ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ವಿರುದ್ಧದ ಶೇ.97 ಕೇಸುಗಳು ಸುಳ್ಳು: ಮಿಲಿಟರಿ (Army | Jammu and Kashmir | Sanjay Verma | human rights violations)
Bookmark and Share Feedback Print
 
ಜಮ್ಮು-ಕಾಶ್ಮೀರದಲ್ಲಿ ಕಳೆದೆರಡು ದಶಕಗಳ ಅವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಶಿಕ್ಷೆ ಪಡೆದುಕೊಂಡಿರುವುದು ಒಟ್ಟಾರೆ 100 ಮಿಲಿಟರಿ ಸಿಬ್ಬಂದಿ ಮಾತ್ರ. ಆದರೆ ಸಾವಿರಾರು ಸುಳ್ಳು ಪ್ರಕರಣಗಳು ದಾಖಲಾಗಿವೆ ಎಂದು ಸೇನೆ ತಿಳಿಸಿದೆ.

ಕಳೆದ 20 ವರ್ಷಗಳ ಅವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಮಿಲಿಟರಿ ಸಿಬ್ಬಂದಿಗಳ ವಿರುದ್ಧ 1,514 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 1,508 ಪ್ರಕರಣಗಳನ್ನು ತನಿಖೆಗೊಳಪಡಿಸಲಾಗಿದೆ. ಉಳಿದ ಆರು ಪ್ರಕರಣಗಳ ತನಿಖೆ ನಡೆಯುತ್ತಿದೆ. ಒಟ್ಟಾರೆ 1,473 ಪ್ರಕರಣಗಳು ಅಂದರೆ ಶೇ.97ರಷ್ಟು ಕೇಸುಗಳು ಆಧಾರರಹಿತ ಮತ್ತು ಸುಳ್ಳು ಆರೋಪಗಳಿಂದ ಕೂಡಿದ್ದಾಗಿವೆ ಎಂದು ನಾರ್ತರ್ನ್ ಕಮಾಂಡ್‌ನ ಬ್ರಿಗೇಡಿಯರ್ ಜನರಲ್ ಸ್ಟಾಫ್ ಸಂಜಯ್ ವರ್ಮಾ ತಿಳಿಸಿದ್ದಾರೆ.

ಒಟ್ಟಾರೆ ನಿಜವೆಂದು ಕಂಡು ಬಂದಿರುವುದು 35 ಪ್ರಕರಣಗಳು (ಶೇ.2.3) ಮಾತ್ರ. ಈ ಸಂಬಂಧ 48 ಅಧಿಕಾರಿಗಳು ಸೇರಿದಂತೆ 104 ಸೇನಾ ಸಿಬ್ಬಂದಿಗಳನ್ನು ಕಠಿಣ ಶಿಕ್ಷೆಗಳಿಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಹೊಣೆಗಾರಿಕೆಯು ಪ್ರಬಲವಾಗಿದೆ. ಆರೋಪಿತ ಮಾನವ ಹಕ್ಕುಗಳ ಉಲ್ಲಂಘನೆ ಕೇಸುಗಳಲ್ಲಿ ನಮ್ಮ ತನಿಖೆ ಮತ್ತು ಶಿಕ್ಷೆ ತ್ವರಿತ ಗತಿಯಲ್ಲಿರುತ್ತದೆ. ಈ ಸಂಬಂಧ ನಾವು ಯಾವುದೇ ಪ್ರಮಾದಗಳನ್ನು ಉಳಿಸಲು ಬಯಸುವುದಿಲ್ಲ ಎಂದು ಶರ್ಮಾ ಸ್ಪಷ್ಟಪಡಿಸಿದರು.

ತಾವು ಶಸ್ತ್ರಸಜ್ಜಿತ ಪಡೆಗಳ ವಿಶೇಷ ಕಾಯ್ದೆಯಡಿಯಲ್ಲಿ ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸುವಾಗ ಪೊಲೀಸ್ ಪ್ರತಿನಿಧಿಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುತ್ತೇವೆ. ಕಠಿಣ ನಿಯಮಗಳನ್ನು ಪಾಲಿಸುತ್ತೇವೆ ಎಂದಿರುವ ಸೇನಾ ಅಧಿಕಾರಿಗಳು, ನಾವು ವಶಕ್ಕೆ ಪಡೆಯುವವರನ್ನು ತಕ್ಷಣವೇ ಪೊಲೀಸರಿಗೆ ಹಸ್ತಾಂತರಿಸುತ್ತೇವೆ ಎಂದಿದ್ದಾರೆ.

ನಾವು ಕೈಗೊಳ್ಳುವ ಎಲ್ಲಾ ಕಾರ್ಯಾಚರಣೆಗಳಿಗೂ ಪೊಲೀಸರನ್ನು ಸೇರಿಸಿಕೊಳ್ಳುತ್ತೇವೆ. ಜಂಟಿ ಕಾರ್ಯಾಚರಣೆಗೆ ನಾವು ಹೆಚ್ಚಿನ ಒತ್ತು ನೀಡುತ್ತೇವೆ. ನಾವು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು, ಉಗ್ರರನ್ನು ಅಥವಾ ಕೊಲ್ಲಲ್ಪಟ್ಟವರ ಶವಗಳನ್ನು ಪೊಲೀಸರಿಗೆ ಕ್ರಮಬದ್ಧವಾಗಿ ಹಸ್ತಾಂತರಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ