ಸಿಕ್ಕಿಬಿದ್ದ ಅಕ್ರಮ ವಲಸಿಗ
![](/img/cm/searchGlass_small.png)
ನಾಗ್ಪುರ: ಕಳೆದ 17 ವರ್ಷಗಳಿಂದ ಅಕ್ರಮವಾಗಿ ದೇಶದಲ್ಲಿ ವಾಸಿಸುತ್ತಿದ್ದ ಅಫಘಾನಿಸ್ತಾನ ಪ್ರಜೆಯೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ವನ್ ಅಸ್ಲಾಂ ಖಾನ್ ಆಲಿಯಾಸ್ ಶೇರ್ ಖಾನ್ ಎಂಬಾತನೇ ಈ ಆರೋಪಿ. ಈತ ಅಫ್ಘಾನ್, ಪಾಕಿಸ್ತಾನಗಳಿಗೆ ಮಾಡುತ್ತಿದ್ದ ನಿರಂತರ ಕರೆಗಳನ್ನು ಆಧರಿಸಿ ಪೊಲೀಸರು ಬಲೆ ಬೀಸಿದ್ದರು.