ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಪ್ರಧಾನಿ ಆಗ್ತಾರೆ, ನಾನು ನಿವೃತ್ತಿಯಾಗ್ತೇನೆ: ಪ್ರಣಬ್ (Rahul Gandhi | Pranab Mukherjee | Congress | Nehru-Gandhi family)
Bookmark and Share Feedback Print
 
ರಾಜಕೀಯ ನಿವೃತ್ತಿಯ ಮುನ್ಸೂಚನೆಯನ್ನು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ನೀಡಿದ್ದಾರೆ. ಹೊಸ ಸಂಪುಟದಲ್ಲಿ ತಾನು ಸೇರ್ಪಡೆಯಾಗುವ ಸಾಧ್ಯತೆಗಳು ಕಡಿಮೆ ಎಂದಿರುವ ಅವರು, ಆಡಳಿತ ಪಕ್ಷ ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ.

ಸರಕಾರದ ಪ್ರಮುಖ ನಿರ್ಧಾರಗಳಲ್ಲಿ ಮಹತ್ವದ ಪಾತ್ರವಹಿಸುವ ಮುಖರ್ಜಿ, ದೇಶವು ಎರಡಂಕಿ ಪ್ರಗತಿಯತ್ತ ಸಾಗಲು ಆರ್ಥಿಕ ನೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ನಿವೃತ್ತಿಯ ಮಾತುಗಳನ್ನಾಡಿದ್ದಾರೆ.
PTI

ಅಯ್ಯೋ ದೇವ್ರೇ... ನಂಗೆ ಎಷ್ಟು ವಯಸ್ಸಾಗುತ್ತೆ? ನನಗೆ ಈಗಾಗಲೇ 75 ತುಂಬಿದೆ. ನಾವು ತಲುಪಲಾಗದ ಒಂದು ಮಿತಿ ನಮ್ಮ ಎದುರಿಗಿರುತ್ತದೆ-- ಹೀಗೆಂದು ಮುಖರ್ಜಿ ಪ್ರತಿಕ್ರಿಯಿಸಿರುವುದು ರಾಹುಲ್ ಗಾಂಧಿಯವರ ಸಂಪುಟಕ್ಕೆ ನೀವು ಸೇರ್ಪಡೆಯಾಗುವಿರಾ ಎಂಬ ಪ್ರಶ್ನೆಗೆ.

ನಾನು ಎಷ್ಟು ವರ್ಷಗಳ ಕಾಲ ಇಲ್ಲೇ ಉಳಿಯಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರಿ? ಈಗಾಗಲೇ ನಾನು ಅಗತ್ಯಕ್ಕಿಂತ ಹೆಚ್ಚು ಇಲ್ಲಿ ಠಿಕಾಣಿ ಹೂಡಿದ್ದೇನೆ ಎಂದು ಸುದ್ದಿ ನಿಯತಕಾಲಿಕವೊಂದರ ಜತೆ ಮಾತನಾಡುತ್ತಾ ಹೇಳಿದರು.

ನಾಲ್ಕು ದಶಕಗಳ ಹಿಂದೆ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದ ರಾಜಕೀಯ ಮುತ್ಸದ್ದಿ ಮುಖರ್ಜಿ 1973ರ ನಂತರ ಬಹುತೇಕ ಕಾಂಗ್ರೆಸ್ ಪಕ್ಷದ ಸಚಿವಾಲಯಗಳಲ್ಲಿ ಖಾಯಂ ಸ್ಥಾನವನ್ನು ಹೊಂದಿದವರು.

ಆದರೆ ತಾನು ರಾಹುಲ್ ಗಾಂಧಿ ಸಂಪುಟದಲ್ಲಿ ಸಚಿವನಾಗುವುದು ದೂರದ ಮಾತು ಎಂದಿದ್ದಾರೆ. ಅದರೊಂದಿಗೆ ರಾಹುಲ್ ಪ್ರಧಾನಿಯಾಗುವುದು ಖಚಿತವಾಗಿದೆ.

ರಾಹುಲ್ ಗಾಂಧಿ ಓರ್ವ ಜನಪ್ರಿಯ ನಾಯಕ. ಅವರ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಪ್ರಧಾನ ಮಂತ್ರಿಯಾಗಲು ಅವರು ಸಾಮರ್ಥ್ಯ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರ ಹಾಗೂ ಈ ಹಿಂದೆ ಮೂರು ಪ್ರಧಾನ ಮಂತ್ರಿಗಳನ್ನು ದೇಶಕ್ಕೆ ನೀಡಿದ ನೆಹರೂ-ಗಾಂಧಿ ಕುಟುಂಬದ 'ಕಾಯುತ್ತಿರುವ ಪ್ರಧಾನಿ'ಯ ಬಗ್ಗೆ ಪ್ರಶಂಸಿದರು.
ಸಂಬಂಧಿತ ಮಾಹಿತಿ ಹುಡುಕಿ