ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರಿ-ತಪ್ಪುಗಳ ನಿರ್ಧಾರ ಜನರದ್ದು, ಬಿಜೆಪಿಯದ್ದಲ್ಲ: ಮೊಯ್ಲಿ (BJP | Karnataka | M Veerappa Moily | BS Yeddyurappa)
Bookmark and Share Feedback Print
 
ಕರ್ನಾಟಕದ ರಾಜಕೀಯ ಬಿಕ್ಕಟ್ಟು ಸಂವಿಧಾನದ ಎರಡು ಅಂಗಗಳ ನಡುವಿನ ಘರ್ಷಣೆ ಎಂದು ಬಣ್ಣಿಸಿರುವ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ, ಇಲ್ಲಿ ಯಾವುದು ಸರಿ -- ಯಾವುದು ತಪ್ಪು ಎಂದು ನಿರ್ಧರಿಸಬೇಕಾಗಿರುವುದು ಬಿಜೆಪಿ ಅಲ್ಲ, ವಿವೇಕಯುತ ಜನತೆ ಎಂದರು.

ಅದೇ ಹೊತ್ತಿಗೆ ರಾಜ್ಯ ರಾಜಕೀಯದಲ್ಲಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಪಾತ್ರದ ಕುರಿತು ಚರ್ಚೆಗೆ ಇಳಿಯಲು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮೊಯ್ಲಿ ನಿರಾಕರಿಸಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯಪಾಲರು ಸ್ಪೀಕರ್ ಅವರಿಗೆ ನೀಡಿರುವುದು ಆದೇಶವಲ್ಲ, ಅದು ಸಲಹೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಪಾಲರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲಿ ವಿಧಾನಸಭೆಯ ಬಲಾಬಲವನ್ನು ಸಾಬೀತುಪಡಿಸುವಂತೆ ಸೂಚಿಸಿದ ನಂತರ ಶಾಸಕರ ಸ್ಥಾನಗಳನ್ನು ಇದ್ದಂತೆ ಉಳಿಸಿಕೊಳ್ಳುವಂತೆ ಸ್ಪೀಕರ್ ಅವರಿಗೆ ಭಾರದ್ವಾಜ್ ಹೇಳಿರುವುದನ್ನು ಪ್ರಶ್ನಿಸಿದಾಗ, ಅವರು ನೀಡಿದ್ದು ಸಲಹೆ ಮಾತ್ರ. ಅದು ಸ್ಪೀಕರ್ ಅವರ ಅಧಿಕಾರದ ಮೇಲಿನ ಅತಿಕ್ರಮಣವಲ್ಲ ಎಂದರು.

ಇದು ಸಂವಿಧಾನದ ಎರಡು ಅಂಗಗಳ ಮುಖ್ಯಸ್ಥರಾದ ರಾಜ್ಯಪಾಲರು ಮತ್ತು ಸ್ಪೀಕರ್ ಅವರ ನಡುವಿನ ಘರ್ಷಣೆಯ ಪ್ರಶ್ನೆ. ಇಲ್ಲಿ ಯಾರು ಸರಿ ಎಂಬುದನ್ನು ಜನತೆ ನಿರ್ಧರಿಸಬೇಕು. ವಿವೇಕಯುತ, ಸಾಮಾಜಿಕ ಜ್ಞಾನ ಹೊಂದಿರುವ ಜನ ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು, ಬಿಜೆಪಿಯಂತಹ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಭವನದಿಂದ ಭಾರದ್ವಾಜ್ ಅವರನ್ನು ವಾಪಸ್ ಕರೆಸಿಕೊಳ್ಳುವ ಬಗೆಗಿನ ಪ್ರಶ್ನೆಗೆ, ಇದೊಂದು ಸಾಂವಿಧಾನಿಕ ಪ್ರಕ್ರಿಯೆ. ಕೇವಲ ಕೆಲವು ನಾಯಕರು ರಾಜ್ಯಪಾಲರನ್ನು ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಮಾತ್ರಕ್ಕೆ ಅದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇಲ್ಲಿ ಪ್ರಮುಖ ಅಂಶಗಳ ಆಕ್ಷೇಪಣೆಯ ಅಗತ್ಯವಿರುತ್ತದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ