ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಯಲಲಿತಾ ರಕ್ಷಣೆಗೆ ಸಾವಿರ ಸಿಬ್ಬಂದಿಗಳ ಆತ್ಮಹತ್ಯಾ ದಳ! (black cats | AIADMK | Jayalalithaa | Tamil Nadu)
Bookmark and Share Feedback Print
 
ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಅವರಿಗೆ ಪ್ರಾಣ ಬೆದರಿಕೆಗಳಿವೆ ಎಂಬ ಆರೋಪಗಳು ಕಳೆದ ಹಲವು ಸಮಯದಿಂದ ಕೇಳಿ ಬರುತ್ತಿವೆ. ಪ್ರಕರಣವನ್ನು ತಮಿಳುನಾಡು ಸರಕಾರವು ಸಿಬಿಐಗೆ ಒಪ್ಪಿಸಿದ್ದರೂ, ತಣ್ಣಗಾಗದ ಕಾರ್ಯಕರ್ತರು ತಮ್ಮ ನಾಯಕಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆತ್ಮಹತ್ಯಾ ದಳವೊಂದನ್ನು ಸ್ಥಾಪಿಸಿದ್ದಾರೆ.

ಇವರು ಎಐಎಡಿಎಂಕೆ ಪಕ್ಷದ ನೂತನ ಬ್ಲ್ಯಾಕ್‌ಕ್ಯಾಟ್ ಕಮಾಂಡೋಗಳು. ಜಯಲಲಿತಾ ಅವರ ಭಾವಚಿತ್ರಗಳನ್ನು ಈ ಕಮಾಂಡೋಗಳು ಧರಿಸುವ ಕಪ್ಪು ಟಿ-ಶರ್ಟುಗಳಿಗೆ ಅಚ್ಚು ಹಾಕಿಸಲಾಗಿದೆ. ತಮ್ಮ ನಾಯಕಿಯ ರಕ್ಷಣೆಗೆ ಇವರಲ್ಲಿರುವ ಆಯುಧ ಮಾರುದ್ದದ ಕೋಲು.
PR

ಇದು ಜಾರಿಗೆ ಬರುವುದು ಅಕ್ಟೋಬರ್ 18ರಂದು ಮಧುರೈಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ. ಲಾಠಿಗಳನ್ನು ಹೊಂದಿರುವ ಪಕ್ಷದ ಕೊಯಂಬತ್ತೂರಿನ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಕುಂಗ್ ಫು ಮತ್ತು ಕರಾಟೆ ಪರಿಣತರೂ ಹೌದು. ಪಕ್ಷದಲ್ಲಿ 'ಅಮ್ಮ' ಎಂದೇ ಖ್ಯಾತರಾಗಿರುವ ಜಯಲಲಿತಾ ಅವರ ರಕ್ಷಣೆಗಾಗಿ ತಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ಹೇಳುತ್ತಿದ್ದಾರೆ.

ಜಯಲಲಿತಾ ಅವರಿಗೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ ಬ್ಲ್ಯಾಕ್‌ಕ್ಯಾಟ್ ಕಮಾಂಡೋಗಳನ್ನೊಳಗೊಂಡ 'Z' ಮಾದರಿ ಭದ್ರತೆಯನ್ನು ಒದಗಿಸಿದೆ. ಆದರೂ ತನಗೆ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿಲ್ಲ ಎಂದು ಹೋದಲ್ಲೆಲ್ಲ ಹೇಳುತ್ತಾ ಬರುತ್ತಿದ್ದಾರೆ.

ಅಂದ ಹಾಗೆ, ಈ ಭದ್ರತಾ ಪಡೆಗಳು ಜಯಲಲಿತಾ ಅವರಿಗೆ ಹತ್ತಿರದಿಂದ ರಕ್ಷಣೆ ಒದಗಿಸುತ್ತಿಲ್ಲವಂತೆ. ದೂರದಿಂದ ಅಂದರೆ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ನಾಯಕಿ ಆಗಮಿಸುವ ಹೊತ್ತಿನಲ್ಲಿ ಜನರನ್ನು ನಿಯಂತ್ರಿಸುವುದು, ಅವರ ವಾಹನ ಸುಗಮವಾಗಿ ಸಾಗಲು ಅನುವು ಮಾಡಿಕೊಡುವುದು ಪ್ರಮುಖವಾದ ಕೆಲಸ ಎಂದು ವರದಿಗಳು ಹೇಳಿವೆ.

ನಮ್ಮ ಪಕ್ಷದ ನಾಯಕಿ ಸಾಕಷ್ಟು ಅಪರಿಚಿತ ಬೆದರಿಕಾ ಪತ್ರಗಳನ್ನು ಸ್ವೀಕರಿಸಿದ್ದಾರೆ. ಆದರೆ ಡಿಎಂಕೆ ಸರಕಾರವು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ನಾವು 1,000 ಮಂದಿಯ ಆತ್ಮಹತ್ಯಾ ದಳವನ್ನು ಆಕೆಗೆ ರಕ್ಷಣೆ ಒದಗಿಸುವ ಸಲುವಾಗಿ ಅಸ್ತಿತ್ವಕ್ಕೆ ತಂದಿದ್ದೇವೆ ಎಂದು ಎಐಎಡಿಎಂಕೆ ಶಾಸಕ ಎಸ್.ಪಿ. ವೇಲುಮಣಿ ತಿಳಿಸಿದ್ದಾರೆ.

ವಿಧ್ವಂಸಕ ಕೃತ್ಯ ನಡೆಸಬೇಕೆಂದು ಜನಸಮೂಹ ಸೇರಿದ ಹೊತ್ತಿನಲ್ಲಿ ಒಳ ನುಗ್ಗಿದರೆ, ಅಂತವರನ್ನು ನಮ್ಮ ಕಮಾಂಡೋಗಳು ಮಟ್ಟ ಹಾಕುತ್ತಾರೆ. ಅದೇ ಕಾರಣಕ್ಕೆ ನಾವು ಸಾವಿರ ಮಂದಿಯನ್ನು ಆಯ್ಕೆ ನಡೆಸಿ, ಅವರಿಗೆ ಕಠಿಣ ಹೋರಾಟದ ತರಬೇತಿಗಳನ್ನು ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಪಕ್ಷದ ಕಮಾಂಡೋ, 'ನಾವು ಹಣಕ್ಕಾಗಿ ಈ ಪಡೆಯನ್ನು ಸೇರಿಕೊಂಡಿಲ್ಲ. ನಮ್ಮ ನಾಯಕಿಯನ್ನು ರಕ್ಷಿಸುವ ಸಲುವಾಗಿ ನಾವು ಪ್ರಾಣವನ್ನೇ ಅರ್ಪಿಸಲು ಸಿದ್ಧರಿದ್ದೇವೆ' ಎಂದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ