ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಮಿ ಮತ್ತು ಆರೆಸ್ಸೆಸ್‌ ನಡುವೆ ಹೆಚ್ಚು ವ್ಯತ್ಯಾಸವಿಲ್ಲ: ರಾಹುಲ್ (SIMI | RSS | Congress | Rahul Gandhi)
Bookmark and Share Feedback Print
 
ನಿಷೇಧಿತ ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆ (ಸಿಮಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳೆರಡನ್ನೂ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಒಂದೇ ತಕ್ಕಡಿಯಲ್ಲಿ ತೂಗಿದ್ದಾರೆ.

ಭೋಪಾಲ್‌ನಲ್ಲಿ ಮಾತನಾಡುತ್ತಿದ್ದ ಅವರು, ಸಿಮಿ ಮತ್ತು ಆರೆಸ್ಸೆಸ್‌ಗಳೆರಡೂ ಮತಾಂಧ ಮತ್ತು ಮೂಲಭೂತವಾದಿ ದೃಷ್ಟಿಕೋನಗಳನ್ನು ಹೊಂದಿರುವುದರಿಂದ ನನ್ನ ಪ್ರಕಾರ ಅವೆರಡೂ ಸಂಘಟನೆಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಕಾಣುತ್ತಿಲ್ಲ ಎಂದರು.

ತಿಕಂಘಡದಲ್ಲಿ ಮಂಗಳವಾರ ಸಿಮಿ ಮತ್ತು ಆರೆಸ್ಸೆಸ್‌ಗಳನ್ನು ಸಮಾನ ಎಂಬ ವಿವಾದಿತ ಹೇಳಿಕೆ ನೀಡಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಕಾಂಗ್ರೆಸ್ ಸಂಸದ, ಇದರಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುವ ಯಾವುದೇ ಅಂಶಗಳು ನನಗೆ ಕಾಣುತ್ತಿಲ್ಲ ಎಂದಿದ್ದಾರೆ.

ದೇಶದಲ್ಲಿನ ಹಲವು ಸ್ಫೋಟಗಳಲ್ಲಿ ಕೈವಾಡವಿರುವ 'ಸಿಮಿ' ಭಾರತ ಸರಕಾರ ನಿಷೇಧಿಸಿರುವ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ, ಆದರೆ ಆರೆಸ್ಸೆಸ್ ನಾಗ್ಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಲಪಂಥೀಯ ಸಂಘಟನೆ ಅಂತಹ ಯಾವುದೇ ಇತಿಹಾಸಗಳನ್ನು ಹೊಂದಿಲ್ಲ. ಇವೆರಡರ ನಡುವೆ ಹೇಗೆ ಹೋಲಿಕೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದಾಗಲೂ ತನ್ನ ನಿಲುವನ್ನು ರಾಹುಲ್ ಸಮರ್ಥಿಸಿಕೊಂಡರು.

ಸಿಮಿ ಮತ್ತು ಆರೆಸ್ಸೆಸ್‌ಗಳೆರಡೂ ಮತಾಂಧ ಮತ್ತು ಮೂಲಭೂತವಾದಿ ದೃಷ್ಟಿಕೋನಗಳನ್ನು ಹೊಂದಿವೆ ಎನ್ನುವುದು ಮಾತ್ರ ನನಗೆ ಗೊತ್ತು. ನಾನು ಅವುಗಳ ತೀವ್ರವಾದಿ ಸಿದ್ಧಾಂತಗಳನ್ನು ಗಮನಕ್ಕೆ ತೆಗೆದುಕೊಂಡು ಮಾತನಾಡುತ್ತಿದ್ದೇನೆ ಎಂದು ಹೆಚ್ಚು ವಿವರಗಳನ್ನು ನೀಡದೆ ನುಣುಚಿಕೊಂಡರು.

ಯುವ ಕಾಂಗ್ರೆಸ್‌ನಲ್ಲಿ ಇಂತಹ ಮತಾಂಧ ದೃಷ್ಟಿಕೋನ ಹೊಂದಿರುವ ಜನರಿಗೆ ಜಾಗವಿಲ್ಲ ಎಂದು ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖ್ಯಸ್ಥರಾಗಿರುವ ರಾಹುಲ್ ಸ್ಪಷ್ಟಪಡಿಸಿದರು.

ಕಳೆದ ಮೂರು ದಿನಗಳಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ.

ಆರೆಸ್ಸೆಸ್ ಮತ್ತು ಸಿಮಿ -- ಎರಡೂ ಸಂಘಟನೆಗಳು ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಹೊಂದಿರದ ಸಂಘಟನೆಗಳು. ಅವುಗಳು ಕಾಂಗ್ರೆಸ್ ಜತೆ ಹೊಂದಾಣಿಕೆಯಾಗುವುದಿಲ್ಲ. ಯುವ ಕಾಂಗ್ರೆಸ್ ಇಂತಹ ತೀವ್ರವಾದಿ ಸಿದ್ಧಾಂತಗಳನ್ನು ಹೊಂದಿರುವವರನ್ನು ಸ್ವಾಗತಿಸುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ