ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಾಲೂ ಹಂದಿಜ್ವರ ವೈರಸ್ ಇದ್ದಂತೆ: ಕಾಂಗ್ರೆಸ್ ಲೇವಡಿ (Swine flu virus | Congress | Lalu Prasad | Prem Chandra Mishra)
Bookmark and Share Feedback Print
 
ಡೆಂಗ್ಯು ರೋಗಕ್ಕೆ ಹೋಲಿಸಿದ್ದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ರಾಷ್ಟ್ರೀಯ ಜನತಾದಳದ ಮುಖಂಡ ಲಾಲೂ ಪ್ರಸಾದ್ ಯಾದವ್ 'ಹಂದಿಜ್ವರದ ವೈರಸ್' ಎಂದು ಲೇವಡಿ ಮಾಡಿದೆ. ಇದರೊಂದಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಾಂಕ್ರಾಮಿಕ ರೋಗಗಳು ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿರುವುದು ಖಚಿತವಾಗಿದೆ.

ಲಾಲೂ ಒಂದು ರೀತಿಯ ಹಂದಿಜ್ವರ ವೈರಸ್. ಇದರ ಪ್ರಭಾವ ಹೇಗಿರುತ್ತದೆ ಎಂದು ವಿಶ್ವಕ್ಕೆ ಗೊತ್ತಿದೆ. ಅವರು ಇಡೀ ರಾಜ್ಯವನ್ನೇ ರೋಗಗ್ರಸ್ಥವಾಗುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೇಮ್ ಚಂದ್ರ ಮಿಶ್ರಾ ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಡೆಂಗ್ಯು ಜ್ವರವನ್ನು ಹರಡುವ ಈಡಿಸ್ ಈಜಿಪ್ಟೈ ಸೊಳ್ಳೆಯಿದ್ದ ಹಾಗೆ. ಕಾಂಗ್ರೆಸ್ ಎನ್ನುವುದು ಮೌನ ಕೊಲೆಗಾರ. ಅದರಲ್ಲೂ ಮುಸ್ಲಿಮರಿಗೆ ಅದು ಭಾರೀ ಅಪಾಯಕಾರಿ ಎಂದು ಲಾಲೂ ಟೀಕಿಸಿದ್ದರು.

ಕೇಂದ್ರದಲ್ಲಿ ಒಮ್ಮೆ ಹತ್ತಿರ ಸರಿಯುತ್ತಾ, ಮತ್ತೊಮ್ಮೆ ದೂರ ಸರಿಯುತ್ತಿರುವ ಕಾಂಗ್ರೆಸ್ ಮತ್ತು ಆರ್‌ಜೆಡಿಗಳು ಪ್ರಸಕ್ತ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ನಾಟಕದಲ್ಲಿ ತೊಡಗಿವೆ.

ಅದರಂತೆ ಲಾಲೂ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ತಮ್ಮ ಪಕ್ಷದ ಜನಪ್ರಿಯತೆಯನ್ನು ಸಹಿಸದ ಲಾಲೂ ಮತ್ತು ಅವರ ಪಕ್ಷವು ಅಪಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ವಿರುದ್ಧ ಅವರ ಹೇಳಿಕೆಗಳು ಅವರ ಹತಾಶೆಯನ್ನು ಬಿಂಬಿಸುತ್ತಿವೆ ಎಂದಿದೆ.

ಬಿಜೆಪಿಯಲ್ಲಿ ಭಿನ್ನಮತ...
ಈ ನಡುವೆ ಆಡಳಿತ ಕೂಟದ ಬಿಜೆಪಿ ರಾಜೀನಾಮೆ ಪ್ರಹಸನವನ್ನು ಎದುರಿಸುತ್ತಿದೆ. ಬಿಹಾರ ಬಿಜೆಪಿ ಅಧ್ಯಕ್ಷ ಸಿ.ಪಿ. ಠಾಕೂರ್ ರಾಜೀನಾಮೆ ನೀಡಿದ್ದು, ತೀವ್ರ ಒತ್ತಡಗಳ ಹೊರತಾಗಿಯೂ ತನ್ನ ನಿರ್ಧಾರ ಬದಲಿಸಲು ನಿರಾಕರಿಸಿದ್ದಾರೆ.

ವಿಧಾನಸಭಾ ಚುನಾವಣೆಗಳಲ್ಲಿನ ಟಿಕೆಟ್ ಹಂಚಿಕೆ ಕುರಿತು ಠಾಕೂರ್ ಅಸಮಾಧಾನಗೊಂಡಿದ್ದರು. ತನ್ನ ಪುತ್ರನಿಗೆ ಸಿಗಬೇಕಾಗಿದ್ದ ಕ್ಷೇತ್ರವನ್ನು ಬಿಜೆಪಿಯು ಜೆಡಿಯುಗೆ ಬಿಟ್ಟುಕೊಟ್ಟಿದ್ದರಿಂದ ಅವರು ನಿರಾಸೆಗೊಂಡಿದ್ದರು. ಈ ಸಂಬಂಧ ಠಾಕೂರ್ ಮಾಡಿದ್ದ ಮನವಿಗೂ ಬಿಜೆಪಿ ಉನ್ನತ ನಾಯಕರು ಸ್ಪಂದಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ