ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನದ ದಡ್ಡಾದಿಡ್ಡಿಯೇ ಆವಾಂತರಕ್ಕೆ ಕಾರಣ: ಭಾರತ (India | Pakistan | Nirupama Rao | SM Krishna)
Bookmark and Share Feedback Print
 
ಜುಲೈಯಲ್ಲಿ ನಡೆದ ವಿದೇಶಾಂಗ ಸಚಿವರುಗಳ ಮಟ್ಟದ ಮಾತುಕತೆ ವಿಫಲವಾಗಲು ಪಾಕಿಸ್ತಾನವು ಗುರಿ ಮೀರಿದ್ದೇ ಕಾರಣ ಎಂದು ಆರೋಪಿಸಿರುವ ಭಾರತ, ಸೂಕ್ಷ್ಮ ವಿಚಾರಗಳನ್ನು ತಪ್ಪಿಸುವತ್ತ ವಿಶ್ವಾಸ ಕೊರತೆಯನ್ನು ಪರಿಹರಿಸುವ ನವದೆಹಲಿಯ ಉನ್ನತ ನಿಲುವು ಕೈಗೂಡಲಿಲ್ಲ ಎಂದು ಹೇಳಿದೆ.

ವಿಶ್ವಾಸ ಕೊರತೆಯನ್ನು ನೀಗಿಸುವ ಹಾಗೂ ಗಂಭೀರ ಮತ್ತು ಫಲಪ್ರದ ಮಾತುಕತೆಯ ಹಾದಿಯನ್ನು ಸುಗಮಗೊಳಿಸುವ ನಮ್ಮ ಯತ್ನಗಳನ್ನು ಪಾಕಿಸ್ತಾನವು ತನ್ನ ಮಿತಿ ಮೀರಿದ ನಿರೀಕ್ಷೆಗಳಿಂದಾಗಿ ಧ್ವಂಸಗೊಳಿಸಿತು. ಅದೇ ಕಾರಣದಿಂದ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಪುನರಾರಂಭ ಪ್ರಕ್ರಿಯೆಯು ಜಟಿಲವಾಯಿತು ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಆಯೋಜಿಸಿದ್ದ ಪಾಕಿಸ್ತಾನ ಕುರಿತ ವಿಚಾರಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅಭಿಪ್ರಾಯಪಟ್ಟರು.

ಆದರೂ, ಶಾಂತಿಗಾಗಿನ ನಮ್ಮ ಧ್ಯೇಯಕ್ಕೆ ಇದರಿಂದ ಹಿನ್ನಡೆಯಾಗಿದೆ ಎಂದು ನಾವು ಭಾವಿಸಿಲ್ಲ. ತಿಂಫುವಿನಲ್ಲಿ ಪಡೆದುಕೊಂಡ ಸ್ಫೂರ್ತಿಯನ್ನು ನಾವು ಕಳೆದುಕೊಂಡಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಯವರನ್ನು ಭಾರತಕ್ಕೆ ಆಹ್ವಾನಿಸಿರುವುದನ್ನು ಪ್ರಸ್ತಾಪಿಸುತ್ತಾ ರಾವ್ ಹೇಳಿದರು.

ಈ ವರ್ಷಾಂತ್ಯದಲ್ಲಿ ಖುರೇಷಿಯವರು ಭಾರತಕ್ಕೆ ಬರುವರೆಂಬ ನಿರೀಕ್ಷೆಗಳಿದ್ದವು. ಆದರೆ ಮುಂದಿನ ಕೆಲವು ತಿಂಗಳುಗಳ ಅವಧಿಯಲ್ಲಿ ಉನ್ನತ ನಾಯಕರು ದೇಶಕ್ಕೆ ಭೇಟಿ ನೀಡುತ್ತಿರುವುದರಿಂದ ಖುರೇಷಿಯವರು 2011ರ ಆರಂಭದಲ್ಲಿ ಪ್ರವಾಸ ಮಾಡಲಿದ್ದಾರೆ.

ಪಾಕಿಸ್ತಾನದ ಜತೆಗಿನ ಮಾತುಕತೆಗಾಗಿ ಭಾರತ ಹೊಂದಿರುವ ಗಮನಾರ್ಹ ನಿಲುವನ್ನು ರಾವ್ ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡರು.

ವಿಶ್ವಾಸ ಕೊರತೆಯನ್ನು ನೀಗಿಸಲು ಮಾತುಕತೆಯತ್ತ ವೃದ್ಧಿಕಾರಕ, ಉನ್ನತ ಮಟ್ಟದ ಮತ್ತು ಮುನ್ನೋಟವುಳ್ಳ ಭಾರತದ ನಿಲುವುಗಳು ಪಾಕಿಸ್ತಾನದ ಜತೆಗಿನ ಸಂಬಂಧಗಳಿಗೆ ತೊಡಕುಂಟಾಗುವ ಪ್ರಮುಖ ಭಿನ್ನಾಭಿಪ್ರಾಯಗಳನ್ನು ಪರಿಹರಿಸದೇ ಇರುವ ಯತ್ನಗಳಲ್ಲ ಎಂದೂ ಅವರು ಹೇಳಿದರು.

ಪಾಕಿಸ್ತಾನದಲ್ಲಿ ನಡೆದಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಖುರೇಷಿ ನಡುವಿನ ಮಾತುಕತೆಯಲ್ಲಿ ತೀವ್ರ ವಾಗ್ಯುದ್ಧಗಳು ನಡೆದು ಭೇಟಿ ವಿಫಲವಾಗಿತ್ತು. ಈ ಸಂದರ್ಭದಲ್ಲಿ ಸಚಿವ ಕೃಷ್ಣ ಅವರ ಉಪಸ್ಥಿತಿಯಲ್ಲೇ ಭಾರತದ ವಿರುದ್ಧ ಖುರೇಷಿ ತೀವ್ರ ಟೀಕೆಗಳನ್ನು ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ