ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾಷಣ ಬರೆಯುವವರನ್ನು ಬದಲಿಸಿ: ಸೋನಿಯಾಗೆ ಬಿಜೆಪಿ (BJP | Congress | Sonia Gandhi | Rahul Gandhi)
Bookmark and Share Feedback Print
 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅದರ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಈ ಹಿಂದೆ 'ಸಾವಿನ ವ್ಯಾಪಾರಿ' ಎಂದು ಹೇಳುತ್ತಾ ತಿರುಗುತ್ತಿದ್ದರು. ಈಗ ಬಿಹಾರದ ಅಭಿವೃದ್ಧಿಗಾಗಿ ತಮ್ಮ ರಾಜ ಬೊಕ್ಕಸದಿಂದ ನಿಧಿಯನ್ನು ನೀಡಿದ ರಾಜ-ರಾಣಿಯರಂತೆ ಅಬ್ಬರಿಸುತ್ತಿದ್ದಾರೆ. ಅವರು ತಮಗೆ ಭಾಷಣ ಬರೆದುಕೊಡುವವರನ್ನು ಅಗತ್ಯವಾಗಿ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಸಲಹೆ ನೀಡಿದೆ.

ಪ್ರತಿ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಮಸ್ಯೆಗಳಿಗೆ ಸಿಲುಕುತ್ತಿರುವುದರಿಂದ ಅವರು ತಮ್ಮ ಭಾಷಣ ಬರಹಗಾರರನ್ನು ಬದಲಾಯಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಕೇಂದ್ರವು ಸಾಕಷ್ಟು ನಿಧಿಯನ್ನು ರಾಜ್ಯಕ್ಕೆ ನೀಡಿದೆ. ಆದರೆ ಎನ್‌ಡಿಎ ಸರಕಾರವು ಅದನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಈ ಇಬ್ಬರು ನಾಯಕರು ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿರುವುದಕ್ಕೆ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಜೆಡಿಯು ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದೆ.

ಈ ಹಿಂದೆ ಅವರು (ಸೋನಿಯಾ ಮತ್ತು ರಾಹುಲ್) ರಾಜ್ಯವೊಂದನ್ನು ಸಾವಿನ ವ್ಯಾಪಾರಿ ಎಂದು ಕರೆದರು. ಈಗ ಬಿಹಾರದಲ್ಲಿ ತಮ್ಮ ಕ್ಷೀಣಿಸುತ್ತಿರುವ ವಿಶ್ವಾಸಾರ್ಹತೆಯನ್ನು ಹೆಚ್ಚುಗೊಳಿಸುವ ಸಲುವಾಗಿ ತಮ್ಮ ರಾಜ ಬೊಕ್ಕಸದಿಂದ ನಿಧಿಯನ್ನು ನೀಡಿದ ರಾಜ-ರಾಣಿಯರಂತೆ ಆರ್ಭಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಟೀಕಿಸಿದರು.

ಕಾಂಗ್ರೆಸ್ ನಾಯಕರಲ್ಲಿನ ಅಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸವು ಅವರನ್ನು ವಾಸ್ತವತೆಯಿಂದ ದೂರ ಮಾಡಿದೆ ಎಂದೂ ನಖ್ವಿ ಅಭಿಪ್ರಾಯಪಟ್ಟಿದ್ದಾರೆ.

ಜನರ ಆಕ್ರೋಶ ಮತ್ತು ಅಸಮಾಧಾನಗಳು ಅವರ ಪಕ್ಷಕ್ಕೆ ಮತ್ತು ಸರಕಾರಕ್ಕೆ ಕಾಣುತ್ತಿಲ್ಲ. ಭಯೋತ್ಪಾದನೆ ಮತ್ತು ನಕ್ಸಲ್ ಸಮಸ್ಯೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ವಿಫಲವಾಗಿದ್ದಾರೆ ಎಂದು ಟೀಕಿಸಿರುವ ಅವರು, ಯುಪಿಎ ಸರಕಾರದ ನೀತಿಗಳೇ ದುರ್ಬಲ ಎಂದರು.

ಭ್ರಷ್ಟಾಚಾರ, ಬೆಲೆಯೇರಿಕೆ, ಭಯೋತ್ಪಾದನೆ ಮತ್ತು ನಕ್ಸಲ್‌ವಾದದ ವಿರುದ್ಧದ ಹೋರಾಟದಲ್ಲಿ ಕೇಂದ್ರದ ಯುಪಿಎ ಸರಕಾರವು ದುರ್ಬಲ ನೀತಿಗಳನ್ನು ಹೊಂದಿದೆ. ಇಂತಹ ಸರಕಾರದ ಹಗರಣಗಳು ಮತ್ತು ಪೊಳ್ಳು ಆಶ್ವಾಸನೆಗಳ ವಿರುದ್ಧ ಬಿಜೆಪಿ ಮುಷ್ಕರಗಳನ್ನು ನಡೆಸಲಿದೆ ಎಂದು ನಖ್ವಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ