ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸೆಕ್ಸ್ ಉದ್ದೇಶದ ಲಿವ್-ಇನ್ ಸಂಬಂಧಕ್ಕೆ ಜೀವನಾಂಶವಿಲ್ಲ' (Marriage | live-in relationships | Supreme Court | Tamil Nadu)
Bookmark and Share Feedback Print
 
ವ್ಯಕ್ತಿಯೊಬ್ಬ ಕೇವಲ ಲೈಂಗಿಕ ಉದ್ದೇಶಗಳಿಗಾಗಿ ಮಹಿಳೆಯೊಬ್ಬಳ ಜತೆ ಲಿವ್-ಇನ್ ಸಂಬಂಧ ಹೊಂದಿದ್ದರೆ, ಅದು ಜೀವನಾಂಶವನ್ನು ಒದಗಿಸುವ ಮದುವೆಯ ಸಂಬಂಧಕ್ಕೆ ಸಮಾನವಾದುದಲ್ಲ. ಸಹ-ಜೀವನ ಪದ್ಧತಿಯಲ್ಲಿ ಪುರುಷನಿಂದ ಮಹಿಳೆಯು ಜೀವನಾಂಶ ಪಡೆಯಲು ಹಕ್ಕು ಹೊಂದಿಲ್ಲ. ಮದುವೆಯಾಗದೆ ಮಹಿಳೆ ಜೀವನಾಂಶ ಪಡೆಯುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

14 ವರ್ಷಗಳ ಕಾಲ ವ್ಯಕ್ತಿಯೊಬ್ಬನ ಜತೆ ಲಿವ್-ಇನ್ ರಿಲೇಷನ್‌ಶಿಪ್ ಬೆಳೆಸಿಕೊಂಡಿದ್ದ ಮಹಿಳೆಯೊಬ್ಬಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ನೀಡಿದೆ.

ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಆರ್ಥಿಕವಾಗಿ ಯೋಗಕ್ಷೇಮ ನೋಡಿಕೊಂಡು, ಪ್ರಮುಖವಾಗಿ ಲೈಂಗಿಕ ಮತ್ತು ಸಹಾಯಕಿಯಾಗಿ ಬಳಸಿಕೊಂಡರೆ ಅದು ಮದುವೆಯ ಸ್ವರೂಪದ ಸಂಬಂಧವಾಗದು ಎಂದು ಸುಪ್ರೀಂ ಹೇಳಿದೆ.

ತಮಿಳುನಾಡಿನ ಮಹಿಳೆಯೊಬ್ಬಳು 14 ವರ್ಷಗಳ ಕಾಲ ವ್ಯಕ್ತಿಯೊಬ್ಬನ ಜತೆ ಮದುವೆಯಾಗದೆ ಸಹ-ಜೀವನ ಪದ್ಧತಿಯ ಸಂಬಂಧ ಇಟ್ಟುಕೊಂಡಿದ್ದಳು. ಈ ಸಂಬಂಧ ಕಡಿದುಕೊಂಡ ನಂತರ ತನಗೆ ಜೀವನಾಂಶ ಬೇಕೆಂದು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದಳು.

ತಾನು 14 ವರ್ಷಗಳ ಕಾಲ ಆತನ ಜತೆ ಜೀವನ ಸಾಗಿಸಿರುವುದರಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಆಕೆ ವಾದಿಸಿದ್ದಳು. ಇದನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಜೀವನಾಂಶ ನೀಡಬೇಕು ಎಂದು ತೀರ್ಪು ನೀಡಿತ್ತು.

ಇದರ ವಿರುದ್ಧ ವ್ಯಕ್ತಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ. ಮತ್ತೆ ಆತನಿಗೆ ಸೋಲಾಯಿತು. ಕೊನೆಯ ಯತ್ನವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದ ನಂತರ ಇದೀಗ ನಿರಾಳನಾಗಿದ್ದಾನೆ.

ಮದುವೆ ಎನ್ನುವುದು ಭಾರತದಲ್ಲಿ ಪವಿತ್ರ ವಿಧಿ. ಲಿವ್-ಇನ್ ಸಂಬಂಧವನ್ನು ಮದುವೆ ಎಂದು ಪರಿಗಣಿಸುವುದು ಸಾಧ್ಯವಿಲ್ಲ. ಇಂತಹ ಸಂಬಂಧಗಳಲ್ಲಿ ಜೀವನಾಂಶ ಅಥವಾ ಪರಿಹಾರ ನೀಡಲು ಮುಂದಾದರೆ ವಿವಾಹದ ಮೌಲ್ಯದ ಪ್ರಶ್ನೆ ಎದುರಾಗಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ