ತಾಯಿ-ಮಗನಿಗೆ ಜೀವಾವಧಿ
ವರ್ಷದ ಹಿಂದೆ ಸೊಸೆಯನ್ನು ವರದಕ್ಷಿಣೆ ಹಿಂಸೆ ನೀಡಿ ಕೊಂದು ಹಾಕಿದ ಅತ್ತೆ ಮತ್ತು ಸಾವನ್ನಪ್ಪಿದ ಯುವತಿಯ ಗಂಡ, ಅಂದರೆ ಮಹಿಳೆಯ ಪುತ್ರನಿಗೆ ಉತ್ತರಾಖಂಡದ ಜಿಲ್ಲಾ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಇಂದಿರಾ ದೇವಿ ಮತ್ತು ಅಕೆಯ ಪುತ್ರ ಸತ್ತೆ ಸಿಂಗ್ ಎಂಬವರೇ ಜೀವಾವಧಿ ಶಿಕ್ಷೆಗೊಳಗಾದವರು.