ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಸೀದಿಗಳ ಧ್ವನಿವರ್ಧಕಗಳೇಕೆ ಕಾಣುತ್ತಿಲ್ಲ?: ಶಿವಸೇನೆ (loudspeakers | mosques | Shiv Sena | Bal Thackeray)
Bookmark and Share Feedback Print
 
ದಸರಾ ಸಮಾರಂಭ ಸಂದರ್ಭದಲ್ಲಿ ನ್ಯಾಯಾಲಯ ಅನುಮತಿ ನೀಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಶಬ್ದಮಾಲಿನ್ಯ ಮಾಡಿದ್ದಕ್ಕೆ ಪೊಲೀಸ್ ಕೇಸು ದಾಖಲಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಮಸೀದಿಗಳ ಮೇಲೆ ಹಾಕಲಾಗಿರುವ ಧ್ವನಿವರ್ಧಕಗಳ ವಿರುದ್ಧ ಯಾಕೆ ಕ್ರಮವಿಲ್ಲ ಎಂದು ಪ್ರಶ್ನಿಸಿದೆ.

ಬೆಂಡಿ ಬಜಾರ್ ಮತ್ತು ಬೆಹ್ರಾಂಪಡಾ ಪ್ರದೇಶಗಳಲ್ಲಿನ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳು ಭಾರೀ ಶಬ್ದ ಹೊರಡಿಸುತ್ತಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳ ಓದು ಮತ್ತು ಮಲಗುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಹೇಳಿದೆ.

ಭಾನುವಾರ ಶಿವಾಜಿ ಪಾರ್ಕಿನಲ್ಲಿ ಶಿವಸೇನೆ ಆಯೋಜಿಸಿದ್ದ ದಸರಾ ರ‌್ಯಾಲಿಯಲ್ಲಿ ಬಾಂಬೆ ಹೈಕೋರ್ಟ್ ಅನುಮತಿ ನೀಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಅಂದರೆ ಡೆಸಿಮಲ್ ಮಿತಿಯನ್ನು ಮೀರಿ ಧ್ವನಿವರ್ಧಕವನ್ನು ಅಳವಡಿಸಲಾಗಿತ್ತು. ಇದರ ವಿರುದ್ಧ ದಾದರ್ ಪೊಲೀಸ್ ಠಾಣೆಯಲ್ಲಿ ಶಿವಸೇನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಕ್ರಮ ವಲಸಿಗರಿಂದಾಗಿ ಕರ್ಕಶ ಶಬ್ಧವು 500 ಡಿಸಿಮಲ್ ದಾಟಿದೆ. ನಮಗೂ ಕಾನೂನು ತಿಳಿದಿದೆ. ನಮಗೆ ಯಾರು ಕೂಡ ಕಾನೂನಿನ ಬಗ್ಗೆ ಪಾಠ ಹೇಳಿಕೊಡಬೇಕಾಗಿಲ್ಲ. ಕಾನೂನು ನಮ್ಮ ಭಾವನೆಗಳನ್ನು ಗೌರವಿಸಬೇಕು, ನಂತರ ನಾವು ಕೂಡ ಕಾನೂನನ್ನು ಗೌರವಿಸುತ್ತೇವೆ ಎಂದು ಸಂಪಾದಕೀಯ ತಿಳಿಸಿದೆ.

ಪ್ರಸಕ್ತ ಶಬ್ಧರಹಿತ ವಲಯವಾಗಿ ಮಾರ್ಪಟ್ಟಿರುವ ಶಿವಾಜಿ ಪಾರ್ಕಿನಲ್ಲಿ ದಸರಾ ಸಮಾರಂಭ ನಡೆಸಲು ಅವಕಾಶ ಕೋರಿ ಶಿವಸೇನೆ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಶಬ್ಧದ ಪ್ರಮಾಣವು 50 ಡೆಸಿಮಲ್ ಮೀರಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಲಯವು ಅನುಮತಿ ನೀಡಿತ್ತು. ಇದಕ್ಕೆ ತಾನು ಬದ್ಧನಾಗಿರುವುದಾಗಿ ಶಿವಸೇನೆ ನ್ಯಾಯಾಲಯದಲ್ಲಿ ಹೇಳಿತ್ತು.

50 ಡೆಸಿಮಲ್ ಶಬ್ದ ಪ್ರಮಾಣವನ್ನು ಮೀರಿದ್ದು ಮಾತ್ರವಲ್ಲ, ಜತೆಗೆ ಶಿವಸೇನೆಯ ವರಿಷ್ಠ ಬಾಳ್ ಠಾಕ್ರೆಯವರು ನ್ಯಾಯಾಲಯದ ಆದೇಶವನ್ನು ಬಹಿರಂಗವಾಗಿ ಪ್ರತಿಭಟಿಸಿದ್ದಾರೆ.

ಶಿವಸೇನೆಯ ಗರ್ಜನೆಯನ್ನು, ಆರ್ಭಟವನ್ನು ಯಾರಿಂದಲೂ ನಿಗ್ರಹಿಸಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ