ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದನೆ ಮತ್ತು ಹಿಂದೂಗಳಿಗೆ ಸಂಬಂಧವಿಲ್ಲ: ಆರೆಸ್ಸೆಸ್ (Terrorism | Hindu | RSS | Mohan Bhagwat)
Bookmark and Share Feedback Print
 
ಕೇಸರಿ ಭಯೋತ್ಪಾದನೆ ಅಥವಾ ಹಿಂದೂ ಭಯೋತ್ಪಾದನೆ ಎಂಬ ಉಕ್ತಿಗಳ ಬಳಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಯೋತ್ಪಾದನೆ ಮತ್ತು ಹಿಂದೂಗಳಿಗೆ ಪರಸ್ಪರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ನಾಗ್ಪುರದ ರೇಶಿಮ್ ಭಾಗ್ ಮೈದಾನದಲ್ಲಿ ವಾರ್ಷಿಕ ದಸರಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಭಯೋತ್ಪಾದನೆ ಮತ್ತು ಹಿಂದೂಗಳು ಪರಸ್ಪರ ವಿರೋಧಾಭಾಸಗಳು, ಇವು ಯಾವತ್ತೂ ಪರಸ್ಪರ ಸಂಬಂಧ ಹೊಂದಿರಲು ಸಾಧ್ಯವಿಲ್ಲ. ಇದು ಭಾರತದ ಹಿಂದೂಗಳ ಶಕ್ತಿಯನ್ನು ಕುಂದಿಸಲು ಮತ್ತು ಮುಸ್ಲಿಮರನ್ನು ಓಲೈಸಲು ಮಾಡಲಾಗುವ ಯತ್ನ ಎಂದರು.

ಹಿಂದೂಗಳು ಪಾಲ್ಗೊಂಡಿರುವ ಬೆರಳೆಣಿಕೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಹಿಂದೂ ಸಮುದಾಯದ ಮೇಲೆ ಆರೋಪಗಳನ್ನು ಮಾಡುವುದು ಸೂಕ್ತವಲ್ಲ ಮತ್ತು ನ್ಯಾಯಯುತವಾದ ಹಾದಿಯಲ್ಲ. ಸಾಮಾನ್ಯವಾಗಿ ಹಿಂದೂಗಳು ಭಯೋತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಭಾಗ್ವತ್ ಹೇಳಿದರು.

ದೇಶದಲ್ಲಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸರಕಾರ ವಿಫಲವಾಗಿರುವುದರಿಂದ ಬಹುಶಃ ಹಿಂದೂ ಭಯೋತ್ಪಾದನೆ ಎಂಬ ಹೊಸ ದಾಳವನ್ನು ಹಾಕಲಾಗಿದೆ ಎಂದು ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಸುಳ್ಳು ಪ್ರಚಾರ ಮಾಡುವುದು, ಹಿಂದೂ ಸಂತರು ಮತ್ತು ಉದಾತ್ತ ಗುಣದ ನಾಗರಿಕರನ್ನು ಅಪಮಾನ ಮಾಡುವುದರ ಮೂಲಕ ಹಿಂದೂಗಳನ್ನು ದಾರಿ ತಪ್ಪಿಸುವ ಪಾಪದ ಪಿತೂರಿಗಳಿವು ಎಂದು ಬಣ್ಣಿಸಿದ ಅವರು, ಕಾಂಚಿ ಶಂಕರಾಚಾರ್ಯ ಶ್ರೀಗಳ ಮೇಲಿನ ಹತ್ಯಾ ಯತ್ನ ಪ್ರಕರಣ ಮತ್ತು ಇಂತಹ ಇತರ ಕಿರುಕುಳ ಪ್ರಕರಣಗಳನ್ನು ಉದಾಹರಿಸಿದರು.

ರಾಮಮಂದಿರ ವಿಚಾರದ ಕುರಿತು ಕೋರ್ಟ್ ನೀಡಿರುವ ತೀರ್ಪನ್ನು ಪ್ರಸ್ತಾಪಿಸಿದ ಭಾಗ್ವತ್, ಇದು ಸಮಾಜದ ಎಲ್ಲಾ ವರ್ಗದ ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮರಿಗೆ ತಮ್ಮ ಉದಾರ ಗುಣವನ್ನು ಪ್ರದರ್ಶಿಸುವ ಮೂಲಕ ಶಾಂತಿಯ ನೂತನ ಆರಂಭಕ್ಕೆ ಸಿಕ್ಕಿರುವ ಅವಕಾಶ ಎಂದರು.

ರಾಮಮಂದಿರ ನಮ್ಮ ಹೆಗ್ಗುರುತು. ದೇಶದಲ್ಲಿ ನೂರಾರು ರಾಮಮಂದಿರಗಳಿವೆ. ಆದರೆ ಅಯೋಧ್ಯೆಯಲ್ಲಿರುವುದು ರಾಮ ಜನ್ಮಭೂಮಿಯಾಗಿರುವ ಕಾರಣ ಅದು ಮಹತ್ವವಾದದ್ದು. ಅಲ್ಲಿದ್ದದ್ದು ರಾಷ್ಟ್ರೀಯ ಸ್ಮಾರಕ. ಅದನ್ನು ಧ್ವಂಸಗೊಳಿಸಿ ಆಡಳಿತಕಾರರು ನೂತನ ಕಟ್ಟಡವನ್ನು ನಿರ್ಮಿಸಿದರು ಎಂದು ತಿಳಿಸಿದರು.

ಹೈಕೋರ್ಟ್ ನೀಡಿರುವ ತೀರ್ಪು ನಮ್ಮ ಕೋಮು ಭಿನ್ನತೆಗಳನ್ನು ಮರೆತು, ಜತೆಗೆ ಸಾಗಲು ನೀಡಿರುವ ಸುವರ್ಣಾವಕಾಶ ಎಂದೂ ಅವರು ಬಣ್ಣಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ