ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ವಿವಾದ ಸುಪ್ರೀಂ ಕೋರ್ಟಿಗೆ ಹೋಗಲಿ: ಎಲ್‌ಜೆಪಿ (Ayodhya issue | Supreme Court | LJP | Babri Mosque)
Bookmark and Share Feedback Print
 
ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ತಕ್ಷಣವೇ ಸುಪ್ರೀಂ ಕೋರ್ಟಿಗೆ ಕಳುಹಿಸಬೇಕು ಎಂದು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಲೋಕ ಜನಶಕ್ತಿ ಪಕ್ಷವು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪು ವಿವಾದಿತ ಜಾಗದ ಕುರಿತು ಕಾನೂನಿಗಿನಂತ ನಂಬಿಕೆಯ ಮೇಲೆ ಹೆಚ್ಚು ಆಧರಿಸಿದೆ ಎಂಬ ಕೂಗನ್ನು ಗಂಭೀರವಾಗಿ ಪರಿಗಣಿಸಿರುವ ನಾವು, ಇದನ್ನು ತಕ್ಷಣವೇ ಸುಪ್ರೀಂ ಕೋರ್ಟಿಗೆ ರವಾನಿಸುವ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದೇವೆ ಎಂದು ಲೋಕ ಜನಶಕ್ತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾಲಿಕ್ ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ವಿವಾದದ ಕುರಿತು ನೀಡಿರುವ ತೀರ್ಪಿನ ಬಗ್ಗೆ ಕೇಂದ್ರ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ತಕ್ಷಣವೇ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಹಸ್ತಾಂತರಿಸಬೇಕು ಎಂದರು.

ಈ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಹಸ್ತಾಂತರಿಸದಿದ್ದರೆ ಇದನ್ನೇ ಸಂಘ ಪರಿವಾರವು ತನಗೆ ಸಿಕ್ಕಿದ ಜಯಭೇರಿ ಎಂದು ಪರಿಗಣಿಸಬಹುದು ಎನ್ನುವುದು ಪಕ್ಷದ ಲೆಕ್ಕಾಚಾರ. ಇದಕ್ಕೆ ಕೇಂದ್ರವು ಅವಕಾಶ ನೀಡಬಾರದು ಎಂದು ಖಾಲಿಕ್ ಅಭಿಪ್ರಾಯಪಟ್ಟರು.

ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಮತ್ತೆ ನಷ್ಟದ ಪರಿಸ್ಥಿತಿ ಉದ್ಭವಿಸಿರುವುದು ಭಾರತೀಯ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಬಹುದು. ಇದು ಅಲ್ಪಸಂಖ್ಯಾತರ ಹಕ್ಕುಗಳ ದಮನಕ್ಕೂ ಕಾರಣವಾಗಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಬಿಹಾರದಲ್ಲಿ ಶೇ.16ರಷ್ಟು ಮುಸ್ಲಿಂ ಮತದಾರರಿದ್ದು, ಇದರ ಲಾಭ ಪಡೆದುಕೊಳ್ಳಲು ಬಹುತೇಕ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜತೆಗೆ ಮುಸ್ಲಿಮರ ಓಲೈಕೆಗಾಗಿ ಅಗತ್ಯವಿರುವ ಹೇಳಿಕೆಗಳನ್ನೂ ನೀಡುತ್ತಿವೆ.

ಇತ್ತೀಚೆಗಷ್ಟೇ ಲೋಕ ಜನಶಕ್ತಿ ಪಕ್ಷದ ವರಿಷ್ಠ ರಾಮ್ ವಿಲಾಸ್ ಪಾಸ್ವಾನ್ ಸಂಘ ಪರಿವಾರದ ವಿರುದ್ಧ ಕಿಡಿ ಕಾರಿದ್ದರು. ದೇಶದಲ್ಲಿ ಮೂಲಭೂತವಾದಿ ಸಂಘಟನೆಯೆಂದು-ಮತಾಂಧ ಸಂಘಟನೆಯೆಂದು ಆರೆಸ್ಸೆಸನ್ನು ಟೀಕಿಸುವುದಾದರೆ, ಅದನ್ನು ಯಾಕೆ ನಿಷೇಧಿಸಬಾರದು? ಕೇವಲ ಸಿಮಿಯನ್ನು ಮಾತ್ರ ಯಾಕೆ ನಿಷೇಧಿಸಲಾಗಿದೆ ಎಂದು ಕೇಂದ್ರ ಸರಕಾರಕ್ಕೆ ಪ್ರಶ್ನೆ ಎಸೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ