ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೈಪುರದಲ್ಲಿ ಈಗಲೂ ಬಾಲ್ಯವಿವಾಹದ ಕಾರುಬಾರು! (Ajmer | Child marriage | Foysagar | C R Meena | Additional collector,)
Bookmark and Share Feedback Print
 
ಅಜ್ಮೀರ್ ಪ್ರಾಂತ್ಯದಲ್ಲಿ ಬಾಲ್ಯ ವಿವಾಹ ಸಾಮಾನ್ಯ ಎಂಬಂತೆ ಈಗಲೂ ಮುಂದುವರಿದಿದ್ದು, ಪೋಷಕರು ಮುಂದಿನ ಕೆಲವು ದಿನಗಳಲ್ಲಿ ಮತ್ತಷ್ಟು ಬಾಲ್ಯ ವಿವಾಹ ನಡೆಸುವ ಸಿದ್ದತೆಯಲ್ಲಿ ಇರುವುದಾಗಿ ವರದಿಯೊಂದು ತಿಳಿಸಿದೆ.

ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಅಂತಹ ವಿವಾಹ ನಡೆಸಬಾರದು ಎಂದು ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಸಾಕಷ್ಟು ಪ್ರಚಾರ ನಡೆಸಿ,ಕಣ್ಗಾವಲು ಹಾಕಿದ್ದರು ಕೂಡ ಬಾಲ್ಯ ವಿವಾಹ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ. ಅಜ್ಮೀರ್ ಸಮೀಪದ ಫೋಯ್‌ಸಾಗರ್‌ನ ಚಾಮುಂಡಾ ದೇವಸ್ಥಾನದಲ್ಲಿ ಶುಕ್ರವಾರ ಕುಟುಂಬವೊಂದು ಬಾಲ್ಯವಿವಾಹವನ್ನು ನೆರವೇರಿಸಿತ್ತು. ಅಲ್ಲದೇ ಆ ಪ್ರದೇಶದಲ್ಲಿ ಕೆಲವು ಪೊಲೀಸರನ್ನೂ ನಿಯೋಜಿಸಲಾಗಿತ್ತು!

ಆದರೆ ಮಾಧ್ಯಮದ ಛಾಯಾಚಿತ್ರಕಾರರು ಬಾಲ್ಯವಿವಾಹದ ಫೋಟೋ ಕ್ಲಿಕ್ಕಿಸಿದ್ದನ್ನು ಗಮನಿಸಿದ ಪೋಷಕರು ಕೂಡಲೇ ದೇವಸ್ಥಾನದಿಂದ ಕಾಲ್ಕಿತ್ತಿದ್ದಾರೆ ಎಂದು ಮೂಲವೊಂದು ವಿವರಿಸಿದೆ.

ವಿಪರ್ಯಾಸ ಎಂಬಂತೆ, ಈ ಪ್ರದೇಶದಲ್ಲಿ ಬಾಲ್ಯ ವಿವಾಹದಂತಹ ಘಟನೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅಜ್ಮೀರ್ ಸಹಾಯಕ ಜಿಲ್ಲಾಧಿಕಾರಿ ಸಿ.ಆರ್.ಮೀನಾ ತಿಳಿಸಿದ್ದಾರೆ. ಆಯಾಕಟ್ಟಿನ ಪ್ರದೇಶಗಳಲ್ಲಿ ಬಾಲ್ಯ ವಿವಾಹ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಕಾನೂನು ವಿರೋಧಿಯಾಗಿದ್ದರೂ ಕೂಡ ರಾಜಸ್ತಾನದ ಹಲವು ಭಾಗಗಳಲ್ಲಿಯೂ ಬಾಲ್ಯ ವಿವಾಹ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ ವರ್ಷ ಬಾತ್ರೂ ಗ್ರಾಮದಲ್ಲಿ 48 ಜೋಡಿ ಬಾಲ್ಯ ವಿವಾಹ ನಡೆದಿತ್ತು. ಆದರೆ ಆ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲವಾಗಿತ್ತು ಎಂದು ಸಂಘಟನೆಯೊಂದು ಆರೋಪಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ