ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ದೇಶಗಳು ಭಾರತದ ಏಳಿಗೆಗೆ ಅಡ್ಡಿಯಾಗಿವೆ ಎಂದು ಭೂಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ಉಗ್ರರಿಗೆ ಸರಕಾರ ನೀಡುತ್ತಿರುವ ನೆರವಿನಿಂದಾಗಿ, ದೇಶಕ್ಕೆ ಅಪಾಯ ತರಲಿದೆ ಎಂದು ಭಾರತೀಯ ಸೇನೆ ಮತ್ತು ಅದರ ಮುಂದಿರುವ ಸವಾಲುಗಳು ಕುರಿತು ವಿಚಾರ ಸಂಕೀರಣದಲ್ಲಿ ತಿಳಿಸಿದ್ದಾರೆ.
ಚೀನಾ ಆರ್ಥಿಕವಾಗಿ, ಸೇನಾ ಲೆಕ್ಕಾಚಾರದಲ್ಲಿ ಸಮರವೇಗದಲ್ಲಿ ಬೆಳೆಯುತ್ತಿದ್ದು, ಮುಂಬರುವ ವರ್ಷಗಳಲ್ಲಿ ಭಾರಿ ಸವಾಲನ್ನು ಎದುರಿಸಬೇಕಾಗಿದೆ. ಚೀನಾ ಗಢಿಯಲ್ಲಿ ನುಸುಳುವಿಕೆ ಇಲ್ಲದಿರುವುದರಿಂದ ಭದ್ರತೆ ದೃಷ್ಟಿಯಲ್ಲಿ ಅಪಾಯಕಾರಿಯಾಗಿಲ್ಲ ಎಂದು ಸಿಂಗ್ ಅಭಿಪ್ರಾಯಪಟ್ಟರು.
ಸದ್ಯದ ಪರಿಸ್ಥಿತಿಯಲ್ಲಿ ಅಣುಯುಗವಾಗಿದ್ದರಿಂದ, ನೆರೆಯ ರಾಷ್ಟ್ರಗಳ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಭೂಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ತಿಳಿಸಿದ್ದಾರೆ.