ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನ ಮಹಾತ್ಮನನ್ನು ನಿಧಾನವಾಗಿ ಮರೆಯುತ್ತಿದ್ದಾರೆ: ಮೊಮ್ಮಗಳು (Mahatma Gandhi | Sumitra Gandhi Kulkarni | Gandhiji's birth anniversary | India)
Bookmark and Share Feedback Print
 
ಜನತೆ ಮಹಾತ್ಮಾ ಗಾಂಧೀಜಿಯವರನ್ನು ನಿಧಾನವಾಗಿ ಮರೆಯುತ್ತಿದ್ದಾರೆ. ಅವರ ಸಿದ್ಧಾಂತಗಳು ನಿಧಾನವಾಗಿ ತೆರೆಮರೆಗೆ ಸರಿಯುತ್ತಿವೆ. ಕೇವಲ ಅವರಿಗೆ ಸಂಬಧಪಟ್ಟ ದಿನಗಳಲ್ಲಿ ಮಾತ್ರ ನೆನಪಿಸಿಕೊಳ್ಳುವದನ್ನು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ ಎಂದು ಅವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಗಾಂಧಿ ಜಯಂತಿಯಂದು ಗಾಂಧಿಯನ್ನು ಸ್ತುತಿಸುವ ಬದಲು ಅವರ ಬೋಧನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
PR

ಈ ದೇಶದ ಜನ ಮಹಾತ್ಮಾ ಗಾಂಧಿಯನ್ನು ನಿಧಾನವಾಗಿ ಮರೆಯುತ್ತಿದ್ದಾರೆ. ರಜಾದಿನ ಬರುವಾಗಲೆಲ್ಲ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಪ್ರಸಕ್ತ ಬೆಂಗಳೂರಿನಲ್ಲಿರುವ ಸುಮಿತ್ರಾ ಬೇಸರ ವ್ಯಕ್ತಪಡಿಸಿದರು.

ಗಾಂಧೀಜಿಯವರ ಮೂರನೇ ಪುತ್ರ ರಾಮದಾಸ್ ಗಾಂಧಿಯವರ (ಗಾಂಧೀಜಿಯವರ ಇತರ ಮೂವರು ಮಕ್ಕಳು - ಹರಿಲಾಲ್, ಮಣಿಲಾಲ್, ದೇವದಾಸ್) ಪುತ್ರಿ ಸುಮಿತ್ರಾ ಗಾಂಧಿ. ರಾಮದಾಸ್-ನಿರ್ಮಲಾ ದಂಪತಿಯ ಮೂವರು ಹೆಣ್ಣು ಮಕ್ಕಳಲ್ಲಿ (ಉಳಿದಿಬ್ಬರು ಕಾನು ಗಾಂಧಿ, ಉಷಾ ಗಾಂಧಿ) ಸುಮಿತ್ರಾ ಗಾಂಧಿ ಕೂಡ ಒಬ್ಬರು.

ಗಾಂಧಿಯನ್ನು ಯಾವ್ಯಾವ ರೀತಿಯಲ್ಲಿ ಮರೆಯಲಾಗುತ್ತಿದೆ ಎಂಬುದನ್ನು ವಿವರಿಸಿದ ಸುಮಿತ್ರಾ, ಇತ್ತೀಚೆಗಷ್ಟೇ ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಉಲ್ಲೇಖಿಸಿದರು. ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಮಹಾತ್ಮಾ ಗಾಂಧಿ ಯಾರೆಂದು ಪ್ರಶ್ನಿಸಿದಾಗ, ಸೋನಿಯಾ ಗಾಂಧಿಯ ತಂದೆ ಎಂದು ಉತ್ತರಿಸಿದ್ದು ಪತ್ರಿಕೆಯಲ್ಲಿ ವರದಿಯಾಗಿತ್ತು.

ಮಾಜಿ ರಾಜ್ಯಸಭಾ ಸದಸ್ಯೆಯಾಗಿರುವ ಸುಮಿತ್ರಾ ಅವರ ಪ್ರಕಾರ ಗಾಂಧಿ ಜಯಂತಿ ಮುಂತಾದ ಅವರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಮುಗಿದ ನಂತರ ಮನೆಗೆ ತೆರಳುವ ಜನ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಮುಳುಗಿ ಗಾಂಧಿಯವರ ಸಿದ್ಧಾಂತಗಳನ್ನು ಮರೆಯುತ್ತಿದ್ದಾರೆ ಎಂದರು.

ಅದೇ ಹೊತ್ತಿಗೆ 'ದಾದಾಗಿರಿ'ಯನ್ನು ವಿರೋಧಿಸಲು ಜನತೆ ಬಳಸುತ್ತಿರುವ 'ಗಾಂಧಿಗಿರಿ' ಉಕ್ತಿಯ ಬಳಕೆಯನ್ನು ತಾನು ಆಕ್ಷೇಪಿಸುವುದಿಲ್ಲ ಎಂದಿದ್ದಾರೆ. ಜತೆಗೆ ಖಾದಿ ಭಾರತದಲ್ಲಿ ಅಳಿವಿನಂಚಿನತ್ತ ಸಾಗುತ್ತಿರುವುದಕ್ಕೂ ಅವರು ಆತಂಕ ವ್ಯಕ್ತಪಡಿಸಿದರು.

ಹಿಂಸಾಚಾರವನ್ನು ತಡೆಯಲು ಗಾಂಧೀಜಿಯವರು ಅನುಸರಿಸಿದ ಅಹಿಂಸಾ ತತ್ವವೇ ಹೆಚ್ಚು ಸೂಕ್ತವಾದದ್ದು. ಇದನ್ನು ಹೊರತು ಪಡಿಸಿದ ಮಾರ್ಗಗಳನ್ನು ಅನುಸರಿಸಿದಾಗ ನಿರೀಕ್ಷಿತ ಫಲಿತಾಂಶಗಳು ದೊರಕಿಲ್ಲ ಎಂದಿರುವ ಗಾಂಧಿ ಮೊಮ್ಮಗಳು, ಅಯೋಧ್ಯೆ ವಿವಾದಕ್ಕೆ ಸ್ಥಳೀಯರೇ ಪರಿಹಾರ ಕಂಡುಕೊಳ್ಳಿ ಎಂದು ಬಿಟ್ಟಿದ್ದರೆ 15 ದಿನಗಳಲ್ಲೇ ಅದು ಸುಖಾಂತ್ಯ ಕಾಣಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ