ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದ್ರೋಹಿಗಳ ಬಗ್ಗೆ ಕೇಂದ್ರ ಸುಮ್ಮನಿದೆ, ಯಾಕೆ? (Azadi seminar | Syed Ali Shah Geelani | Arundhati Roy | Kashmir)
Bookmark and Share Feedback Print
 
ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಆಲಿ ಶಾ ಗಿಲಾನಿ ಮತ್ತು ಸಮಾಜ ವಿರೋಧಿಗಳನ್ನು ಬೆಂಬಲಿಸುತ್ತಾ ಬಂದಿರುವ ಆರುಂಧತಿ ರಾಯ್ ಮುಂತಾದವರು ಭಾಗವಹಿಸಿದ್ದ ವಿಚಾರಗೋಷ್ಠಿಯೊಂದರಲ್ಲಿ ದೇಶ ವಿರೋಧಿ ಭಾಷಣಗಳನ್ನು ಬಿಗಿದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಈ ಬಗ್ಗೆ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರಲ್ಲಿ ಪ್ರಶ್ನಿಸಿದರೆ, ಕಾನೂನು ತಜ್ಞರ ಅಭಿಪ್ರಾಯ ಕೇಳಿದ ನಂತರ ಕ್ರಮ ಕೈಗೊಳ್ಳುತ್ತೇವೆ. ಅವರಿಂದ ದೇಶದ್ರೋಹದ ಮಾತುಗಳು ಬಂದಿರುವುದು ಹೌದಾದರೆ, ಕಾನೂನು ಕ್ರಮ ಖಚಿತ ಎಂದಷ್ಟೇ ಹೇಳಿ ನುಣುಚಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ದೆಹಲಿಯಲ್ಲಿ ನಡೆಸಲಾಗಿದ್ದ 'ಆಜಾದಿ' ವಿಚಾರಗೋಷ್ಠಿಗಾಗಿ ಹುರಿಯತ್ ತೀವ್ರವಾದಿ ನಾಯಕ ಗಿಲಾನಿ ದೆಹಲಿಗೆ ಆಗಮಿಸಿದ್ದರು. ಇದರಲ್ಲಿ ಲೇಖಕಿ-ಹೋರಾಟಗಾರ್ತಿ ಆರುಂಧತಿ ರಾಯ್ ಕೂಡ ಭಾಗವಹಿಸಿದ್ದರು.

ಭಾರತಕ್ಕೆ ಕಾಶ್ಮೀರದಿಂದ ಸ್ವಾತಂತ್ರ್ಯ ದೊರೆಯಬೇಕು ಮತ್ತು ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಸಿಗಬೇಕು. ಈಗ ಆರಂಭವಾಗಿರುವ ಚರ್ಚೆ ಉತ್ತಮವಾದುದು. ಭಾರತ ಸರಕಾರ ಎನ್ನುವುದು ಪೊಳ್ಳು ಸೂಪರ್ ಪವರ್. ನನಗೂ ಭಾರತ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಯ್ ಪ್ರಚೋದನಾಕಾರಿ ಭಾಷಣ ಮಾಡಿದ್ದರು.

ತಾವು ಭಾರತ ವಿರೋಧಿಗಳು ಎಂದು ರಾಷ್ಟ್ರ ರಾಜಧಾನಿಯಲ್ಲಿ ಬಹಿರಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಘೋಷಿಸಿದ ಗಿಲಾನಿ ಮತ್ತು ರಾಯ್, ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಹೋರಾಟಗಾರರು ಯಾವುದೇ ತ್ಯಾಗಕ್ಕೂ ಸಿದ್ಧ. ಇದಕ್ಕೆ ಯುವ ಜನತೆ ಮತ್ತು ಉದ್ಯಮಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಬಿಜೆಪಿ ವಾಗ್ದಾಳಿ...
ಇಂತಹ ವಿಚಾರಗೋಷ್ಠಿಗೆ ಸರಕಾರವು ಅವಕಾಶ ನೀಡಿದ್ದೇ ತಪ್ಪು. ಈಗ ಮೂಕ ಪ್ರೇಕ್ಷಕನಂತೆ ಸುಮ್ಮನಿರುವುದು ಸರಿಯಲ್ಲ ಎಂದು ಹೇಳಿರುವ ಬಿಜೆಪಿ ಮುಖಂಡ ಅರುಣ್ ಜೇಟ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಸ್ವೀಕಾರಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರಗೋಷ್ಠಿಯಲ್ಲಿನ ಮಾತುಗಳನ್ನು ಕೇಳಿ ದೇಶಕ್ಕೆ ದೇಶವೇ ಆಘಾತಕ್ಕೊಳಗಾಗಿದೆ. ಇದು ನಡೆದಿರುವುದು ಕೇಂದ್ರ ಸರಕಾರದ ಮೂಗಿ ಕೆಳಗೆ. ದೇಶದ್ರೋಹ ಮತ್ತು ದುರ್ಬೋಧನೆಗಳನ್ನು ಸಹಿಸಿಕೊಂಡಿರುವುದು ಸಾಧ್ಯವಿಲ್ಲ. ಈ ಬಗ್ಗೆ ಸರಕಾರವು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವ ಪಿ. ಚಿದಂಬರಂ, ಗಿಲಾನಿ ಮತ್ತು ಇತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಲಾಗುತ್ತಿದೆ. ಕಾನೂನು ತಜ್ಞರ ಜತೆ ಮಾತುಕತೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಇಡೀ ಭಾಷಣವನ್ನು ವೀಡಿಯೋ ಚಿತ್ರೀಕರಣ ಮಾಡಿರುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಜೇಟ್ಲಿ ಆರೋಪವನ್ನು ತಳ್ಳಿ ಹಾಕಿರುವ ಅವರು, ಕಾನೂನು ಉಲ್ಲಂಘನೆಯಾಗಿದ್ದ ಪಕ್ಷದಲ್ಲಿ ಖಂಡಿತಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ದೆಹಲಿ ಪೊಲೀಸರು ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ