ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿ ಪ್ರಾಮಾಣಿಕ ವ್ಯಕ್ತಿ: ಬಾಬಾ ರಾಮ್‌ದೇವ್ (Baba Ramdev | Congress | yoga guru | Rahul Gandhi)
Bookmark and Share Feedback Print
 
ಮಹತ್ವದ ಬೆಳವಣಿಗೆಯೊಂದರಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿ ಕುತೂಹಲಗಳಿಗೆ ಕಾರಣರಾಗಿದ್ದಾರೆ.

ಇದನ್ನು ಬಹಿರಂಗಪಡಿಸಿರುವುದು ಸ್ವತಃ ರಾಮ್‌ದೇವ್. ಸುದ್ದಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಶೀಘ್ರದಲ್ಲೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನೂ ಭೇಟಿಯಾಗುವುದಾಗಿ ಹೇಳಿದ್ದಾರೆ.

ರಾಷ್ಟ್ರಕ್ಕೆ ಸಂಬಂಧಪಟ್ಟ ಮಹತ್ವದ ವಿಚಾರಗಳನ್ನು ತಾನು ರಾಹುಲ್ ಜತೆ ಚರ್ಚೆ ನಡೆಸಿದ್ದೇನೆ ಎಂದು ಮೊತ್ತ ಮೊದಲ ಬಾರಿಗೆ ಭೇಟಿಯ ವಿವರಗಳನ್ನು ಯೋಗ ಗುರು ಬಹಿರಂಗಪಡಿಸಿದ್ದು, ಇದರಲ್ಲಿ ರಾಜಕೀಯ ವಿಚಾರಗಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾನು ದೇಶದಲ್ಲಿನ ಸಮಸ್ಯೆಗಳ ಬಗ್ಗೆ ರಾಹುಲ್ ಜತೆ ಚರ್ಚೆ ನಡೆಸಿದೆ. ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವುದು, ಮಾವೋವಾದಿ ಸಮಸ್ಯೆ ಮತ್ತು ಬಡತನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಮುಂತಾದ ನನ್ನ ಕಳವಳಗಳನ್ನು ಅವರಲ್ಲಿ ಹೇಳಿಕೊಂಡಿದ್ದೇನೆ. ಈ ಭೇಟಿಗಾಗಿ ನಾನೇ ಮುಂದಾಗಿದ್ದೆ. ಅದರಂತೆ ರಾಹುಲ್ ಒಪ್ಪಿಗೆ ಸೂಚಿಸಿದ್ದರು ಎಂದರು.

ರಾಹುಲ್ ಅತ್ಯುತ್ತಮ ಗ್ರಹಣಶೀಲರು ಎಂದು ಹೇಳಿರುವ ರಾಮ್‌ದೇವ್, ತಾನು ಕಪ್ಪುಹಣದ ಪ್ರಸ್ತಾಪ ಮಾಡಿದಾಗ ಈ ಕುರಿತು ನೇರವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ಮಾತನಾಡುವಂತೆ ಸಲಹೆ ನೀಡಿದರು ಎಂದರು.

ಅದರಂತೆ ತಾನು ಪ್ರಧಾನಿಯವರನ್ನು ಭೇಟಿಯಾಗಲು ಮುಂದಾಗಿದ್ದೆ. ಅವರು ಕೂಡ ನನ್ನ ಕಳವಳಗಳನ್ನು ಒಪ್ಪಿಕೊಂಡಿದ್ದಾರೆ. ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ಪರಿಹಾರಕ್ಕೆ ಯತ್ನಿಸುವ ಭರವಸೆ ನೀಡಿದ್ದಾರೆ ಎಂದು ಯೋಗ ಗುರು ತಿಳಿಸಿದರು.

ರಾಮ್‌ದೇವ್ - ರಾಹುಲ್ ಭೇಟಿಯಾದ ನಂತರ ನೂತನ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ತರುವ ನಿಲುವಿನಲ್ಲಿ ಬದಲಾವಣೆ ಕಾಣಬಹುದೇ ಎಂಬ ಪ್ರಶ್ನೆಗೆ, ಮಹಾ ಚುನಾವಣೆ ಹತ್ತಿರ ಬರಲಿ, ಆಗ ನನ್ನ ಚುನಾವಣಾ ತಂತ್ರಗಳು ಬಹಿರಂಗವಾಗುತ್ತವೆ ಎಂದರು.

ರಾಹುಲ್ ಗಾಂಧಿಯವರು ದೇಶದ ಭರವಸೆಯ ಕಿರಣದಂತೆ ಕಾಣುತ್ತಿದ್ದಾರೆ ಎಂದು ನೀವು ಯೋಚಿಸಿದ್ದೀರಾ ಎಂದಾಗ, ಅವರು ಓರ್ವ ಪ್ರಾಮಾಣಿಕ ಮತ್ತು ಆಲಿಸುವ ಗುಣವನ್ನು ಹೊಂದಿದವರು ಎಂದು ಬಣ್ಣಿಸಿದರು.
ಸಂಬಂಧಿತ ಮಾಹಿತಿ ಹುಡುಕಿ