ಬಸ್ತಾರ್ನಲ್ಲಿ ಬಿಎಸ್ಎಫ್ ಯೋಧರ ಮೇಲೆ ನಡೆದ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ನಕ್ಸಲ್ ನಾಯಕ ಹಾಗೂ ಆತಮ ಪತ್ನಿಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉತ್ತರ ಬಸ್ತಾರ್ ಪ್ರದೇಶದಲ್ಲಿ ನಕ್ಲಲ್ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗೇಶ್ ಮತ್ತು ಆತನ ಪತ್ನಿ ತಾರಾಬಾಯಿಯನ್ನು ಶಿವಪುರ್ ಗ್ರಾಮದಲ್ಲಿ ಹತ್ಯೆ ಮಾಡಲಾಯಿತು ಎಂದು ಪೊಲೀಸ್ ಮಹಾನಿರ್ದೇಶಕ ಆರ್.ಕೆ.ವಿಜ್ ತಿಳಿಸಿದ್ದಾರೆ.
ದವಸ ಧಾನ್ಯಗಳನ್ನು ತರಲು ಮಾರುಕಟ್ಟೆಗೆ ಆಗಮಿಸಿದ ನಕ್ಸಲ್ ದಂಪತಿಗಳಿಗೆ ಘೇರಾವ್ ಹಾಕಿದ ಪೊಲೀಸರು ಶರಣಾಗುವಂತೆ ಕೋರಿದರು. ಆದರೆ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದರಿಂದ ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬ ನಕ್ಸಲ್ ಮುಖಂಡ ಪರಾರಿಯಾಗಿದ್ದು, ಎರಡು ಪಿಸ್ತೂಲ್ ಮತ್ತು 49 ಸಾವಿರ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಹತ್ಯೆಯಾದ ನಕ್ಸಲ್ ಮುಖಂಡ, ಹಲವಾರು ಕೊಲೆ, ಅಪಹರಣ,ಸುಲಿಗೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದನು ಎಂದು ಪೊಲೀಸ್ ಅಧಿಕಾರಿ ಆರ್.ಕೆ.ವಿಜ್ ಹೇಳಿದ್ದಾರೆ.