ದೇಶದ ಆಂತರಿಕ ಭದ್ರತೆಗೆ ಪ್ರಮುಖ ಸವಾಲಾಗಿರುವ ನಕ್ಸಲರು ತಮ್ಮ ಅಟ್ಟಹಾಸವನ್ನು ಮತ್ತೆ ಮುಂದುವರಿಸಿದ್ದಾರೆ. ನಕ್ಸಲ್ ಪ್ರಾಬಲ್ಯ ಹೊಂದಿರುವ ಛತ್ತೀಸ್‌ಗಡದಲ್ಲಿ ಮತ್ತೆ ನೆಲಬಾಂಬ್ ಸ್ಫೋಟಿಸಿ ಐವರು ಜವಾನರ ಹತ್ಯೆಗೆ ಕಾರಣರಾಗಿದ್ದಾರೆ.
ಛತ್ತೀಸ್‌ಗಡದ ಗಡಿ ಪ್ರದೇಶದಲ್ಲಿನ ನಕ್ಸಲ್ ಪೀಡಿತ ಗಡಚಿರೋಲಿ ಜಿಲ್ಲೆಯಲ್ಲಿ ಸೋಮವಾರ ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟಿಸಿ ಸಿಎರ್‌ಪಿಎಫ್‌ನ ಐದು ಭದ್ರತಾ ಸಿಬ್ಬಂದಿಗಳು ಸಾವೀಗೀಡಾಗಿದ್ದಾರೆ.
ಮೃತಪಟ್ಟವರಲ್ಲಿ ಕೇಂದ್ರ ಮೀಸಲು ಪಡೆಯ ಓರ್ವ ಇನ್‌ಸ್ಪೆಕ್ಟರ್ ಕೂಡಾ ಸೇರಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ಮಿಲಿ ಗ್ರಾಮದ ಮಾರುಕಟ್ಟೆಯಿಂದ ಸಂಜೆಯ ಹೊತ್ತಿಗೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ಪೊಲೀಸ್ ವಾಹನದಲ್ಲಿ ಶಿಬಿರಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.