ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೂಲಭೂತ ಹಕ್ಕುಗಳಿಗೆ ಆಸ್ತಿ ಸೇರಿಸುವುದು ಅಸಾಧ್ಯ: ಸುಪ್ರೀಂ (property right | fundamental right | Supreme Court | Sanjiv Kumar)
Bookmark and Share Feedback Print
 
ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಪಟ್ಟಿಗೆ ಆಸ್ತಿಯ ಹಕ್ಕನ್ನು ಮರಳಿ ಸೇರಿಸಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.

ಮೂಲ ಸಂವಿಧಾನದ 19 ಮತ್ತು 31ನೇ ಅನುಚ್ಛೇದಗಳಲ್ಲಿ ಪ್ರಜೆಗಳಿಗೆ ಆಸ್ತಿಯ ಹಕ್ಕನ್ನು ನೀಡಲಾಗಿತ್ತು. ಆದರೆ ಇದನ್ನು 1978ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ರದ್ದು ಮಾಡಲಾಗಿತ್ತು.

ವಿಶೇಷ ಆರ್ಥಿಕ ವಲಯಗಳಿಗಾಗಿ ಸರಕಾರಗಳು ಬೃಹತ್ ಪ್ರಮಾಣದಲ್ಲಿ ಜಮೀನು ವಶ ಪಡಿಸಿಕೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ತಿಯ ಹಕ್ಕು ಬೇಕು ಮತ್ತು ಅದಕ್ಕಾಗಿ ಸಂವಿಧಾನಕ್ಕೆ ಮತ್ತೆ ತಿದ್ದುಪಡಿ ಮಾಡಬೇಕು; ಈ ಸಂಬಂಧ ನಿರ್ದೇಶ ನೀಡುವಂತೆ ಅರ್ಜಿಯೊಂದು 2007ರಲ್ಲಿ ಸಾರ್ವಜನಿಕ ಹಿತಾಸಕ್ತಿ ಪರವಾಗಿ ದಾಖಲಾಗಿತ್ತು.

ಅದರಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿ, ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿತ್ತು.

ಸೋಮವಾರ ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಕೆ.ಎಸ್. ರಾಧಾಕೃಷ್ಣನ್ ಮತ್ತು ಸ್ವಾತಂತರ್ ಕುಮಾರ್ ಅವರನ್ನೊಳಗೊಂಡ ಪೀಠವು, ಕೊಲ್ಕತ್ತಾ ಮೂಲದ 'ಗುಡ್ ಗವರ್ನೆನ್ಸ್ ಇಂಡಿಯಾ ಫೌಂಡೇಶನ್' ಸಂಘಟನೆಯ ಸಂಸ್ಥಾಪಕ ಸಂಜೀವ್ ಕುಮಾರ್ ಅಗರ್ವಾಲ್ ದಾಖಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ತಮ್ಮ ವಾದವನ್ನು ಸ್ವೀಕರಿಸಿದಲ್ಲಿ, ಈ ಹಿಂದೆ ಆಸ್ತಿ ಹಕ್ಕುಗಳ ಕುರಿತು ನ್ಯಾಯಾಲಯವು ನೀಡಿದ ತೀರ್ಪುಗಳನ್ನು ರದ್ದುಪಡಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ನಾವು ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ತಿರಸ್ಕರಿಸಿದ್ದೆವು. ನಾವು ಮತ್ತೆ ಈ ವಿಚಾರವನ್ನು ಕೆದಕಲು ಬಯಸುವುದಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಏಳು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದ ಆಸ್ತಿಯ ಹಕ್ಕನ್ನು ರದ್ದುಪಡಿಸಿ, ಇದನ್ನು ಕೇವಲ ಶಾಸನ ಬದ್ಧ ಹಕ್ಕಾಗಿ ಮಾತ್ರ ಬದಲಾವಣೆ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ