ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಬೇಡ, ಬಿಜೆಪಿ ಬೇಕು- ಹೀಗ್ಯಾಕೆ?; ನಿತೀಶ್‌ಗೆ ರಾಹುಲ್ (Rahul Gandhi | Nitish Kumar | Congress | Assembly polls)
Bookmark and Share Feedback Print
 
ಬಿಹಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಪ್ರಗತಿ ಶೂನ್ಯಕ್ಕೆ ತಲುಪಿದೆ ಎಂದಿದ್ದಾರೆ. ಅಲ್ಲದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಚಾರಕ್ಕೆ ಬರದಂತೆ ನೋಡಿಕೊಂಡ ನಿತೀಶ್‌ಗೆ, ಬಿಜೆಪಿ ಯಾಕೆ ಬೇಕು ಎಂದೂ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಜ್ಯಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಿದ್ದರೂ ಇಲ್ಲಿ ಯಾವುದೇ ಪ್ರಗತಿ ಕಾರ್ಯಗಳು ನಡೆಯದೇ ಇರುವುದು ದುರದೃಷ್ಟಕರ. ಎನ್‌ಡಿಎ ಸರಕಾರವು ಬಿಹಾರಕ್ಕೆ ನೀಡಿದ್ದು ಕೇವಲ 50,000 ಕೋಟಿ ರೂಪಾಯಿ. ಆದರೆ ಅದರ ದುಪ್ಪಟ್ಟು ಅನುದಾನವನ್ನು ಯುಪಿಎ ನೀಡಿದೆ ಎಂದು ಅರಾರಿಯಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ವಾಗ್ದಾಳಿ ನಡೆಸಿದರು.

ಅಕ್ಟೋಬರ್-ನವೆಂಬರ್ ತಿಂಗಳ ಬಿಹಾರ ವಿಧಾನಸಭಾ ಚುನಾವಣೆಗಳಿಗಾಗಿ ರಾಜ್ಯದಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ರಾಹುಲ್ ಗುರುವಾರ ಕಟಿಹಾರ್ ಮತ್ತು ಅರಾರಿಯಾ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಬಿಹಾರದ ಪ್ರಗತಿಗಾಗಿ ಕಾಂಗ್ರೆಸ್ ಬದ್ಧವಾಗಿದೆ, ನಮ್ಮ ಪಕ್ಷವು ಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ ಎಂದು ಒತ್ತಿ ಹೇಳಿದರು.

ತನ್ನ ಐದು ವರ್ಷಗಳ ಆಡಳಿತದ ಸಂದರ್ಭದಲ್ಲಿ ಬಿಹಾರವು ಸಾಕಷ್ಟು ಪ್ರಗತಿ ಕಂಡಿದೆ ಎಂಬ ನಿತೀಶ್ ವಾದಕ್ಕೆ ತಿರುಗೇಟು ನೀಡುತ್ತಾ ಅವರು, ರಾಜ್ಯದ ಜನತೆ ಎರಡು ಗಂಟೆಯ ವಿದ್ಯುತ್ ಅಥವಾ ಕುಡಿಯುವ ನೀರು ಅಥವಾ ಆರೋಗ್ಯ ಮತ್ತು ಇತರ ಯಾವುದೇ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಎಲ್ಲರಿಗಾಗಿ ಭಾರತ ನಿರ್ಮಾಣದ ವಿರುದ್ಧದ ಸಿದ್ಧಾಂತ ಹೊಂದಿರುವ ಬಿಜೆಪಿಯ ಜತೆ ಪಾಲುದಾರಿಕೆ ಹೊಂದಿರುವ ನಿತೀಶ್ ಕುಮಾರ್ ಅವರ ಬದ್ಧತೆಯನ್ನು ಕೂಡ ರಾಹುಲ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ಯಾವುದೇ ಧರ್ಮ, ಸಮುದಾಯ, ಜಾತಿ ಅಥವಾ ಪ್ರಾಂತ್ಯವೆಂದು ತಾರತಮ್ಯ ಮಾಡದೆ, ಸರ್ವರಿಗೂ ಸಮಪಾಲು ಎಂಬ ಭಾರತ ನಿರ್ಮಾಣದ ಸಿದ್ಧಾಂತಕ್ಕಾಗಿ ಕಾಂಗ್ರೆಸ್ ಹೋರಾಡುತ್ತಿದೆ ಎಂದೂ ಅವರು ಬೆನ್ನು ತಟ್ಟಿಕೊಂಡರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಚಾರ ಮಾಡುವುದನ್ನು ತಾನು ತಡೆದಿರುವುದಾಗಿ ನಿತೀಶ್ ಕುಮಾರ್ ಜನರಿಗೆ ಹೇಳುತ್ತಿದ್ದಾರೆ. ಆದರೆ ಗುಜರಾತ್ ಮಾದರಿಯನ್ನಾಗಿಟ್ಟುಕೊಂಡ ಸಿದ್ಧಾಂತವನ್ನು ಹೊಂದಿರುವ ಪಕ್ಷದ ಜತೆ ತನ್ನ ಮೈತ್ರಿಯನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದರು.

ನಿತೀಶ್ ಕುಮಾರ್ ಅವರ ಮೈತ್ರಿ ಬಿಜೆಪಿ ನಾಯಕರೊಂದಿಗೆ ಅಲ್ಲ, ಅವರು ಅದರ ಸಿದ್ಧಾಂತಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆ ಮೂಲಕ ಧರ್ಮ ಮತ್ತು ಸಮುದಾಯಗಳನ್ನು ಬಳಸಿ ಸಮಾಜದ ವಿಭಜನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ