ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಿತಿ ಮೀರಿದ ಸೆಕ್ಸ್ ಬೇಡಿಕೆಯಿಂದಲೂ ವಿಚ್ಛೇದನ ಸಾಧ್ಯ (Supreme Court | Hindu Marriage Act | Divorce | marriage, much sex)
Bookmark and Share Feedback Print
 
ಎಲ್ಲೆ ಮೀರಿ ಎಡೆಬಿಡದೆ ಅತಿಯಾದ ಲೈಂಗಿಕತೆಗಾಗಿ ಬೇಡಿಕೆ ಇಡುವುದನ್ನು ವಿವಾಹ ವಿಚ್ಛೇದನದ ಕಾರಣಕ್ಕಾಗಿ ಪರಿಗಣಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ವಿವಾಹ ವಿಚ್ಛೇದನಕ್ಕೆ ನೀಡಬಹುದಾದ ಕಾರಣವಾಗಿರುವ 'ಕ್ರೌರ್ಯ'ವನ್ನು ನಮೂದಿಸಲಾಗಿರುವ ಹಿಂದೂ ವಿವಾಹ ಕಾಯ್ದೆಯ 13ನೇ ಪರಿಚ್ಛೇದದಲ್ಲಿ ಅದರ ಅರ್ಥವನ್ನು ನಿರ್ದಿಷ್ಟವಾಗಿ ವಿವರಿಸಿಲ್ಲ. ಆದರೆ ಮಿತಿ ಮೀರಿದ ಸೆಕ್ಸ್‌ಗಾಗಿ ಬೇಡಿಕೆ ಮುಂದಿಡುವುದನ್ನು ಸಾಕ್ಷಿ ಸಮೇತ ರುಜುವಾತುಪಡಿಸಿದರೆ ವಿಚ್ಛೇದನ ನೀಡಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ತನ್ನ ಪತ್ನಿಯ ಮಿತಿ ಮೀರಿದ ನಿರಂತರ ಸೆಕ್ಸ್ ಬೇಡಿಕೆಯಿಂದ ಬಾಧೆಗೊಳಪಟ್ಟ ಗಂಡನೊಬ್ಬನ ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.

ಅಸಹನೀಯ ಮತ್ತು ಅಕ್ಷಮ್ಯವಾದ ಸ್ವರೂಪವನ್ನು ಒಳಗೊಂಡ ಯಾವುದೇ ಒಂದು ಹಿಂಸೆಯನ್ನೊಳಗೊಂಡ ಕೃತ್ಯವು ಕ್ರೌರ್ಯದ ವ್ಯಾಪ್ತಿಗೆ ಬರುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ವಿವಾಹ ವಿಚ್ಛೇದನಕ್ಕೆ ಗಂಡ ಅಥವಾ ಹೆಂಡತಿ ನ್ಯಾಯಾಲಯಕ್ಕೆ ಹೋಗಬಹುದಾಗಿದೆ ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

ಸಂಗಾತಿಗಳಲ್ಲೊಬ್ಬರು ಬಲವಂತವಾಗಿ ನಿರಂತರ ಮಿತಿಮೀರಿದ ಲೈಂಗಿಕತೆ ಅಥವಾ ದುರಾಚಾರಗಳ ಬೇಡಿಕೆಯನ್ನಿಡುವುದರಿಂದ ಸಂಗಾತಿಗಳಲ್ಲೊಬ್ಬರು ಗಾಯಗೊಂಡಲ್ಲಿ ಇದನ್ನು ಕ್ರೌರ್ಯ ಎಂದು ಪರಿಗಣಿಸಬಹುದಾಗಿದೆ ಎಂದು ಪೀಠದ ತೀರ್ಪನ್ನು ಬರೆದಿರುವ ನ್ಯಾಯಮೂರ್ತಿ ಸದಾಶಿವಂ ತಿಳಿಸಿದರು.

ಪತ್ನಿಯದ್ದು ಕೌರ್ಯ ವರ್ತನೆ ಎಂಬುದನ್ನು ಸಾಬೀತುಪಡಿಸಲು ವಿಫಲವಾದ ಗುರ್ಬಾಕ್ಸ್ ಸಿಂಗ್, ತನ್ನ ಮದುವೆ ಯಾವತ್ತೇ ಮುರಿದು ಹೋಗಿದೆ; ನಾವಿಬ್ಬರೂ 2002ರಿಂದ ಜತೆಯಾಗಿ ವಾಸಿಸುತ್ತಿಲ್ಲ. ನಾವಿಬ್ಬರೂ ಮರಳಿ ಜತೆಯಾಗಿ ಜೀವಿಸುವುದು ಅಸಾಧ್ಯ. ಹಾಗಾಗಿ ನನಗೆ ಆಕೆಯಿಂದ ವಿಚ್ಛೇದನ ನೀಡಬೇಕೆಂದು ನ್ಯಾಯಾಲಯದ ಮುಂದೆ ಭಿನ್ನವಿಸಿಕೊಂಡ.

ಇದನ್ನು ಒಪ್ಪಿಕೊಂಡ ನ್ಯಾಯಾಲಯವು, ಆತನಿಗೆ ಪತ್ನಿಯಿಂದ ವಿಚ್ಛೇದನ ನೀಡಿತು.
ಸಂಬಂಧಿತ ಮಾಹಿತಿ ಹುಡುಕಿ