ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಒಡೆತನ; ಹಿಂದೂ ಮಹಾಸಭಾದಿಂದ ಕೇವಿಯಟ್ (Ayodhya title suit | Hindu Mahasabha | Supreme Court | Swami Chakrapani)
Bookmark and Share Feedback Print
 
ಅಯೋಧ್ಯೆ ಒಡೆತನ ವಿವಾದಕ್ಕೆ ಸಂಬಂಧಪಟ್ಟಂತೆ ಹಕ್ಕು ಸ್ಥಾಪನೆಯ ಕುರಿತ ಯಾವುದೇ ಏಕಪಕ್ಷೀಯ ಆದೇಶವನ್ನು ನೀಡದಂತೆ ಅಖಿಲ ಭಾರತ ಹಿಂದೂ ಮಹಾಸಭಾ ಸರ್ವೋಚ್ಚ ನ್ಯಾಯಾಲಯಕ್ಕೆ ಕೇವಿಯಟ್ ಅರ್ಜಿಯನ್ನು ಸಲ್ಲಿಸಿದೆ.

ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠವು ನೀಡಿರುವ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿಯನ್ನು ವಿಚಾರಣೆ ನಡೆಸದೆ ಯಾವುದೇ ಆದೇಶವನ್ನು ಜಾರಿಗೊಳಿಸಬಾರದು ಎಂದು ಹಿಂದೂ ಮಹಾಸಭಾವು ನ್ಯಾಯಾಲಯಕ್ಕೆ ತನ್ನ ಕೇವಿಯಟ್‌ನಲ್ಲಿ ಮನವಿ ಮಾಡಿದೆ.

ಹಿಂದೂ ಮಹಾಸಭಾವು ತನ್ನ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿಯವರ ಮೂಲಕ ಕೇವಿಯಟ್ ಅರ್ಜಿಯನ್ನು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದೆ.

ತಾವು ಅಯೋಧ್ಯೆಯ ವಿಚಾರದಲ್ಲಿ ಯಾವುದೇ ರಾಜೀ ಸಂಧಾನದ ಪರವಾಗಿಲ್ಲ. ಇಡೀ ವಿವಾದವನ್ನು ಕಾನೂನು ಮಾರ್ಗದ ಮೂಲಕ ಮಾತ್ರ ಪರಿಹಾರ ಕಂಡುಕೊಳ್ಳಲು ಬಯಸುತ್ತಿರುವುದಾಗಿ ಇದರ ಜತೆಗೆ ಇನ್ನೊಂದು ಮನವಿಯನ್ನು ಸಲ್ಲಿಸಲು ಯೋಚಿಸಲಾಗುತ್ತಿದೆ ಎಂದು ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಇಂದಿರಾ ತಿವಾರಿ ಹೇಳಿದ್ದಾರೆ.

ನಾವು ಕೇವಲ ಕಾನೂನು ಪರಿಹಾರವನ್ನಷ್ಟೇ ಬಯಸುತ್ತಿದ್ದೇವೆ. ನಾವು ಯಾವುದೇ ರೀತಿಯ ಸೌಹಾರ್ದಯುತ ಮಾತುಕತೆಯನ್ನು ವಿರೋಧಿಸುತ್ತಿದ್ದೇವೆ ಮತ್ತು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ಕಟ್ಟಬೇಕು ಎಂಬ ವಾದದ ಪರವಾಗಿದ್ದೇವೆ ಎಂದು ಆಕೆ ತಿಳಿಸಿದ್ದಾರೆ.

ಈ ಸಂಬಂಧ ಹೈಕೋರ್ಟಿನಲ್ಲಿ ಪ್ರಕರಣ ಎದುರಿಸಿದ್ದ ಎಲ್ಲಾ ಸಂಬಂಧಿತ ವಾದಿಗಳ ಜತೆ ಸಂಪೂರ್ಣ ಸಹಕಾರದಿಂದ ಮುಂದುವರಿಯಲು ಹಿಂದೂ ಮಹಾಸಭಾ ಬಯಸುತ್ತಿದೆ ಎಂದೂ ಅವರು ಹೇಳಿದ್ದಾರೆ.

60ಕ್ಕೂ ಹೆಚ್ಚು ವರ್ಷಗಳ ಕಾಲ ಅಯೋಧ್ಯೆ ಒಡೆತನ ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸೆಪ್ಟೆಂಬರ್ 30ರಂದು ತನ್ನ ಮಹತ್ವದ ತೀರ್ಪನ್ನು ನೀಡಿತ್ತು. ಅಯೋಧ್ಯೆಯ ವಿವಾದಿತ 2.77 ಎಕರೆ ಜಮೀನನ್ನು ಹಿಂದೂಗಳು ಮತ್ತು ಮುಸ್ಲಿಮರಿಗೆ ಹಂಚಿತ್ತು. ಅಲ್ಲದೆ ಇದೀಗ ತಾತ್ಕಾಲಿಕ ರಾಮಮಂದಿರ ಇರುವ ಜಾಗವೇ ರಾಮ ಜನ್ಮಭೂಮಿ, ಇದು ಹಿಂದೂಗಳಿಗೆ ಸೇರಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.

ಇದನ್ನು ವಿವಾದದ ಎಲ್ಲಾ ವಾದಿಗಳು ಕೂಡ ವಿರೋಧಿಸಿದ್ದು, ಸುಪ್ರೀಂ ಕೋರ್ಟಿಗೆ ಪ್ರವೇಶಿಸುವುದಾಗಿ ಹೇಳಿಕೊಂಡಿವೆ. ಜತೆಗೆ ಸೌಹಾರ್ದಯುತ ಮಾತುಕತೆಯ ಹಾದಿಗೂ ಒಲವು ತೋರಿಸುತ್ತಿವೆ. ಆರಂಭದಿಂದಲೂ ಹಿಂದೂ ಮಹಾಸಭಾ ತಾನು ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳಿಕೊಂಡು ಬಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ