ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನತೆಯ ಬೆಂಬಲ ಸಂತಸ ತಂದಿದೆ: ನಿತೀಶ್ ಕುಮಾರ್ (Bihar | Nitish Kumar | JDU | BJP)
Bookmark and Share Feedback Print
 
ನಾನು ಯಾವತ್ತೂ ಶ್ರೀಮಂತನಾಗಬೇಕೆಂಬ ಬಯಕೆಗಳಿಗೆ ನನ್ನಲ್ಲಿ ಆಶ್ರಯ ನೀಡಿದವನಲ್ಲ ಎಂದು ಹೇಳಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜನತೆಯು ನೀಡಿದ ಬೆಂಬಲವು ನನ್ನಲ್ಲಿ ಸಂತಸವನ್ನು ಉಕ್ಕಿಸಿ ಭಾವ ಪರವಶವನ್ನಾಗಿಸಿದೆ ಎಂದಿದ್ದಾರೆ.

PTI
ಇಲ್ಲಿ ಶ್ರೀಮಂತರಾಗಬೇಕು ಎಂಬ ಆಸೆಗಳನ್ನು ಇಟ್ಟುಕೊಂಡ ಸಾಕಷ್ಟು ಮಂದಿ ಇರುತ್ತಾರೆ. ಆದರೆ ನಾನು ಹಾಗಲ್ಲ. ಜನತೆ ನೀಡಿದ ಬೆಂಬಲವು ನನ್ನನ್ನು ಮೂಕನನ್ನಾಗಿಸಿದೆ ಎಂದು ಮಧುಬನಿ ಜಿಲ್ಲೆಯ ಪರ್ಸೌನಿ ಎಂಬಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದಲ್ಲಿ ಅಭಿವೃದ್ಧಿಯು ಪಡೆದುಕೊಂಡಿರುವ ವೇಗವನ್ನು ಉಲ್ಲೇಖಿಸುತ್ತಾ ಅವರು, ಪ್ರತಿಯೊಬ್ಬರೂ ಬಿಹಾರದಲ್ಲಿ ನಡೆದಿರುವ ಪ್ರಗತಿಯ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರು.

ಒಂದು ಕಾಲದಲ್ಲಿ ಭೀತಿ ಮತ್ತು ಭಯೋತ್ಪಾದನೆಗೆ ಸಿಲುಕಿದ್ದ ರಾಜ್ಯವು, ಪ್ರಸಕ್ತ ಕಾನೂನು ಸುವ್ಯವಸ್ಥೆಯ ಹಿಡಿತದಲ್ಲಿದೆ ಎಂಬುದನ್ನು ಹೇಳಲು ನಮಗೆ ಸಂತೋಷವಾಗುತ್ತಿದೆ. 2005ರ ನವೆಂಬರ್ ತಿಂಗಳಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ 50,000ಕ್ಕೂ ಹೆಚ್ಚು ಕ್ರಿಮಿನಲ್‌ಗಳು ಹಲವು ಪ್ರಕರಣಗಳಲ್ಲಿ ದೋಷಿಗಳೆಂದು ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ನಿತೀಶ್ ವಿವರಿಸಿದರು.

ಮಹಿಳೆಯರ ಅಭಿವೃದ್ಧಿ ಮತ್ತು ಅವರ ರಕ್ಷಣೆ, ಹಿಂದುಳಿದವರು, ಮಹಾ ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಏಳ್ಗೆಗಾಗಿ ನಾವು ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವರ ಹಿತರಕ್ಷಣೆಗಾಗಿ ನಾವು ಮಿತಿ ಮೀರಿ ಯತ್ನಿಸಿದ್ದೇವೆ ಎಂದರು.

ಎಲ್‌ಜೆಪಿ-ಆರ್‌ಜೆಡಿ ಜಂಟಿಯಾಗಿ ಅಧಿಕಾರಕ್ಕೆ ಬಂದರೆ ಶಾಲಾ ಮಕ್ಕಳಿಗೆ ಸೈಕಲ್ ಬದಲಿಗೆ ಬೈಕುಗಳನ್ನು ವಿತರಿಸುವುದಾಗಿ ಹೇಳಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿಕೆ ಪ್ರತಿಕ್ರಿಯಿಸಿದ ನಿತೀಶ್, ರಾಜಕೀಯ ಎನ್ನುವುದು ಮನರಂಜನೆಯ ವೇದಿಕೆಯಲ್ಲ ಎಂದರು.

ಮಿಥಿಲಾಂಚಲ್ ಪ್ರಾಂತ್ಯಗಳ ಅಭಿವೃದ್ದಿಯಾಗದೆ ರಾಜ್ಯ ಅಭಿವೃದ್ಧಿಯಾಗದು, ಬಿಹಾರ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿಯಾಗದು ಎಂದೂ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ