ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ಚುನಾವಣೆ ಶಾಂತಿಯುತ; ಶೇ.53 ಮತ ಚಲಾವಣೆ (Bihar Assembly elections | BJP | Congress | Nitish Kumar)
Bookmark and Share Feedback Print
 
ರಾಷ್ಟ್ರದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡಿದೆ.

ಒಟ್ಟು 243 ಕ್ಷೇತ್ರಗಳಲ್ಲಿ ಇಂದು 47 ಕ್ಷೇತ್ರಗಳ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಸುಮಾರು 1.07 ಕೋಟಿ ಮತದಾರರು ಅಂದರೆ ಶೇ.53ರಷ್ಟು ಮಂದಿ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಸ್ವತಃ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಅಧ್ಯಕ್ಷ ನಿತಿನ್ ಗಡ್ಕರಿ ಮುಂತಾದ ಘಟಾನುಘಟಿಗಳೇ ಬಿಹಾರ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವುದರಿಂದ ಫಲಿತಾಂಶ ದೇಶದ ರಾಜಕಾರಣವನ್ನು ಬದಲಾಯಿಸುವ ನಿರೀಕ್ಷೆಗಳಿವೆ.

ನಕ್ಸಲರ ಬೆದರಿಕೆ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಈ ನಡುವೆ ನಕಲಿ ಮತದಾನ ಮತ್ತು ಮತದಾನಕ್ಕೆ ಅಡ್ಡಿಪಡಿಸಿದ ಆರೋಪಗಳ ಮೇಲೆ 150ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕುಗಳು ಸೇರಿದಂತೆ ಹಲವು ವಾಹನಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟಾರೆ ಮತದಾನ ಪ್ರಕ್ರಿಯೆ ಶಾಂತಿಯಿಂದ ಕೂಡಿತ್ತು ಎಂದು ಪೊಲೀಸ್ ಮಹಾ ನಿರ್ದೇಶಕ ನೀಲಮಣಿ ತಿಳಿಸಿದ್ದಾರೆ.

ಮಾದೇಪುರ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡುದಾರರು ಮತ್ತು ಸ್ಥಳೀಯರು ಇಲ್ಲಿನ ಎರಡು ಮತದಾನ ಕೇಂದ್ರಗಳಿಗೆ ಕಲ್ಲುತೂರಾಟ ನಡೆಸಿರುವುದು ವರದಿಯಾಗಿದೆ. ಅವರ ಕಳವಳಗಳನ್ನು ಪರಿಗಣಿಸಿದ ನಂತರ ಸಮಸ್ಯೆ ಪರಿಹಾರವಾಗಿದ್ದು, ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಮುಂದುವರಿದಿದೆ.

ಮಧುಬನಿ ಜಿಲ್ಲೆಯ ಲೌಖಾ ಪ್ರದೇಶದಲ್ಲಿ ಮತದಾನ ಕೇಂದ್ರದ ಹೊರಗಡೆ ಬಾಂಬ್ ಒಂದು ಸ್ಫೋಟಗೊಂಡಿತ್ತಾದರೂ, ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಪೂರ್ನಿಯಾ ಜಿಲ್ಲೆಯ ಬಯಾಸಿ ಎಂಬಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸುತ್ತಿದ್ದ ಆರೋಪದ ಮೇಲೆ ಸಮಾಜವಾದಿ ಜನತಾ ಪಕ್ಷದ ಅಭ್ಯರ್ಥಿ ಅಲುಮಿದ್ದೀನ್ ಅನ್ಸಾರಿ ಎಂಬವರನ್ನು ಬಂಧಿಸಲಾಗಿದೆ.

ಇಂದು ನಡೆದ 47 ಕ್ಷೇತ್ರಗಳ ಚುನಾವಣೆಯಲ್ಲಿ 631 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿನ ಪ್ರಮುಖರೆಂದರೆ ಜೆಡಿಯು ಸಚಿವರುಗಳಾದ ವಿಜೇಂದ್ರ ಪ್ರಸಾದ್ ಯಾದವ್, ನರೇಂದ್ರ ನಾರಾಯಣ್ ಯಾದವ್, ರೇಣು ಕುಮಾರಿ, ಹರಿ ಪ್ರಸಾದ್ ಶಾ, ಪಪ್ಪು ಯಾದವ್ ಪತ್ನಿ ಕಾಂಗ್ರೆಸ್‌ನ ರಂಜಿತ್ ರಂಜನ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಚೌದರಿ ಮೆಹಬೂಬ್ ಆಲಿ ಕೈಸರ್ ಮತ್ತು ಮಾಜಿ ಸಂಸದ ಆನಂದ್ ಮೋಹನ್ ಪತ್ನಿ ಲವ್ಲಿ ಆನಂದ್.
ಸಂಬಂಧಿತ ಮಾಹಿತಿ ಹುಡುಕಿ