ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೊಮ್ಮಗನಿಗೆ ಶಿವಸೇನೆ ಕಿರೀಟ; ಕಾಂಗ್ರೆಸ್ ಸಾಲಿಗೆ ಠಾಕ್ರೆ (Aditya Thackeray | Bal Thackeray | Shiv Sena | Uddhav Thackeray)
Bookmark and Share Feedback Print
 
PR
ಕಾಂಗ್ರೆಸ್ಸಿನದ್ದು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಾ ಬಂದಿದ್ದ ಶಿವಸೇನಾ ವರಿಷ್ಠ ಬಾಳ್ ಠಾಕ್ರೆ ಇದೀಗ ಅದನ್ನು ಪ್ರಶ್ನಿಸುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ತನ್ನ ಮೊಮ್ಮಗ ಆದಿತ್ಯ ಠಾಕ್ರೆಯನ್ನು ಪಕ್ಷದ ಯುವವಾಹಿನಿಗೆ ಮುಖಂಡನನ್ನಾಗಿ ಮಾಡಿರುವುದು.

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಇದೀಗ ರಾಹುಲ್ ಗಾಂಧಿಯ ವಿರುದ್ಧ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಟೀಕಿಸುತ್ತಾ ಬಂದವರು ಠಾಕ್ರೆ. ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ತನ್ನ ಪುತ್ರ ಉದ್ಧವ್ ಠಾಕ್ರೆಯನ್ನು ಪಕ್ಷದ ನಾಯಕನನ್ನಾಗಿ ಮಾಡಿದವರು. ಈಗ ಮತ್ತೊಂದು ಪೀಳಿಗೆಯನ್ನು ಕೂಡ ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.

ಉದ್ಧವ್ ಠಾಕ್ರೆ ಪ್ರಥಮ ಪುತ್ರ 21ರ ಹರೆಯದ ಆದಿತ್ಯ ಠಾಕ್ರೆಯನ್ನು ಶಿವಸೇನೆಯ ನೂತನ ಯುವವಾಹಿನಿ 'ಯುವ ಸೇನೆ'ಯ ಮುಖ್ಯಸ್ಥನನ್ನಾಗಿ ಮಾಡಲಾಗಿದೆ. ಆ ಮೂಲಕ ಶಿವಸೇನೆ ಎಂದರೆ ಠಾಕ್ರೆ ಕುಟುಂಬ ಎಂಬ ಅಲಿಖಿತ ಸಂವಿಧಾನವನ್ನು ಪಕ್ಷಕ್ಕೆ ಬರೆಯಲಾಗಿದೆ.

ಹಾಗೆ ನೋಡಿದರೆ ಆದಿತ್ಯ ನೇರವಾಗಿ ರಾಜಕೀಯಕ್ಕೆ ಬರುತ್ತಿರುವುದಲ್ಲ. ಈ ಸಂಬಂಧ ಅಗತ್ಯ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಶಿವಸೇನೆ ಮತ್ತು ಮರಾಠಿ ಮಾನೂಗಳಿಗೆ ರೋಹಿತ್ಸನ್ ಮಿಸ್ತ್ರಿಯವರ 'ಸಚ್ ಎ ಲಾಂಗ್ ಜರ್ನಿ' ಅಪಮಾನ ಮಾಡಿದೆ ಎಂದು ಆರೋಪಿಸಿ, ಮುಂಬೈ ಯುನಿವರ್ಸಿಟಿ ಸಿಲೆಬಸ್‌ನಿಂದ ತೆಗೆದು ಹಾಕುವಲ್ಲಿ ವಿದ್ಯಾರ್ಥಿಯಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದರು.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಬಾಳ್ ಠಾಕ್ರೆ, ತನ್ನ ಮೊಮ್ಮಗನನ್ನು ರಾಜಕೀಯ ವೇದಿಕೆಯಲ್ಲಿ ತಂದು ಕೂರಿಸಿ ಅಬ್ಬರಿಸಿದ್ದಾರೆ. ದಸರಾ ಪ್ರಯುಕ್ತ ಶಿವಸೇನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆದಿತ್ಯನಿಗೆ ಯುವಸೇನೆಯ ನಾಯಕತ್ವವನ್ನು ವಹಿಸಿ, ತಾನಿನ್ನು ನಿರಾಳ ಎಂಬಂತೆ ಕುಟುಂಬ ರಾಜಕಾರಣವನ್ನು ಸುಮ್ಮನೆ ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಿದ್ದಾರೆ.

ಇದನ್ನು ಬಾಳಾಸಾಬೇಹ್ ಠಾಕ್ರೆ ಸಮರ್ಥಿಸಿಕೊಂಡಿರುವುದನ್ನೇ ನೋಡಿ. 'ಪಕ್ಷಕ್ಕೆ ಸೇರುವಂತೆ ನಾನು ಆದಿತ್ಯನಿಗೆ ಹೇಳಿದ್ದೆನೇ? ಆತ ತನ್ನ ಸ್ವಂತ ಬಲದಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ. ಹಾಗಾಗಿ ನನ್ನ ಪಕ್ಷದಲ್ಲಿ ವಂಶ ರಾಜಕಾರಣವನ್ನು ನಾನು ತರುತ್ತಿದ್ದೇನೆ ಎಂದು ಹೇಳಲಾಗದು' ಎಂದಿದ್ದಾರೆ.

ನಾನು ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಟ್ಟವನಲ್ಲ. ಉದ್ಧವ್ ಆಯ್ಕೆಯಾದದ್ದು ಶಿವಸೈನಿಕರಿಂದಲೇ ಹೊರತು, ನನ್ನಿಂದಲ್ಲ. ಶಿವಸೇನೆ ಸೇರಬೇಕೆಂದು ನಾನು ನನ್ನ ಕುಟುಂಬದ ಸದಸ್ಯರ ಮೇಲೆ ಒತ್ತಡ ಹಾಕುವುದಿಲ್ಲ ಎಂದು ಆರೋಪಗಳಿಂದ ತಪ್ಪಿಸಿಕೊಳ್ಳಲು ಠಾಕ್ರೆ ಯತ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ