ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯು ಟರ್ನ್: ಅಯೋಧ್ಯೆ ವಿವಾದ ಕೋರ್ಟ್ ಹೊರಗೆ ಇತ್ಯರ್ಥ! (Ayodhya issue | High Court verdict | Mohammad Hashim Ansari,)
ಅಯೋಧ್ಯೆ ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ ಮೂರು ದಿನಗಳ ನಂತರ ಹೊಸ ಬೆಳವಣಿಗೆಯೊಂದು ನಡೆದಿದ್ದು, ಭೂ ಒಡೆತನ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಚಿಂತನೆ ನಡೆದಿದೆ.
ಅಯೋಧ್ಯೆ ಒಡೆತನ ವ್ಯಾಜ್ಯದಲ್ಲಿ ಪ್ರಮುಖ ಕಕ್ಷಿದಾರ ಆಗಿದ್ದ ಮೊಹಮ್ಮದ್ ಹಸೀಮ್ ಅನ್ಸಾರಿ ಅವರು ಅಖಿಲ ಭಾರತೀಯ ಅಖಾಡ ಪರಿಷತ್‌ನ ಅಧ್ಯಕ್ಷರಾಗಿರುವ ಮಹಾಂತ್ ಜ್ಞಾನದಾಸ್ ಅವರನ್ನು ಭಾನುವಾರ ಭೇಟಿ ಮಾಡಿ, ಸಂಭಾವ್ಯ ಸೌಹಾರ್ದ ಪರಿಹಾರ ಕುರಿತು ಚರ್ಚಿಸಿದ್ದಾರೆ.
ಜ್ಞಾನದಾಸ್ ಅವರು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ, ಅನ್ಸಾರಿ, ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಸೂಚನೆ ಮೇರೆಗೆ ನಾನು ಸಂಧಾನ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ.
ರಾಮಮಂದಿರ ಕಟ್ಟಬೇಕು ಎಂದು ಹೇಳಲಾಗುತ್ತಿರುವ ಪ್ರದೇಶದ ಸಮೀಪದಲ್ಲೇ ಇರುವ ಹನುಮಾನ್‌ಘಡಿಯಲ್ಲಿ ಈ ನಾಯಕರು ಒಂದು ಗಂಟೆಗೂ ಅಧಿಕ ಕಾಲಾವಧಿ ಮಾತುಕತೆ ನಡೆಸಿದ್ದಾರೆ. ಅಖಿಲ ಭಾರತೀಯ ಅಖಾಡ ಪರಿಷತ್ ಸಂಧಾನಕಾರನಾಗಿ ಕಾರ್ಯನಿರ್ವಹಿಸಲಿದೆ ಮತ್ತು ಜ್ಞಾನದಾಸ್ ಅವರು ನಿರ್ಮೋಹಿ ಅಖಾಡ ಜತೆ ಮಾತುಕತೆ ನಡೆಸಿಲಿದ್ದಾರೆ ಎಂದು ಅನ್ಸಾರಿ ತಿಳಿಸಿದ್ದಾರೆ.