ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಬಿಐ ನನ್ನ ವಿರುದ್ಧ ಸುಳ್ಳು ಕಥೆ ಕಟ್ಟುತ್ತಿದೆ: ಅಮಿತ್ ಶಾ (CBI | Gujarat | Amit Shah | Sohrabuddin Sheikh)
Bookmark and Share Feedback Print
 
ತನಗೆ ಜಾಮೀನು ದೊರೆಯಬಾರದು ಎಂದು ಮಾಧ್ಯಮಗಳ ಮೂಲಕ ಸಿಬಿಐ ಸುಳ್ಳು ಕಥೆಗಳನ್ನು ಕಟ್ಟುತ್ತಿದೆ ಎಂದು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಜೈಲು ಸೇರಿರುವ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ವಿಶೇಷ ನ್ಯಾಯಾಲಯದಲ್ಲಿ ದೂರಿಕೊಂಡಿದ್ದಾರೆ.

ಶಾ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಸಿಬಿಐ ನ್ಯಾಯಾಲಯವು, ಅಕ್ಟೋಬರ್ 27ರೊಳಗೆ ಇದಕ್ಕೆ ಲಿಖಿತ ಉತ್ತರ ನೀಡುವಂತೆ ಸಿಬಿಐಗೆ ನೊಟೀಸ್ ಜಾರಿ ಮಾಡಿದೆ.
PTI

ತನ್ನ ಪುತ್ರ ಮತ್ತು ಇತರ ಕೆಲವು ರಾಜಕಾರಣಿಗಳ ಜತೆ ಅಹಮದಾಬಾದ್ ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಸಾಬರಮತಿ ಜೈಲು ಸೂಪರಿಡೆಂಟ್ ಅವರ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಮಾಜಿ ಸಚಿವರನ್ನು ಸಿಬಿಐ ಬಂಧಿಸಿತ್ತು ಎಂದು ಸ್ಥಳೀಯ ಪತ್ರಿಕೆಯೊಂದು ಅಕ್ಟೋಬರ್ ಏಳರಂದು ಮಾಡಿರುವ ವರದಿಯನ್ನು ಶಾ ತನ್ನ ಎರಡು ಪುಟಗಳ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ವ್ಯಕ್ತಿತ್ವವನ್ನು ಕೆಡಿಸುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಮತ್ತು ತನಗೆ ಜಾಮೀನು ಸಿಗಬಾರದು ಎಂಬ ಕಾರಣಕ್ಕೆ ಸಿಬಿಐ ನನ್ನ ವಿರುದ್ಧ ಕಟ್ಟುಕಥೆಗಳನ್ನು ಮಾಧ್ಯಮಗಳ ಮೂಲಕ ಸೃಷ್ಟಿಸುತ್ತಿದೆ ಎಂದು ಶಾ ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾರೆ.

ಇದೆಲ್ಲವನ್ನೂ ಕಾಂಗ್ರೆಸ್ ಆದೇಶದಂತೆ ಸಿಬಿಐ ಮಾಡುತ್ತಿದೆ ಎಂದು ನೇರವಾಗಿ ಆರೋಪ ಮಾಡಿರುವ ಅವರು, ಈ ಸಂಬಂಧ ತನಿಖೆಗೆ ಆದೇಶ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.

ತಾನು ನ್ಯಾಯಾಂಗ ಬಂಧನದಲ್ಲಿ ಮತ್ತು ಜೈಲಿನಲ್ಲಿರುವುದರಿಂದ, ತನಿಖಾ ದಳವು ನಡೆಸುತ್ತಿರುವ ಇಂತಹ ಯತ್ನಗಳಿಂದ ನನ್ನನ್ನು ನ್ಯಾಯಾಲಯ ರಕ್ಷಿಸಬೇಕು ಎಂದು ಶಾ ಮನವಿ ಮಾಡಿಕೊಂಡಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ರಾಜಕೀಯದ ಮೂಲಕ ಮಟ್ಟ ಹಾಕಲು ವಿಫಲವಾಗಿರುವ ಕಾಂಗ್ರೆಸ್, ಅಡ್ಡ ದಾರಿಯ ಮೂಲಕ ಸಿಬಿಐಯನ್ನು ಬಳಸಿಕೊಂಡು ಅವರ ಆಪ್ತರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಾ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ