ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ರ‌್ಯಾಲಿ; ಕಾಂಗ್ರೆಸ್ ಕರ್ಮಕಾಂಡ ಬಟಾಬಯಲು (Congress | Maharashtra | Sonia Gandhi | Ashok Chavan)
Bookmark and Share Feedback Print
 
ಮಹಾತ್ಮ ಗಾಂಧೀಜಿಯವರ 'ಸೇವಾಗ್ರಾಮ'ದಲ್ಲಿ ತನ್ನ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಕರೆಸಿ ರಾಜಕೀಯ ಸಮಾವೇಶ ಮಾಡಲು ಹೊರಟಿರುವ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ. ಈ ರ‌್ಯಾಲಿಗಾಗಿ ಅಕ್ರಮವಾಗಿ ಕೋಟಿಗಟ್ಟಲೆ ಸಂಗ್ರಹಿಸಿರುವುದರ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸುತ್ತಿರುವುದು ಟಿವಿ ಚಾನೆಲ್‌ಗಳಲ್ಲಿ ಬಹಿರಂಗವಾಗಿದೆ.

ಗಾಂಧೀಜಿಯವರ ಜನಪ್ರಿಯ ಸೇವಾಗ್ರಾಮದಲ್ಲಿ (ವರದಾ ಜಿಲ್ಲೆ) ಇಂದು ನಡೆಯುವ 'ಸದ್ಭಾವನಾ ರ‌್ಯಾಲಿ'ಯಲ್ಲಿ ಸೋನಿಯಾ ಗಾಂಧಿಯವರು ಬರಲಿರುವ ಹಿನ್ನೆಲೆಯಲ್ಲಿ ಪಕ್ಷವು ಸಮಾರಂಭವನ್ನು ವೈಭವೋಪೇತವಾಗಿ ನಡೆಸಬೇಕೆಂಬ ಹುಚ್ಚಿಗೆ ಬಿದ್ದು, ಅಕ್ರಮವಾಗಿ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಲು ತೊಡಗಿತ್ತು.

ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ ರಾವ್ ಠಾಕ್ರೆ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಚತುರ್ವೇತಿಯವರು ರಹಸ್ಯವಾಗಿ ನಡೆಸಲಾಗುತ್ತಿದ್ದ ಮಾತುಕತೆಯಿದು. ಆದರೆ ತಮ್ಮ ಮಾತುಗಳು ಕ್ಯಾಮರಾದಲ್ಲಿ ದಾಖಲಾಗುತ್ತಿದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ.

ರ‌್ಯಾಲಿಗೆ ಮಹಾರಾಷ್ಟ್ರದ ಸಚಿವರಿಂದ ಹೇಗೆ ಹಣ ಸಂಗ್ರಹಿಸಲಾಗಿದೆ ಎಂಬುದರ ಕುರಿತು ಠಾಕ್ರೆ ಮತ್ತು ಚತುರ್ವೇದಿ ಮಾತುಕತೆ ಆರಂಭಿಸಿದ್ದರು.

ಠಾಕ್ರೆ: ಮಹಾರಾಷ್ಟ್ರ ಸಚಿವ ಸಂಪುಟದಿಂದಲೂ ಹಣ ಸಂಗ್ರಹಿಸಲಾಗಿದೆ.

ಚತುರ್ವೇದಿ: ನಾವು ಇನ್ನೂ ಹೆಚ್ಚಿನ ಹಣ ನೀಡಬೇಕೆಂದು ಕೇಳಿದರೆ ಸಚಿವರು ನಮ್ಮಿಂದ ದೂರ ಸರಿಯಬಹುದು.

ಠಾಕ್ರೆ: ಹೌದು, ನಾವು ಈಗಾಗಲೇ ತಲಾ 10 ಲಕ್ಷ ರೂಪಾಯಿ ನೀಡಿದ್ದೇವೆ. ಹಾಗಾಗಿ ನೀವು ಹೇಳಿದ್ದನ್ನೇ ಅವರು ಹೇಳುತ್ತಿದ್ದಾರೆ.

ಠಾಕ್ರೆ: ಸುಮಾರು 1.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಅವರು ಬಾವುಟಗಳಿಗಾಗಿನ ಹಣವನ್ನು ಈಗಾಗಲೇ ಪಾವತಿ ಮಾಡಿದ್ದಾರೆ. ಮುಖ್ಯಮಂತ್ರಿ ಕೂಡ ತಾವು ಹಣ ನೀಡುತ್ತೇವೆ ಎಂದಿದ್ದಾರೆ. ನಾನು ರ‌್ಯಾಲಿಗೆ ಬೇಕಾಗುವ 2,000 ಬಸ್ಸುಗಳಿಗಾಗಿ 2 ಕೋಟಿ ರೂಪಾಯಿಗಳನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

ತನ್ನ ಮಾತುಕತೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಠಾಕ್ರೆಯವರು ಮುಖ್ಯಮಂತ್ರಿ ಅಶೋಕ್ ಚೌಹಾನ್ ಅವರನ್ನು ಜುಗ್ಗ ಎಂದ ಕರೆಯಲು ಕೂಡ ಹಿಂದೇಟು ಹಾಕುವುದಿಲ್ಲ. ಆದರೂ ಅವರು ನಮ್ಮ ಹಾದಿಗೆ ಬಂದಿದ್ದಾರೆ. ಎರಡು ಕೋಟಿ ರೂಪಾಯಿಗಳನ್ನು ತಕ್ಷಣವೇ ನೀಡುವುದಾಗಿ ಹೇಳಿದ್ದಾರೆ ಎಂದಿರುವುದು ದಾಖಲಾಗಿದೆ.

ಮಹಾರಾಷ್ಟ್ರ ಸಚಿವ ಸಂಪುಟದ 11 ಸಚಿವರು ತಲಾ 10 ಲಕ್ಷ ರೂಪಾಯಿಗಳಂತೆ ರ‌್ಯಾಲಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಬರೋಬ್ಬರಿ 2 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಇದೆಲ್ಲ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆಗಳು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿವೆ.

ಪ್ರತಿ ಸಚಿವರಿಂದ 10 ಲಕ್ಷ ರೂಪಾಯಿ ವಸೂಲಿ ಮಾಡಿರುವುದ, ಸ್ವತಃ ಮುಖ್ಯಮಂತ್ರಿ 2 ಕೋಟಿ ರೂಪಾಯಿ ನೀಡಿರುವುದು ಎಲ್ಲಿಂದ? ಇದು ಕಾಂಗ್ರೆಸ್ ಪಕ್ಷದೊಳಗಿನ ಭ್ರಷ್ಟ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಟೀಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ