ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೇಗವಾಗಿ ಬೆಳೆಯುತ್ತಿರುವ ವಿಶ್ವದ ನಗರಗಳಲ್ಲಿ ಬೆಂಗಳೂರು (Bangalore | Chennai | fastest-growing cities | Forbes)
Bookmark and Share Feedback Print
 
ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದಿವೆ. ಅಹಮದಾಬಾದ್, ಬೆಂಗಳೂರು ಮತ್ತು ಚೆನ್ನೈಗಳು ಈ ಮೂರು ಭಾರತೀಯ ನಗರಗಳು ಎಂದು ಫೋರ್ಬ್ಸ್ ನಿಯತಕಾಲಿಕ ಹೇಳಿದ್ದು, ಗುಜರಾತ್ ಮಾರುಕಟ್ಟೆ ಪೂರಕ ಮತ್ತು ಉದ್ಯಮ ಸ್ನೇಹಿ ರಾಜ್ಯ ಎಂದಿದೆ.

ಇದರ ಪ್ರಕಾರ ನ್ಯೂಯಾರ್ಕ್ ಅಥವಾ ಮುಂಬೈಯಂತಹ ಬೃಹತ್ ನಗರಗಳು ಮುಂದಿನ ದಶಕದ ಶಕ್ತಿಕೇಂದ್ರಗಳಾಗಿರಲು ಸಾಧ್ಯವಿಲ್ಲ. ಬದಲಿಗೆ ಚೀನಾದ ಚಾಂಗ್‌ಕಿಂಗ್, ಚಿಲಿಯ ಸಾಂಟಿಯಾಗೋ, ಟೆಕ್ಸಾ‌ಸ್‌ನ ಆಸ್ಟಿನ್ ಆಗಿರಬಹುದು. ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಹಾಂಕಾಂಗ್ ಅಥವಾ ಟೋಕಿಯೋಗಳಂತಹ ಜಾಗತಿಕ ಕೇಂದ್ರಗಳಿಂದ ಇತರ ನಗರಗಳು ಪ್ರಬಲವಾಗಬಹುದು ಎಂದು ನಿಯತಕಾಲಿಕ ಹೇಳಿದೆ.

ಇನ್ಫೋಸಿಸ್ ಮತ್ತು ವಿಪ್ರೋಗಳಂತಹ ಕಂಪನಿಗಳ ತವರು ಕರ್ನಾಟಕದ ಬೆಂಗಳೂರು, ಭಾರತದ ಇತರ ರಾಜ್ಯ ಅಥವಾ ನಗರಗಳಿಗಿಂತ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಗುಜರಾತಿನನ ಅಹಮದಾಬಾದ್, ಈ ವರ್ಷ ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿರುವ ತಮಿಳುನಾಡಿನ ಚೆನ್ನೈಗಳು ಭಾರತದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳು ಎಂದು ಗುರುತಿಸಲಾಗಿದೆ.

ಭಾರತದ ಪ್ರಮುಖ ಕೈಗಾರಿಕೆಗಳಾದ ವಾಹನಗಳ ಉತ್ಪಾದನೆ, ಸಾಫ್ಟ್‌ವೇರ್ ಮತ್ತು ಮನರಂಜನೆ ಉದ್ಯಮಗಳು ಇವೇ ನಗರಗಳಲ್ಲಿ ನೆಲೆ ಕಂಡುಕೊಳ್ಳುತ್ತಿವೆ.

ಅಹಮದಾಬಾದ್ ಗುಜರಾತಿನ ಅತಿ ದೊಡ್ಡ ಮಹಾನಗರ ಪಾಲಿಕೆ ಎಂದು ಹೇಳಿರುವ ಫೋರ್ಬ್ಸ್, ಭಾರತದ ರಾಜ್ಯಗಳಲ್ಲೇ ಗುಜರಾತ್ ಮಾರುಕಟ್ಟೆ ಪೂರಕ ಮತ್ತು ಉದ್ಯಮ ಸ್ನೇಹಿ ಎಂದು ಬಣ್ಣಿಸಿದೆ.

ಗುಜರಾತಿನ ಆರ್ಥಿಕ ನೀತಿಗಳು ಇಂತಹ ಬದಲಾವಣೆಗಳನ್ನು ತಂದಿವೆ. ಪಶ್ಚಿಮ ಬಂಗಾಲದಲ್ಲಿ ತೀವ್ರ ವಿವಾದಕ್ಕೆ ತುತ್ತಾದ ಟಾಟಾ ನ್ಯಾನೋ ಕಾರು ತಯಾರಿಕಾ ಸ್ಥಾವರವನ್ನು ಸನಂದ್‌ಗೆ ಸ್ಥಳಾಂತರಿಸಿಕೊಂಡಿದೆ. ಸಿಂಗಾಪುರ ಮತ್ತು ಮಲೇಷಿಯಾದ ಕೆಲವು ಭಾಗಗಳು ಸೇರಿದಂತೆ ದೇಶೀಯ ಮಟ್ಟದಲ್ಲೂ ಉದ್ಯಮಕ್ಕೆ ಪೂರಕ ಸೌಕರ್ಯಗಳನ್ನು ಒದಗಿಸುವಲ್ಲಿ ಗುಜರಾತ್ ಯಶಸ್ವಿಯಾಗಿದೆ.

ಅದೇ ಬೆಂಗಳೂರು ಕೂಡ. ತಂತ್ರಜ್ಞಾನ ಮತ್ತು ಸೇವಾ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಗೋಲ್ಡ್‌ಮನ್ ಸಾಚ್ಸ್, ಸಿಸ್ಕೋ, ಎಚ್‌ಪಿ ಸೇರಿದಂತೆ ಭಾರತ ಮೂಲದ ಟಾಟಾ ಮುಂತಾದ ಕಂಪನಿಗಳು ಬೆಂಗಳೂರಿನಲ್ಲಿವೆ. ವಿಶ್ವದಾದ್ಯಂತ 60,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳು ಕೂಡ ಇದೇ ನಗರದಿಂದ ಹುಟ್ಟಿದವು.
ಸಂಬಂಧಿತ ಮಾಹಿತಿ ಹುಡುಕಿ