಹೊಂದಿದೆ ಎಂದರು.
ಕಳೆದ ದಿನಗಳನ್ನು ಮರೆತು ಹಿಂದೂಗಳು ಹಾಗೂ ಮುಸ್ಲಿಂ ಸಮುದಾಯದವರು ಮುಂದೆ ಬಂದು ರಾಷ್ಟ್ರದ ಏಕತೆಯನ್ನು ಸಾರುವಲ್ಲಿ ಮಹತ್ತರ ಪಾತ್ರವಹಿಸಬೇಕು. ಯಾವುದೇ ಸಮುದಾಯವಾಗಲಿ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಮಮಂದಿರ ನಿರ್ಮಾಣದ ಚಳುವಳಿ ಯಾವುದೇ ಸಮುದಾಯದ ವಿರುದ್ಧವಲ್ಲ. ಅಥವಾ ಯಾವುದೇ ಸಮುದಾಯದ ವಿರುದ್ಧ ಸೇಡಿನ ಭಾವನೆಗಳನ್ನು ಹೊಂದಿಲ್ಲ. ಇಂತಹ ಭಾವನೆಗಳನ್ನು ಇತರ ಸಮುದಾಯದವರು ಅರ್ಥೈಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.