ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ನಿಂದ ಭಯೋತ್ಪಾದಕರ ಪೋಷಣೆ: ಗಡ್ಕರಿ ಕಿಡಿ (CBI | Nitin Gadkari | Congress | BJP)
Bookmark and Share Feedback Print
 
ಭಯೋತ್ಪಾದಕರ ವಿರುದ್ಧ ಹೋರಾಡುವವರಿಗೆ ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸುವುದು ಮತ್ತು ಭಯೋತ್ಪಾದಕರನ್ನು ರಕ್ಷಿಸುವುದೇ ಕಾಂಗ್ರೆಸ್ ತಂತ್ರ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಗಂಭೀರ ಆರೋಪ ಮಾಡಿದ್ದಾರೆ.

ಅಹಮದಾಬಾದ್‌ನಲ್ಲಿ ಸಾರ್ವಜನಿಕ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನೆಯ ವಿರುದ್ಧ ಹೋರಾಡುವವರಿಗೆ ಗರಿಷ್ಠ ಶಿಕ್ಷೆಯನ್ನು ನೀಡುವುದು ಮತ್ತು ಭಯೋತ್ಪಾದಕರನ್ನು ರಕ್ಷಿಸುವುದೇ ಕೇಂದ್ರ ಸರಕಾರದ ನೀತಿ ಎಂದರು.

ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಬಂಧನಕ್ಕೊಳಗಾದ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಪ್ರಕರಣವನ್ನು ಉಲ್ಲೇಖಿಸಿದ ಅವರು, ಜೈಲಿನಲ್ಲಿ ನಾನು ಶಾ ಅವರನ್ನು ನಿನ್ನೆ ಭೇಟಿ ಮಾಡಿದೆ. ಅವರನ್ನು ಸಿಬಿಐ ಗುರಿ ಮಾಡಿಕೊಂಡಿರುವುದು ದುರದೃಷ್ಟಕರ ಎಂದರು.

ಇಶ್ರತ್ ಜಹಾನ್ ಪ್ರಕರಣದಲ್ಲಿ ಕೇಂದ್ರವು ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದೆ. ಎನ್‌ಕೌಂಟರಿನಲ್ಲಿ ಕೊಲ್ಲಲ್ಪಟ್ಟ ಮುಂಬೈ ಹುಡುಗಿ ಭಯೋತ್ಪಾದಕಿಯಲ್ಲ ಎಂದು ಕೇಂದ್ರವು ಕೋರ್ಟಿಗೆ ತಿಳಿಸಿದೆ. ಆದರೆ ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಹೆಡ್ಲಿ, ಜಹಾನ್ ಭಯೋತ್ಪಾದಕಿ ಎಂದೇ ಹೇಳಿಕೆ ನೀಡಿದ್ದಾನೆ ಎಂದು ಬಿಜೆಪಿ ವರಿಷ್ಠ ಕೇಂದ್ರವನ್ನು ಲೇವಡಿ ಮಾಡಿದರು.

ಪಾಕಿಸ್ತಾನಿ ಭಯೋತ್ಪಾದಕ ಡೇವಿಡ್ ಹೆಡ್ಲಿಯನ್ನು ಭಾರತೀಯ ತನಿಖಾ ದಳಗಳು ಅಮೆರಿಕಾದಲ್ಲಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಜಹಾನ್ ಲಷ್ಕರ್ ಇ ತೋಯ್ಬಾದಿಂದ ತರಬೇತಿ ಪಡೆದಿದ್ದ ಉಗ್ರೆ ಎಂಬುದು ಸಾಬೀತಾಗಿತ್ತು. ಆದರೂ ಕೇಂದ್ರವು ಆಕೆ ಉಗ್ರೆಯಲ್ಲ ಎಂದು ತಿಳಿಸಿದೆ ಎಂದರು.

ಕೇಸರಿ ಭಯೋತ್ಪಾದನೆ ಉಲ್ಲೇಖವನ್ನು ಮಾಡಿ ಬಹುಸಂಖ್ಯಾತರಿಂದ ತೆಗಳಿಸಿಕೊಂಡಿದ್ದ ಗೃಹಸಚಿವ ಪಿ. ಚಿದಂಬರಂ ಅವರನ್ನೂ ತರಾಟೆಗೆ ತೆಗೆದುಕೊಂಡ ಗಡ್ಕರಿ, ಅವರು ಭಯೋತ್ಪಾದನೆಗೆ ಬಣ್ಣವನ್ನು ಹಚ್ಚುತ್ತಿದ್ದಾರೆ; ಆದರೆ ಭಯೋತ್ಪಾದನೆಗಿರುವುದು ಒಂದೇ ಬಣ್ಣ. ಅದು ಕಪ್ಪು ಎಂದರು.

ಕಾಂಗ್ರೆಸ್‌ಗಾಗಿ ಸಿಬಿಐ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ..
ಹೀಗೆಂದು ಕಾಂಗ್ರೆಸ್‌ಗೆ ಟಾಂಗ್ ನೀಡಿರುವುದು ರಾಜ್ಯಸಭಾ ಸದಸ್ಯ ಅರುಣ್ ಜೇಟ್ಲಿ. ಅಹಮದಾಬಾದಿನಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ತನ್ನ ವಿರೋಧಿಗಳ ವಿರುದ್ಧ ಸಿಬಿಐಯನ್ನು ದುರ್ಬಳಕೆ ಮಾಡಬಹುದು. ಆದರೆ ತನಿಖಾದಳವನ್ನು ಚುನಾವಣೆಗಳಲ್ಲಿ ಗೆಲ್ಲಲು ಬಳಸಿಕೊಳ್ಳಲಾಗದು ಎಂದು ಅಪಹಾಸ್ಯ ಮಾಡಿದರು.

ನರೇಂದ್ರ ಮೋದಿ ಸರಕಾರವನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಎಲ್ಲಾ ತಂತ್ರಗಳನ್ನೂ ಪ್ರಯೋಗಿಸುತ್ತಿದೆ. ಅದಕ್ಕಾಗಿ ಸಿಬಿಐಯನ್ನು ದುರುಪಯೋಗ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಇಂತಹ ನೀತಿಗಳನ್ನು ಧಿಕ್ಕರಿಸಲು ಜನತೆ ಚುನಾವಣೆ ಎಂಬ ಅಸ್ತ್ರವನ್ನು ಸೂಕ್ತವಾಗಿ ಬಳಸಬೇಕು ಎಂದು ಬಿಜೆಪಿ ನಾಯಕ ಜೇಟ್ಲಿ ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ