ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖ್ಯಮಂತ್ರಿಯಾಗಿ 10ನೇ ವರ್ಷಕ್ಕೆ ಮೋದಿ ಪದಾರ್ಪಣೆ (Narendra Modi | Gujarat | Chief Minister | BJP)
Bookmark and Share Feedback Print
 
ಸಾಕಷ್ಟು ರಾಜಕೀಯ ಪಿತೂರಿಗಳನ್ನು ಎದುರಿಸಿದರೂ ಗುಜರಾತ್ ಅಭಿವೃದ್ಧಿಯಲ್ಲಿ ರಾಜಿ ಮಾಡಿಕೊಳ್ಳದೆ, ಜನಪ್ರಿಯತೆಯನ್ನು ದುಪ್ಪಟ್ಟುಗೊಳಿಸುತ್ತಾ ಸಾಗುತ್ತಿರುವ ನರೇಂದ್ರ ದಾಮೋದರದಾಸ್ ಮೋದಿಯವರು ಮುಖ್ಯಮಂತ್ರಿಯಾಗಿ ಅಮೋಘ ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.

ಅಂದಿನ (17-9-1950) ಬಾಂಬೆ ರಾಜ್ಯದ ಮೆಹ್ಸಾನಾ ಜಿಲ್ಲೆಯ ವದ್ನಾಗರ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಮೋದಿಯವರು 2001ರ ಅಕ್ಟೋಬರ್ 7ರಂದು ಗುಜರಾತಿನ 22ನೇ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದರು.

ಮೂಲತಃ ಸಂಘ ಪರಿವಾರದಲ್ಲಿ (ಆರೆಸ್ಸೆಸ್) ಬೇರುಗಳನ್ನು ಹೊಂದಿರುವ ಮೋದಿ ನಂತರ 2002ರ ಡಿಸೆಂಬರ್ 22ರಂದು ಎರಡನೇ ಬಾರಿ ಹಾಗೂ 2007ರ ಡಿಸೆಂಬರ್ 23ರಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಆ ಮೂಲಕ ಸತತ ಮೂರು ಬಾರಿ ಆಯ್ಕೆಯಾದ ಗುಜರಾತಿನ ಎರಡನೇ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಮೋದಿ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಹಿತೇಂದ್ರ ಕೆ. ದೇಸಾಯಿಯವರು ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಒಟ್ಟಾರೆಯಾಗಿ ನಾಲ್ಕು ಬಾರಿ ಆಯ್ಕೆಯಾಗಿರುವ ದಾಖಲೆ ಕಾಂಗ್ರೆಸ್‌ನ ಮಾಧವ್ ಸಿಂಗ್ ಸೋಲಂಕಿಯವರ ಹೆಸರಿನಲ್ಲಿದೆ. ಆದರೆ ಅವರು ನಿರಂತರವಾಗಿ ಮುಖ್ಯಮಂತ್ರಿ ಗಾದಿಯನ್ನು ತನ್ನಲ್ಲಿ ಉಳಿಸಿಕೊಂಡಿರಲಿಲ್ಲ.

ಇದಕ್ಕಿಂತಲೂ ಮೋದಿ ಮಾಡಿರುವ ಮತ್ತೊಂದು ದಾಖಲೆಯೆಂದರೆ 10ನೇ ವರ್ಷಕ್ಕೆ ಮುಖ್ಯಮಂತ್ರಿಯಾಗಿ ಪದಾರ್ಪಣೆ ಮಾಡಿರುವುದು. ಇಂತಹ ಸಾಧನೆ ಈ ಹಿಂದಿನ ಯಾವುದೇ ಗುಜರಾತ್ ಮುಖ್ಯಮಂತ್ರಿ ಮಾಡಿಲ್ಲ. ಗುಜರಾತಿನ ಮೊದಲ ಹಾಗೂ ಇದುವರೆಗಿನ ಅವಿವಾಹಿತ ಮುಖ್ಯಮಂತ್ರಿ ಎಂಬ ಕೀರ್ತಿ ಕೂಡ ಮೋದಿಯವರದ್ದು.

ಮೋದಿ ಹೆಜ್ಜೆ ಗುರುತುಗಳ ಸಂಕ್ಷಿಪ್ತ ನೋಟ...
* 1950ರ ಸೆಪ್ಟೆಂಬರ್ 17ರಂದು ಮೆಹ್ಸಾನಾ ಜಿಲ್ಲೆಯಲ್ಲಿ ಜನನ.
* 1965ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಸಹಾಯ.
* 1967ರಲ್ಲಿ ಗುಜರಾತ್ ಪ್ರವಾಹ ಬಂದಾಗ ಸ್ವಯಂಸೇವಕನಾಗಿ ಸೇವೆ.
* ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ ಸೇರ್ಪಡೆ, ಭ್ರಷ್ಟಾಚಾರದ ವಿರುದ್ಧ ಹೋರಾಟ.
* ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರೆಸ್ಸೆಸ್) ಸೇರ್ಪಡೆ.
* ಗುಜರಾತ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
* ಆರೆಸ್ಸೆಸ್ ಪ್ರಚಾರಕ್ ಆಗಿ ಕಾಲೇಜು ಅವಧಿಯಲ್ಲೇ ಆಯ್ಕೆ.
* ಇಂದಿರಾ ಕಾಂಗ್ರೆಸ್ ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ
* 1987ರಲ್ಲಿ ಬಿಜೆಪಿಗೆ ಸೇರುವ ಮೂಲಕ ರಾಜಕೀಯ ಪ್ರವೇಶ.
* ಒಂದೇ ವರ್ಷದಲ್ಲಿ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
* ಬಿಜೆಪಿಗೆ ಶಕ್ತಿ ತುಂಬುವ ಕೆಲಸವನ್ನು ಸವಾಲಾಗಿ ಸ್ವೀಕಾರ.
* 1995ರಲ್ಲಿ ಗುಜರಾತಿನಲ್ಲಿ ಸ್ವಂತ ಶಕ್ತಿಯಿಂದ ಬಿಜೆಪಿ ಅಧಿಕಾರಕ್ಕೆ.
* ಗುಜರಾತ್ ಬಿಜೆಪಿಯ ಪ್ರಮುಖ ತಂತ್ರಗಾರಿಕಾ ನಿಪುಣನೆಂಬ ಹೆಗ್ಗಳಿಕೆ.
* ಎಲ್.ಕೆ. ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯೆವರೆಗಿನ ರಥಯಾತ್ರೆಯಲ್ಲಿ ಮಹತ್ವದ ಪಾತ್ರ.
* ಕನ್ಯಾಕುಮಾರಿ ಯಾತ್ರೆ ನಿಭಾಯಿಸುವ ಹೊಣೆಗಾರಿಕೆಗೂ ಹೆಗಲಿಗೆ.
* 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆ- ಐದು ರಾಜ್ಯಗಳ ಹೊಣೆಗಾರಿಕೆ.
* 1998ರಿಂದ 2001ರವರೆಗೆ ಸಂಘಟನಾ ವಿಭಾಗದ ಪ್ರಧಾನ ಕಾರ್ಯದರ್ಶಿ.
* 2001ರಲ್ಲಿನ ಗುಜರಾತ್ ಭೂಕಂಪದ ಸಂದರ್ಭದಲ್ಲಿ ಮಹತ್ತರ ಕಾರ್ಯ.
* ಕೇವಲ 500 ದಿನದಲ್ಲಿ 8.8 ಲಕ್ಷ ಮನೆಗಳ ಪುನರ್ ನಿರ್ಮಾಣ ಮಾಡಿ ದಾಖಲೆ.
* 2001ರ ಅಕ್ಟೋಬರ್ ತಿಂಗಳಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆ.
* 2002ರಲ್ಲಿ ಗೋದ್ರಾ ರೈಲಿಗೆ ಬೆಂಕಿ, 58 ಕರಸೇವಕರು ಸಜೀವ ದಹನ.
* ಇದರ ಬೆನ್ನಿಗೆ ನಡೆದ ಹಿಂಸಾಚಾರಕ್ಕೆ 790 ಮುಸ್ಲಿಮರು ಮತ್ತು 254 ಹಿಂದೂಗಳು ಬಲಿ.
* ಹಿಂಸಾಚಾರಕ್ಕೆ ಮೋದಿ ಪ್ರಚೋದನೆ ಆರೋಪ, ಸಿಎಂ ಸ್ಥಾನಕ್ಕೆ ರಾಜೀನಾಮೆ.
* ಮರು ಚುನಾವಣೆಯಲ್ಲಿ 127 ಸೀಟುಗಳೊಂದಿಗೆ (ಒಟ್ಟು 182 ಸೀಟು) ಮೋದಿ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆ.
* ಇದೇ ವರ್ಷ ಮೋದಿಯ ವೀಸಾಕ್ಕೆ ಅಮೆರಿಕಾ ನಿರ್ಬಂಧ.
* 2007ರ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ವಾಕ್ಸಮರ.
* ಮೋದಿ ಸಾವಿನ ವ್ಯಾಪಾರಿ ಎಂದು ಜರೆದ ಸೋನಿಯಾ ಗಾಂಧಿ.
* ಮತ್ತೆ ಮುಖ್ಯಮಂತ್ರಿಯಾಗಿ ಮೋದಿ ಆಯ್ಕೆ.
* ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿ ಮೋದಿ.
* ಗುಜರಾತ್ ಅಭಿವೃದ್ಧಿಗೆ ಪಣ, ಅದರಂತೆ ಕೈಗಾರಿಕೆಗಳಿಗೆ ಪ್ರೋತ್ಸಾಹ.
* ಭಾರತೀಯ ರಾಜ್ಯಗಳಲ್ಲಿ ಗರಿಷ್ಠ ಪ್ರಗತಿ ಸಾಧಿಸಿದ ರಾಜ್ಯ ಎಂಬ ಹೆಗ್ಗಳಿಕೆ.
* ಭಯೋತ್ಪಾದನೆಯ ವಿರುದ್ಧ ಹೋರಾಟ.
* ದೇಶದ ನಂ.1 ಮುಖ್ಯಮಂತ್ರಿ ಎಂದು ನಿರಂತರ ಆಯ್ಕೆ.
ಸಂಬಂಧಿತ ಮಾಹಿತಿ ಹುಡುಕಿ