ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ನಿಂದ ಬಡವ-ಶ್ರೀಮಂತರ ಅಂತರ ಹೆಚ್ಚಿದೆ: ಕಾರಟ್ (rich and the poor | Congress | CPI-M | Brinda Karat)
Bookmark and Share Feedback Print
 
ದೇಶದಲ್ಲಿನ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ ಮತ್ತು ಶ್ರೀಮಂತರು ಹೆಚ್ಚೆಚ್ಚು ಶ್ರೀಮಂತರಾಗುತ್ತಿದ್ದಾರೆ ಎಂದಿರುವ ಸಿಪಿಐಎಂ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಟ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

ಯುಪಿಎ ಸರಕಾರದ ಉದಾರ ಆರ್ಥಿಕ ನೀತಿಗಳಿಂದಾಗಿ ಬಡವರು ಮತ್ತಷ್ಟು ಬಡವರು ಹಾಗೂ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿರುವುದು ಕಳೆದ 10 ವರ್ಷಗಳಿಂದ ನಡೆಯುತ್ತಾ ಬಂದಿದೆ. ಈ ನೀತಿಗಳಿಂದಾಗಿ ಅತಿ ಹೆಚ್ಚು ಬಾಧೆಗೊಳಗಾಗಿರುವವರು ಮಹಿಳೆಯರು. ಅವರು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುವಂತಾಗಿದೆ ಎಂದು ಕಾರಟ್ ಅಭಿಪ್ರಾಯಪಟ್ಟರು.
PTI

ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಸಿಪಿಐ-ಎಂನ ಮಹಿಳಾ ಘಟಕ ಗಣರಾಜ್ಯ ನಾರಿ ಸಮಿತಿಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಆಹಾರ ಭದ್ರತೆಯನ್ನು ಒದಗಿಸುತ್ತೇವೆ ಎಂದು ಅಧಿಕಾರಕ್ಕೆ ಬರುವ ಮೊದಲು ಜನತೆಗೆ ನೀಡಿದ್ದ ಆಶ್ವಾಸನೆಯನ್ನು ಸರಕಾರ ಮರೆತಿದೆ ಎಂದರು.

ಆಹಾರ ಪದಾರ್ಥಗಳ ದಾಸ್ತಾನು ಇರುವ ಹೊರತಾಗಿಯೂ, ಆರು ಕೋಟಿ ಟನ್ನುಗಳಿಗೂ ಹೆಚ್ಚು ಪ್ರಮಾಣದಲ್ಲಿ ಗೋದಾಮುಗಳಲ್ಲಿ ಕೊಳೆಯುತ್ತಿರುವುದರ ಹೊರತಾಗಿಯೂ ಸರಕಾರ ಅದನ್ನು ದೇಶದ ಎಲ್ಲಾ ವರ್ಗಗಳ ಜನತೆಗೆ ಲಭ್ಯವಾಗುವಂತೆ ಸೂಕ್ತ ದರದಲ್ಲಿ ವಿತರಣೆ ಮಾಡಲು ನಿರಾಕರಿಸುತ್ತಿದೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.

ಸರಕಾರವು ಬಡ ಜನತೆಯನ್ನು ರಕ್ಷಿಸುವ ಬದಲು, ಧನಿಕರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಆಸ್ಥೆ ವಹಿಸುತ್ತಿದೆ ಎಂದು ಆರೋಪಿಸಿದ ಕಾರಟ್, ಶೇ.16ಕ್ಕೆ ತಲುಪಿರುವ ಆಹಾರ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಿರುವುದನ್ನು ಉಲ್ಲೇಖಿಸುತ್ತಾ ಇವೆಲ್ಲವೂ ಈ ಹಿಂದಿನ ದಾಖಲೆಗಳನ್ನು ಹಿಮ್ಮೆಟ್ಟಿಸಿವೆ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಲದ ಬಡ ಜನತೆಯ ಹಿತಾಸಕ್ತಿಗಳನ್ನು ಕಾಯುತ್ತಿರುವ ಎಡರಂಗದ ಸರಕಾರವನ್ನು ಪತನಗೊಳಿಸಲು ತೃಣಮೂಲ ಕಾಂಗ್ರೆಸ್ ಮಾವೋವಾದಿಗಳ ಜತೆಗೂಡಿ ಪಿತೂರಿ ನಡೆಸುತ್ತಿದ್ದರೆ, ಅದಕ್ಕೆ ಯುಪಿಎ ಸರಕಾರವು ಮೌನದಿಂದ ಬೆಂಬಲ ನೀಡುತ್ತಿದೆ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ