ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಣಿಕೆಗಾಗಿ ಗರ್ಭಗುಡಿಯಲ್ಲೇ ಕಿತ್ತಾಡಿದ ಪುರಿ ಅರ್ಚಕರು..! (Priests fight | Sri Jagannath temple | Orissa | Ratna Sinhasan)
Bookmark and Share Feedback Print
 
ಒರಿಸ್ಸಾದ 12ನೇ ಶತಮಾನದ ಪುರಾತನ ಶ್ರೀ ಜಗನ್ನಾಥ ದೇಗುಲದಲ್ಲಿ ನಡೆದ ಘಟನೆಯಿದು. ಭಕ್ತರು ಹಾಕಿದ ಕಾಣಿಕೆಗಾಗಿ ದೇವಳದ ಪುರೋಹಿತರ ಎರಡು ಗುಂಪುಗಳು ಮುಖ-ಮೂತಿ ನೋಡದೆ ಗರ್ಭಗುಡಿಯಲ್ಲೇ ಹೊಡೆದಾಡಿಕೊಂಡಿವೆ. ಅದು ಎಲ್ಲಿಯವರೆಗೆ ಎಂದರೆ ಪವಿತ್ರ ರತ್ನ ಸಿಂಹಾಸನದ ಮೇಲೆ ರಕ್ತದ ಹನಿ ಬೀಳುವವರೆಗೆ.

ಅರ್ಚಕರ ಕಾಣಿಕೆ ಜಗಳದಲ್ಲಿ ಪುರಿ ದೇವಳದ ರತ್ನ ಸಿಂಹಾಸನದ ಮೇಲೆ ರಕ್ತದ ಹನಿ ಬಿದ್ದುದರಿಂದ ಮಂಗಳವಾರ ಸಾರ್ವಜನಿಕ ದರ್ಶನವನ್ನು ಕೆಲ ಹೊತ್ತು ಅಮಾನತು ಮಾಡಿ, ಶುದ್ಧೀಕರಣ ಕಾರ್ಯವನ್ನು ನಡೆಸಲಾಯಿತು.
PR

ಈ ಘಟನೆ ನಡೆದಿರುವುದು ಮಂಗಳವಾರ ಮಧ್ಯಾಹ್ನ ಜಗನ್ನಾಥನ ಸಾರ್ವಜನಿಕ ದರ್ಶನದ (ಸಹನಾ ಮೇಳ) ವೇಳೆ. ಓರ್ವ ಪುರೋಹಿತನ ಮುಖದ ಮೇಲೆ ಮತ್ತೊಬ್ಬ ಹೊಡೆದ ಕಾರಣ ಆತನ ಮೂಗಿನಲ್ಲಿ ರಕ್ತ ಒಸರುತ್ತಿತ್ತು.

ಈ ರಕ್ತವು ಗರ್ಭಗುಡಿಯಲ್ಲಿನ ಜಗನ್ನಾಥನ 'ರತ್ನ ಸಿಂಹಾಸನ'ದ ಮೇಲೂ ಕಂಡು ಬಂದಾಗ ಪ್ರಕರಣ ಗಂಭೀರ ರೂಪ ಪಡೆಯಿತು. ಇದನ್ನು ಅಪಶಕುನ ಎಂದೇ ಪರಿಗಣಿಸಿದ ಅರ್ಚಕರು, ದೇವಳದ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ 'ಮಹಾಸ್ನಾನ' ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಂಡರು.

ಶುದ್ಧೀಕರಣದ ಕಾರ್ಯವನ್ನು ಪೊಲೀಸರು ಮತ್ತು ಶ್ರೀ ಜಗನ್ನಾಥ ದೇವಳದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿಯೇ ನೆರವೇರಿಸಲಾಯಿತು. ಈ ಹೊತ್ತಿಗೆ ಸಾರ್ವಜನಿಕರು ದೇವರ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಶುದ್ಧೀಕರಣ ಕಾರ್ಯ ಮುಗಿದ ನಂತರ ದರ್ಶನ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಮೂಲಗಳು ಹೇಳಿವೆ.

ಗಾಯಗೊಂಡಿರುವ ಅರ್ಚಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಅರ್ಚಕರ ಮೇಲೆ ಇಲ್ಲಿನ ಸಿಂಹದ್ವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಲ್ಲಿನ ಅರ್ಚಕರು (ಪಾಂಡಾಸ್) ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಚಿಲ್ಲರೆ ಹಣಕ್ಕಾಗಿ ಅವರು ಆಗಾಗ ಈ ರೀತಿಯ ಘರ್ಷಣೆಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ